ETV Bharat / bharat

8 ಎಕರೆ ಜಮೀನು ದಾನ ಮಾಡಿ ಮಾದರಿಯಾದ ವೃದ್ಧೆ.. ಯಾವುದಕ್ಕೆ ಗೊತ್ತಾ!?

ವೃದ್ಧೆಯೊಬ್ಬರು ತಮ್ಮ ಬಳಿಯ 8 ಎಕರೆ ಜಮೀನು ಸರ್ಕಾರಕ್ಕೆ ದಾನ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

Elderly woman land donation bhiwani
Elderly woman land donation bhiwani
author img

By

Published : May 21, 2021, 6:08 PM IST

ಭಿವಾನಿ(ಹರಿಯಾಣ): ಒಂದಿಚು ಭೂಮಿಗೂ ಜನರು ಇತರರ ಪ್ರಾಣ ತೆಗೆಯಲು ಹಿಂದೇಟು ಹಾಕಲ್ಲ. ಅದೇ ಕಾರಣಕ್ಕಾಗಿ ರಕ್ತ ಸಂಬಂಧವನ್ನು ನೋಡದೇ ಕೊಲೆಗಳು ಸಹ ನಡೆದು ಹೋಗಿವೆ. ಆದರೆ ಇಲ್ಲೊಬ್ಬ ವೃದ್ಧೆ ತಮ್ಮ ಬಳಿಯ 8 ಎಕರೆ ಜಮೀನು ಸರ್ಕಾರಕ್ಕೆ ದಾನ ಮಾಡಿ, ಮಾದರಿಯಾಗಿದ್ದಾರೆ.

8 ಎಕರೆ ಜಮೀನು ದಾನ ಮಾಡಿ ಮಾದರಿಯಾದ ವೃದ್ಧೆ

ಹರಿಯಾಣದ ಭಿವಾನಿಯ ಭಿರ್ಮಾದೇವಿ ಒಂದೂವರೆ ಕೋಟಿ ರೂ. ಮೌಲ್ಯದ ಭೂಮಿಯನ್ನ ಗೋಶಾಲೆಗೋಸ್ಕರ ದಾನ ಮಾಡಿ, ಇತರರಿಗೆ ಮಾದರಿಯಾಗಿದ್ದಾರೆ. 1.5 ಕೋಟಿ ರೂ. ಮೌಲ್ಯದ ಆಸ್ತಿ ಇದಾಗಿದೆ. ಬಿರ್ಮಾ ದೇವಿಗೆ ಯಾವುದೇ ಮಕ್ಕಳಿಲ್ಲ. ತನ್ನ ಬಳಿಯ ಭೂಮಿ ಸಂಬಂಧಿಕರಿಗೆ ನೀಡುವ ಬದಲಿಗೆ ಗೋಶಾಲೆಗೆ ನೀಡಲು ನಿರ್ಧರಿಸಿ ತಹಶೀಲ್ದಾರ್​ಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಇದರಿಂದ ತಮಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ. ಇನ್ನು ಬಿರ್ಮಾ ದೇವಿ ಪತಿ ಭಾಗೀರಥ್​ ಸುಮಾರು 10 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಬಿರ್ಮಾ ದೇವಿ ಹೆಸರಿನಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎರಡು ಕಟ್ಟಡ ಸಹ ನಿರ್ಮಾಣ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.