ETV Bharat / bharat

ಜಾರ್ಖಂಡ್‌: ಮದರಸಾದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಜಾರ್ಖಂಡ್​ನ ಸಿಮಡೇಗಾದಲ್ಲಿನ ಕೊಳೆಬಿರಾ ಪೊಲೀಸ್ ಠಾಣಾ ವ್ಯಾಪ್ತಿಯ ಮದರಸಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಳೆಬಿರಾ ಪೊಲೀಸ್ ಠಾಣೆ
ಕೊಳೆಬಿರಾ ಪೊಲೀಸ್ ಠಾಣೆ
author img

By

Published : Dec 12, 2022, 8:48 PM IST

ಸಿಮಡೇಗಾ(ಜಾರ್ಖಂಡ್​): ಇಲ್ಲಿನ ಕೊಳೆಬಿರಾ ಪೊಲೀಸ್ ಠಾಣಾ ವ್ಯಾಪ್ತಿಯ ಮದರಸಾದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿದೆ. ಸಂತ್ರಸ್ತೆಯ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಇಮಾಮ್ ಅಮಿನುಲ್ಲಾ ಅಲಿಯಾಸ್ ಅಮೀನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ಕುಮಾರ್ ತಿಳಿಸಿದ್ದಾರೆ.

ಸಂತ್ರಸ್ತೆಯ ಕುಟುಂಬದವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಬಾಲಕಿ ಉರ್ದು ಕಲಿಯಲು ಭಾನುವಾರ ಮದರಸಾಕ್ಕೆ ಹೋಗಿದ್ದಳು. ಅಧ್ಯಯನ ಮುಗಿದ ನಂತರ ಇಮಾಮ್ ಇತರ ಮಕ್ಕಳನ್ನು ಮನೆಗೆ ಹೋಗಲು ಅನುಮತಿಸಿದ್ದಾರೆ. ಬಾಲಕಿಯನ್ನು ಅಲ್ಲಿಯೇ ಇರಿಸಿಕೊಂಡು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.

ಯಾರಿಗೂ ಹೇಳದಂತೆ ಬೆದರಿಕೆ: ಈ ಘಟನೆಯನ್ನು ಯಾರಿಗೂ ಹೇಳದಂತೆ ಇಮಾಮ್ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಮನೆಗೆ ಬಂದ ಬಾಲಕಿ ತನ್ನ ಕುಟುಂಬಸ್ಥರಿಗೆ ಎಲ್ಲವನ್ನೂ ಹೇಳಿದ್ದಾಳೆ. ಇದರೊಂದಿಗೆ 2 ತಿಂಗಳ ಹಿಂದೆಯೂ ತನ್ನೊಂದಿಗೆ ಇಂತಹ ಘಟನೆ ನಡೆದಿತ್ತು ಎಂದು ಆಕೆ ಹೇಳಿದ್ದಾಳೆ. ಸಂಬಂಧಿಕರು ಅಂಜುಮನ್ ಸಂಸ್ಥೆಯ ಅಧಿಕಾರಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಮಾಮ್ ವಿರುದ್ಧ ಕ್ರಮಕ್ಕೆ ಒತ್ತಾಯ: ಘಟನೆಯ ಮಾಹಿತಿ ತಿಳಿದ ತಕ್ಷಣ ಅಂಜುಮನ್ ಸಂಸ್ಥೆಯ ಅಧಿಕಾರಿಗಳು ಸೋಮವಾರ ಬೆಳಗ್ಗೆ ಮದರಸಾದಲ್ಲಿ ತುರ್ತು ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದಾರೆ. ಆದರೆ, ಘಟನೆ ಬಳಿಕ ಆರೋಪಿ ಇಮಾಮ್ ಅಮೀನುಲ್ಲಾ ಅಲಿಯಾಸ್ ಅಮೀನ್ ಮದರಸಾ ಬಿಟ್ಟು ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಕುಟುಂಬದೊಂದಿಗೆ ಅಂಜುಮನ್ ಅಧಿಕಾರಿಗಳು ಇಂದು ಪೊಲೀಸ್ ಠಾಣೆಗೆ ಆಗಮಿಸಿ ಇಮಾಮ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಘಟನೆಯನ್ನು ಖಂಡಿಸಿದ ಅಂಜುಮನ್ ಸಂಸ್ಥೆಯ ಸದರ್ ಮುಮ್ತಾಜ್ ಆಲಂ, ಇಡೀ ಅಂಜುಮನ್ ಮತ್ತು ಸಮಾಜ ಸಂತ್ರಸ್ತ ಕುಟುಂಬದೊಂದಿಗೆ ನಿಂತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಲಕಿ ಮೇಲೆ‌ ಅತ್ಯಾಚಾರಕ್ಕೆ ಯತ್ನ ಆರೋಪ: ವೃದ್ಧನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದ ಸಂತ್ರಸ್ತೆಯ ಕುಟುಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.