ETV Bharat / bharat

ಇದೆಂಥಾ ಪರಿಸ್ಥಿತಿ... ಹುತಾತ್ಮ ಖುದಿರಾಮ್ ಬೋಸ್‌ಗೆ ವಿದ್ಯುತ್ ಬಿಲ್​ ಪಾವತಿಸುವಂತೆ ನೋಟಿಸ್​!

ಬಿಹಾರದ ಮುಜಾಫರ್​ಪುರದ ಕಂಪನಿಬಾಗ್​ನಲ್ಲಿರುವ ಹುತಾತ್ಮ ಖುದಿರಾಮ್​ ಬೋಸ್​ ಸ್ಮಾರಕದ ಅಧಿಕಾರಿಗಳು ಹಲವು ತಿಂಗಳ ವಿದ್ಯುತ್​ ಬಿಲ್​ ಪಾವತಿಸಿಲ್ಲ, ಸುಮಾರು 1,36,943 ರೂ. ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡಿದೆ.

author img

By

Published : Feb 21, 2023, 6:40 PM IST

electricity-department-issued-notice-to-martyr-khudiram-bose-in-muzaffarpur
ಹುತಾತ್ಮ ಖುದಿರಾಮ್ ಬೋಸ್‌ಗೆ ವಿದ್ಯುತ್ ಬಿಲ್​ ಪಾವತಿಸುವಂತೆ ನೋಟಿಸ್​

ಮುಜಾಫರ್‌ಪುರ (ಬಿಹಾರ): ಬಿಹಾರದ ಮುಜಾಫರ್‌ಪುರದಲ್ಲಿ ಹುತಾತ್ಮ ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರಿಗೆ ಬಿಲ್​ ಪಾವತಿಸುವಂತೆ ವಿದ್ಯುತ್​ ಇಲಾಖೆ ನೋಟಿಸ್ ನೀಡಿದೆ. ಒಂದು ವಾರದೊಳಗೆ ವಿದ್ಯುತ್ ಬಿಲ್ ಜಮಾ ಮಾಡಿ, ಇಲ್ಲದಿದ್ದರೆ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರಿಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ರೀತಿ ನೋಟಿಸ್ ಕಳುಹಿಸಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1 ಲಕ್ಷ 36 ಸಾವಿರ ವಿದ್ಯುತ್ ಬಿಲ್ ಬಾಕಿ: ಮುಜಾಫರ್​ಪುರದ ಕಂಪನಿಬಾಗ್ ಎಂಬ ಪ್ರದೇಶದಲ್ಲಿ ದೇಶದ ಇಬ್ಬರು ಹುತಾತ್ಮರಾದ ಖುದಿರಾಮ್ ಬೋಸ್ ಮತ್ತು ಪ್ರಫುಲ್ ಚಂದ್ ಚಾಕಿ ಅವರ ಸ್ಮಾರಕವಿದೆ. ಉತ್ತರ ಬಿಹಾರದ ವಿದ್ಯುತ್ ವಿತರಣಾ ಕಂಪನಿಯಿಂದ ಈ ಸ್ಮಾರಕದಲ್ಲಿ ವಿದ್ಯುತ್ ಸಂಪರ್ಕವನ್ನು ಪೂರೈಸಲಾಗುತ್ತದೆ. ಈ ಸ್ಮಾರಕವನ್ನು ನೋಡಿಕೊಳ್ಳುತ್ತಿರುವ ಸಂಸ್ಥೆ ಹಲವು ತಿಂಗಳುಗಳಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ. ಈಗ ಅದರ ಬಿಲ್ 1 ಲಕ್ಷದ 36 ಸಾವಿರದ 943 ರೂ.ಗೆ ಏರಿಕೆ ಆಗಿದೆ.

ನೋಟಿಸ್​ನಲ್ಲಿ ಹುತಾತ್ಮರ ಹೆಸರು ಉಲ್ಲೇಖ: ಇಷ್ಟು ದೊಡ್ಡ ಮೊತ್ತ ಬಾಕಿ ಇರುವ ಕಾರಣ ವಿದ್ಯುತ್ ಇಲಾಖೆ ಹುತಾತ್ಮ ಯೋಧರಿಗೆ ನೋಟಿಸ್ ಜಾರಿ ಮಾಡಿದೆ. ಒಂದು ವಾರದಲ್ಲಿ ಬಿಲ್ ಜಮಾ ಮಾಡದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ. ಈಗ ಇಂತಹ ಪರಿಸ್ಥಿತಿಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ವಿದ್ಯುತ್ ಕಡಿತದ ಕುರಿತು ನೋಟಿಸ್ ಜಾರಿ ಮಾಡಿದ್ದರಿಂದ ಸ್ಥಳೀಯರು, ವಿದ್ಯುತ್​​ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಾರಕಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಸಾರ್ವಜನಿಕರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ಕೂಡಾ ನೀಡಿದ್ದಾರೆ.

ಶಹೀದ್ ಖುದಿರಾಮ್ ಬೋಸ್ ಮತ್ತು ಪ್ರಫುಲ್ ಚಂದ್ ಚಾಕಿ ಬ್ರಿಟಿಷ್​ ಅಧಿಕಾರಿ ಕಿಂಗ್ಸ್ ಫೋರ್ಡ್ ಕಾರಿನ ಮೇಲೆ ಬಾಂಬ್ ಎಸೆದು ಹತ್ಯೆಗೆ ಯತ್ನಿಸಿದ್ದರು. ಇದಕ್ಕಾಗಿ ಆಗಸ್ಟ್ 11, 1908 ರಂದು ಖುದಿರಾಮ್ ಬೋಸ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಅವರ ನೆನಪಿಗಾಗಿ, ಮುಜಾಫರ್‌ಪುರದ ಕಂಪನಿಬಾಗ್‌ನಲ್ಲಿ ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ. ಇದನ್ನು ಅಂದಿನ ಬಿಹಾರದ ಮುಖ್ಯಮಂತ್ರಿ ಶ್ರೀ ಕೃಷ್ಣ ಸಿಂಗ್ ಉದ್ಘಾಟಿಸಿದ್ದರು.

ಪೂರ್ವ ಮುಜಾಫರ್​ಪುರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಜ್ಞಾನ್​ ಪ್ರಕಾಶ್​ ಈ ಬಗ್ಗೆ ಮಾತನಾಡಿ, “ವಿಷಯ ನಮ್ಮ ಗಮನಕ್ಕೆ ಬಂದಿದೆ. ಸಹರಾ ಏಜೆಸ್ಸಿ ಎಂಬ ಸಂಸ್ಥೆಯು ಹುತಾತ್ಮ ಖುದಿರಾಮ್ ಬೋಸ್ ಸ್ಮಾರಕ ಮತ್ತು ಉದ್ಯಾನವನದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅವರೇ ವಿದ್ಯುತ್ ಬಿಲ್ ಪಾವತಿಸುತ್ತಾರೆ. ಬಿಲ್ ಅನ್ನು ಕಂಪ್ಯೂಟರ್ ಸಾಫ್ಟ್‌ವೇರ್‌ನಿಂದ ರಚಿಸಲಾಗಿರುವುದರಿಂದ, ಖುದಿರಾಮ್ ಬೋಸ್ ಅವರ ಹೆಸರು ಅದರಲ್ಲಿ ಸೇರಿದೆ. ವಿದ್ಯುತ್ ಇಲಾಖೆಯ ಕಾರ್ಯನಿರ್ವಾಹಕರೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ, ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು'' ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸೆಲ್ಫಿ ವಿವಾದ: ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಎಫ್‌ಐಆರ್ ದಾಖಲಿಸಲು ಸ್ಪಪ್ನಾ ಗಿಲ್​​​​​ ಅರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.