ವಾರಂಗಲ್(ತೆಲಂಗಾಣ): ಎಂಟು ವರ್ಷದ ಬಾಲಕನಿಗೆ ಶಸ್ತ್ರಚಿಕಿತ್ಸೆಗೂ ಮುಂಚಿತವಾಗಿ ವೈದ್ಯರು ಅರವಳಿಕೆ ಮದ್ದು(ಅನಸ್ತೇಶಿಯಾ) ನೀಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆತ ಹೃದಯಾಘಾತಕ್ಕೊಳಗಾದ ಆತ ಬಳಿಕ ಮೃತಪಟ್ಟಿದ್ದಾನೆ. ಕಳೆದ ಮಂಗಳವಾರ ವಾರಂಗಲ್ನ ಎಂಜಿಎಂ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಎಂಜಿಎಂ ಆಸ್ಪತ್ರೆಯಲ್ಲಿ 8 ವರ್ಷದ ಬಾಲಕನ ಕೈಗೆ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ವೈದ್ಯರು ಶಸ್ತ್ರಚಿಕಿತ್ಸೆಗೆ ಮುಂದಾದಾಗ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಈಜಲು ಹೋಗಿ ಬಾಲಕ ಸಾವು: 4 ಗಂಟೆ ಉಪ್ಪಿನಲ್ಲಿ ಶವವಿಟ್ಟು ಬದುಕಿಸಲು ಪ್ರಯತ್ನ!
ಪ್ರಕರಣದ ಸಂಪೂರ್ಣ ವಿವರ: ವಾರಂಗಲ್ ಜಿಲ್ಲೆಯ ಲಿಂಗ್ಯ ತಾಂಡಾದ ಭೂಕ್ಯ ಶಿವ ಮತ್ತು ಲಲಿತಾ ದಂಪತಿಯ ಕಿರಿಯ ಪುತ್ರ ನಿಹಾನ್ (8) ಸೆ. 4ರಂದು ನಡೆದ ಅಪಘಾತದಲ್ಲಿ ಬಲಗೈ ಮುರಿದುಕೊಂಡಿದ್ದ. ಅದೇ ಎಂಜಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ವೈದ್ಯರು ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಲು ಬೆಳಗ್ಗೆ 10:30ಕ್ಕೆ ಆಪರೇಷನ್ ಥಿಯೇಟರ್ಗೆ ಕರೆದುಕೊಂಡು ಹೋಗಿದ್ದರು.
ಅರವಳಿಕೆ ನೀಡುತ್ತಿದ್ದಾಗ ಆತನಿಗೆ ಹಠಾತ್ ಹೃದಯಾಘಾತವಾಗಿದೆ. ತಕ್ಷಣವೇ RICU ವಾರ್ಡ್ಗೆ ಕರೆದೊಯ್ಯಲಾಗಿದೆ. ಈ ವೇಳೆ ಕೃತಕ ಉಸಿರಾಟ ಯಂತ್ರದ ಮೂಲಕ ಆತನನ್ನು ಉಳಿಸಲು ವೈದ್ಯರು ಪ್ರಯತ್ನಿಸಿದ್ದು, ಅದು ವಿಫಲವಾಗಿದೆ. ಬಾಲಕ ಮೃತಪಟ್ಟಿದ್ದಾನೆಂದು ವೈದ್ಯರು ಮಧ್ಯಾಹ್ನ 1 ಗಂಟೆ ನಂತರ ಘೋಷಣೆ ಮಾಡಿದ್ದಾರೆ. ಹೀಗಾಗಿ, ಪೋಷಕರು ಹಾಗೂ ಕುಟುಂಬಸ್ಥರು ಆಸ್ಪತ್ರೆ ಎದುರು ಜಮಾಯಿಸಿ, ಪ್ರತಿಭಟನೆ ನಡೆಸಿರುವ ಘಟನೆ ಸಹ ನಡೆದಿದೆ. ಬಾಲಕ ಸಾವನ್ನಪ್ಪಿ ಮೂರು ಗಂಟೆಯಾದ್ರೂ ನಮಗೆ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯರ ಮೇಲೆ ಹಲ್ಲೆಗೆ ಯತ್ನ: ಬಾಲಕನ ಕಳೆದುಕೊಂಡಿರುವ ಆಘಾತದಲ್ಲಿ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಸಹ ನಡೆದಿದ್ದು, ವೈದ್ಯರು ತಡೆದಿದ್ದಾರೆ. ಬಾಲಕನ ಸಾವಿನ ಬಗ್ಗೆ ತನಿಖೆ ನಡೆಸಲು ಹಿರಿಯ ವೈದ್ಯರನ್ನೊಳಗೊಂಡ ತ್ರಿಸದಸ್ಯ ಸಮಿತಿ ರಚನೆ ಮಾಡಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.