ಹೈದರಾಬಾದ್: ಪಂಚರಾಜ್ಯ ಚುನಾವಣಾ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದು, ಈಗಾಗಲೇ ಮತಎಣಿಕೆ ಪ್ರಾರಂಭಗೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ ಆಡಳಿತರೂಢ ಪಕ್ಷ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಉತ್ತರ ಪ್ರದೇಶ, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ಭಾರತೀಯ ಜನತಾ ಪಾರ್ಟಿ, ಗೋವಾದಲ್ಲಿ ಕಾಂಗ್ರೆಸ್ ಮತ್ತು ಪಂಜಾಬ್ನಲ್ಲಿ ಆಪ್ ಮುನ್ನಡೆ ದಾಖಲಿಸಿವೆ.
ಈವರೆಗಿನ ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ 200+, ಎಸ್ಪಿ 74, ಬಿಎಸ್ಪಿ 5, ಕಾಂಗ್ರೆಸ್ 3 ಇತರ 2 ಸ್ಥಾನಗಳಲ್ಲಿ ಮುನ್ನಡೆಯಲಿದ್ದು, ಉತ್ತರಾಖಂಡದಲ್ಲಿ ಬಿಜೆಪಿ 35, ಕಾಂಗ್ರೆಸ್ 20, ಗೋವಾದಲ್ಲಿ ಕಾಂಗ್ರೆಸ್ 18, ಬಿಜೆಪಿ 17, ಪಂಜಾಬ್ನಲ್ಲಿ ಆಪ್ 61, ಕಾಂಗ್ರೆಸ್ 15, ಮಣಿಪುರದಲ್ಲಿ ಬಿಜೆಪಿ 11, ಕಾಂಗ್ರೆಸ್ 7 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ.
ಇದನ್ನೂ ಓದಿರಿ: ಪಂಚರಾಜ್ಯ ಫೈಟ್ ಫಲಿತಾಂಶ: ಯೋಗಿ ಸೇರಿ ಮೂರು ರಾಜ್ಯದ ಸಿಎಂ ಮುನ್ನಡೆ.. ಉತ್ತರಾಖಂಡ ಧಾಮಿ ಹಿನ್ನಡೆ!
Assembly Election Results 2022
UTTAR PRADESH (341/403) | |||||
---|---|---|---|---|---|
BJP+ | SP+ | BSP | INC | OTH | |
Lead/won | 206 | 116 | 9 | 4 | 6 |
PUNJAB (112/117) | |||||
---|---|---|---|---|---|
INC | AAP | SAD+ | BJP+ | OTH | |
23 | 73 | 12 | 3 | 1 |
UTTARAKHAND (69/70) | ||||
---|---|---|---|---|
BJP | INC | AAP | OTH | |
Lead/won | 39 | 26 | 0 | 4 |
GOA (40/40) | |||||
---|---|---|---|---|---|
BJP | INC+ | TMC+ | AAP | OTH | |
18 | 16 | 4 | 0 | 2 |
ಉತ್ತರ ಪ್ರದೇಶದ 403 ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನವಾಗಿದ್ದು, ಈಗಾಗಲೇ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಭಾರತೀಯ ಜನತಾ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಅದರ ಪ್ರಕಾರ ಚುನಾವಣಾ ಫಲಿತಾಂಶದಲ್ಲೂ ಬಿಜೆಪಿ ಆರಂಭಿಕ ಮುನ್ನಡೆ ಪಡೆದುಕೊಂಡಿದೆ.
2017ರ ವಿಧಾನಸಭೆ ಚುನಾವಣೆ ವೇಳೆ ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರ ಸ್ವೀಕಾರ ಮಾಡಿತ್ತು. ಆದರೆ, ಈ ಸಲ ಆಮ್ ಆದ್ಮಿ 50ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.