ಜಶ್‌ಪುರ: ದುರದೃಷ್ಟಕರ ಘಟನೆಯೊಂದರಲ್ಲಿ ಛತ್ತೀಸ್‌ಗಢದ ಜಶ್‌ಪುರದಲ್ಲಿ ಶನಿವಾರ ವ್ಯಕ್ತಿಯೊಬ್ಬರನ್ನು ಆನೆಗಳು ತುಳಿದು ಕೊಂದಿವೆ. ಈ ಮೂಲಕ ಜಶ್‌ಪುರದಲ್ಲಿ ಕಾಡಾನೆಗಳ ಭೀತಿ ಇಲ್ಲಿ ಕಡಿಮೆಯಾಗಿಲ್ಲ ಎಂದು ತಿಳಿದುಬಂದಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಮಧ್ಯರಾತ್ರಿ ಆನೆಗಳ ಹಿಂಡು ಮರದಲ್ಲಿ ಹಲಸಿನ ಹಣ್ಣುಗಳನ್ನು ತಿನ್ನಲು ಮನೆ ಬಳಿ ಬಂದಿವೆ. ಹಣ್ಣುಗಳನ್ನು ಕೀಳುವ ಶಬ್ದವನ್ನು ಕೇಳಿದ ಮೂವರು ಸಹೋದರರು ಹೊರಗೆ ಬಂದು ಆನೆಗಳನ್ನು ಓಡಿಸಲು ಟಾರ್ಚ್‌ಗಳನ್ನು ಆನ್ ಮಾಡಿದ್ದಾರೆ. ಆ ವೇಳೆ ಆನೆಯು ತನ್ನ ಸೊಂಡಿಲಿನಿಂದ ಅನುಜ್ ಎಂಬುವರನ್ನು ತುಳಿದು ಕೊಂದಿದೆ.
ಅರಣ್ಯಾಧಿಕಾರಿಗಳು ಸಾವಿಗೀಡಾದ ವ್ಯಕ್ತಿಯ ಕುಟುಂಬಕ್ಕೆ ಮಧ್ಯಂತರ ಪರಿಹಾರವಾಗಿ 25 ಸಾವಿರ ರೂ.ಗಳ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ. ಇಲಾಖೆಗೆ ವಿವರವಾದ ವರದಿಯನ್ನು ಸಲ್ಲಿಸಿದ ನಂತರ ಉಳಿದ ಮೊತ್ತವನ್ನು ಅವರಿಗೆ ಪಾವತಿಸಲಾಗುವುದು. ನಾವು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಮತ್ತು ವಿಧಿವಿಧಾನಗಳು ಪೂರ್ಣಗೊಂಡ ನಂತರ ಉಳಿದ ಮೊತ್ತವನ್ನು ವ್ಯವಸ್ಥೆಗೊಳಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ತಿಂಗಳಲ್ಲಿ ಇದು ಮೂರನೇ ಘಟನೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಹಿಂದೆ ದುಲ್ದುಲಾ ಮತ್ತು ಸಿರಿಂಕೆಲಾ ವ್ಯಾಪ್ತಿಯಲ್ಲಿ ಆನೆಯೊಂದು ವ್ಯಕ್ತಿಯನ್ನು ಕೊಂದು ಹಾಕಿತ್ತು. ಅರಣ್ಯಾಧಿಕಾರಿಗಳ ಪ್ರಕಾರ, ಖರಿಜಾರಿಯಾ ಪ್ರದೇಶದಲ್ಲಿ 20 ಆನೆಗಳು ಮತ್ತು ಜಶ್‌ಪುರದಾದ್ಯಂತ 40 ಆನೆಗಳು ಇವೆಯಂತೆ.
ಇದನ್ನೂ ಓದಿ : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಹಿರಿಯ ಐಪಿಎಸ್ ಅಧಿಕಾರಿಯೇ ಅರೆಸ್ಟ್