ETV Bharat / bharat

ಸಂದರ್ಶನ: ಭಾರತದಲ್ಲಿ ಶೈಕ್ಷಣಿಕ ತುರ್ತು ಪರಿಸ್ಥಿತಿ..ಇಲ್ಲಿದೆ ಶಿಕ್ಷಣ ತಜ್ಞರ ಅಭಿಪ್ರಾಯ - Education Specialist and Padma Shri awardee Krishna Kumar

ದೇಶದ ಕೋಟ್ಯಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಪರಿಸ್ಥಿತಿಯ ತೀವ್ರತೆ ಮನಗಾಣದಿದ್ದರೆ, ಶಿಕ್ಷಣದಲ್ಲಿ ದೇಶ ಸಾಧಿಸಿದ ಎಲ್ಲ ಪ್ರಗತಿಯೂ ನಷ್ಟವಾಗುತ್ತದೆ ಎಂದು ಶಿಕ್ಷಣ ತಜ್ಞ ಮತ್ತು ಪದ್ಮಶ್ರೀ ಪುರಸ್ಕೃತ ಕೃಷ್ಣ ಕುಮಾರ್‌ ತಿಳಿಸಿದ್ದಾರೆ.

students
ವಿದ್ಯಾರ್ಥಿಗಳು
author img

By

Published : Apr 27, 2021, 10:32 PM IST

ಹೈದರಾಬಾದ್​: ಕೋವಿಡ್-19 ನಿಂದಾಗಿ ಇಡೀ ದೇಶದ ಕೋಟ್ಯಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸದಿದ್ದರೆ, ಇದಕ್ಕೆ ಭಾರಿ ದಂಡ ತೆರಬೇಕಾಗಬಹುದು ಎಂದು ಶಿಕ್ಷಣ ತಜ್ಞ ಮತ್ತು ಪದ್ಮಶ್ರೀ ಪುರಸ್ಕೃತ ಕೃಷ್ಣ ಕುಮಾರ್‌ ಹೇಳಿದ್ದಾರೆ.

ಪರಿಸ್ಥಿತಿಯ ತೀವ್ರತೆಯನ್ನು ಮನಗಾಣದಿದ್ದರೆ, ಶಿಕ್ಷಣದಲ್ಲಿ ದೇಶ ಸಾಧಿಸಿದ ಎಲ್ಲ ಪ್ರಗತಿಯೂ ನಷ್ಟವಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ. ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಕೌನ್ಸಿಲ್‌ (ಎನ್‌ಸಿಇಆರ್‌ಟಿ) ನಿರ್ದೇಶಕರಾಗಿ ಕೃಷ್ಣ ಕುಮಾರ್‌ ಕಾರ್ಯನಿರ್ವಹಿಸಿದ್ದಾರೆ.

ಮುಚ್ಚಿದ ಶಾಲೆಗಳನ್ನು ತೆರೆಯಲು ಮತ್ತು ಶಾಲೆ ತೊರೆದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ಸಹಾಯವನ್ನು ಒದಗಿಸಬೇಕು. ಇದೆಲ್ಲಕ್ಕೂ ಮೊದಲು, ಶಾಲೆಗೆ ಹೋಗುವ ಮಕ್ಕಳ ಮೇಲೆ ಸಾಂಕ್ರಾಮಿಕ ರೋಗ ಮಾಡಿದ ಪರಿಣಾಮ ಅರ್ಥ ಮಾಡಿಕೊಳ್ಳಲು ಸಮಗ್ರ ಸಮೀಕ್ಷೆ ನಡೆಸಬೇಕು ಎಂದು ಅವರು ಹೇಳಿದ್ದಾರೆ. ಈನಾಡು ಜೊತೆಗೆ ನಡೆಸಿದ ಸಂದರ್ಶನದಲ್ಲಿ, ಭಾರತದಲ್ಲಿನ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಹಲವು ಸಲಹೆಗಳನ್ನು ಮಾಡಿದ್ದಾರೆ. ಸಂದರ್ಶನದ ಸಾರಾಂಶ ಇಲ್ಲಿದೆ.

ಎರಡನೇ ಅಲೆಯು ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ತಮ್ಮ ಊರುಗಳಿಗೆ ಮರಳಿದ ಲಕ್ಷಾಂತರ ವಲಸೆ ಕೆಲಸಗಾರರ ಮಕ್ಕಳ ಶೈಕ್ಷಣಿಕ ಸ್ಥಿತಿಯ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ. ಮೆಟ್ರೋ ನಗರಗಳಲ್ಲೂ, ಭಾರಿ ಸಂಖ್ಯೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮೊದಲ ಅಲೆಯ ನಂತರ ಕೆಲಸಗಾರರು ನಗರಗಳಿಗೆ ಮರಳಿದ್ದರೂ, ತಮ್ಮ ಜೊತೆಗೆ ಅವರು ಮಕ್ಕಳನ್ನು ಕರೆದುಕೊಂಡು ಹೋಗಿಲ್ಲ. ಹಲವು ಖಾಸಗಿ ಶಾಲೆಗಳು ದೇಶದ ಹಲವೆಡೆ ಮುಚ್ಚಿವೆ. ಈ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸ್ಥಿತಿ ಯಾರಿಗೂ ಗೊತ್ತಿಲ್ಲ.

ಪರಿಣಾಮವನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡಬಹುದಿತ್ತು? ಈಗ ಅವು ಯಾವ ಕ್ರಮಗಳನ್ನು ಕೈಗೊಳ್ಳಬಹುದು?

ಮೊದಲು, ಕೋವಿಡ್‌-19 ನಿಂದ ವಿದ್ಯಾರ್ಥಿಗಳ ಮೇಲೆ ಆಗಿರುವ ಪರಿಣಾಮದ ಕುರಿತು ಸಮಗ್ರ ಸಮೀಕ್ಷೆಯನ್ನು ನಡೆಸಬೇಕು. ವಿಶ್ವಾಸಾರ್ಹ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಬೇಕು. ಕ್ಷೇತ್ರ ಮಟ್ಟದ ಡೇಟಾ ಇಲ್ಲದೇ ನಿಖರವಾಗಿಲ್ಲದೇ ಯೋಜನೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಕಳೆದ ಒಂದು ವರ್ಷದಲ್ಲಿ, ಬಿಸಿಯೂಟ ಯೋಜನೆ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ, ಇದು ಶಾಲೆಗೆ ಹೋಗುವ ಮಗುವಿನ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದನ್ನು ವಿಶ್ಲೇಷಣೆ ಮಾಡಬೇಕಿದೆ. ಮುಚ್ಚಿದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಎಲ್ಲಿದ್ದಾರೆ ಎಂದು ತಿಳಿದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಈ ಪೈಕಿ ಕೆಲವರು ಸರ್ಕಾರಿ ಶಾಲೆಗೆ ಸೇರಿರಬಹುದು. ಆದರೆ, ನಮಗೆ ಸಂಖ್ಯೆಗಳು ಅಗತ್ಯವಿವೆ.

ಆಗ ಮಾತ್ರ, ನಾವು ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸ್ಥಳ ಮತ್ತು ಬೋಧಕ ಸಿಬ್ಬಂದಿಯನ್ನು ಒದಗಿಸಲು ಸಾಧ್ಯವಾಗುತ್ತದೆ. ಭಾರಿ ಸಂಖ್ಯೆಯ ಮಕ್ಕಳು, ಅದರಲ್ಲೂ ಗ್ರಾಮೀಣ ಬಡ ಕುಟುಂಬದ ಹೆಣ್ಣುಮಕ್ಕಳು ಮತ್ತು ವಲಸೆ ಕಾರ್ಮಿಕರ ಮಕ್ಕಳು ಶಾಲೆ ಬಿಟ್ಟು, ಕೂಲಿ ಕಾರ್ಮಿಕರಾಗಿದ್ದಾರೆ ಎಂಬುದು ಕಂಡುಬರುತ್ತಿದೆ. ನಾವು ಡೇಟಾ ಸಂಗ್ರಹಿಸಿದರೆ, ಅವರನ್ನು ಪುನಃ ಶಾಲೆಗೆ ಕರೆತರಲು ಯೋಜನೆಯನ್ನು ರೂಪಿಸಬಹುದು ಮತ್ತು ಅನುಷ್ಠಾನಗೊಳಿಸಬಹುದು.

ಸಿಬಿಎಸ್‌ಇ ಮತ್ತು ರಾಜ್ಯ ಮಂಡಳಿಗಳು ಪರೀಕ್ಷೆಗಳನ್ನು ರದ್ದು ಮಾಡಿವೆ ಅಥವಾ ಮುಂದೂಡಿವೆ. ಇದರ ಪರಿಣಾಮ ಏನಾಗಬಹುದು?

10ನೇ ತರಗತಿ ಪರೀಕ್ಷೆ ರದ್ದು ಮಾಡುವುದು ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡುವುದು ಸಕಾರಣವಾದ ನಿರ್ಧಾರವಾಗಿದೆ. ಅಷ್ಟಕ್ಕೂ, 12ನೇ ತರಗತಿ ವಿದ್ಯಾರ್ಥಿಗಳು ಕಳೆದ ವರ್ಷ ಕೇವಲ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಿದ್ದರು. ಹೀಗಾಗಿ, ಪರೀಕ್ಷೆಗಳನ್ನೂ ಆನ್‌ಲೈನ್‌ನಲ್ಲಿ ನಡೆಸಬಹುದು. ಇವು ಯಾವುದು ಅಸಾಧ್ಯವಾದುದಲ್ಲ. ಅಗತ್ಯವಿರುವ ಮಕ್ಕಳಿಗೆ ಡಿಜಿಟಲ್ ಸಾಧನಗಳನ್ನು ತಾತ್ಕಾಲಿಕವಾಗಿ ಒದಗಿಸಬಹುದು. ಸದ್ಯ, ಹಲವು ವಿಶ್ವವಿದ್ಯಾಲಯಗಳು 1ನೇ ವರ್ಷದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆಗಳನ್ನು ನಡೆಸುತ್ತಿವೆ.

ಬಡವರು ಮತ್ತು ಶ್ರೀಮಂತರ ಮಧ್ಯದ ಅಂತರವು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಈ ಅಂತರವನ್ನು ನಿವಾರಿಸುವುದು ಹೇಗೆ?

ಈ ಅಂತರವು ಸಾಂಕ್ರಾಮಿಕ ರೋಗಕ್ಕೂ ಮೊದಲೇ ಇತ್ತು. ಇದು ಈಗ ಇನ್ನಷ್ಟು ಹೆಚ್ಚಾಗಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಶಿಕ್ಷಕರ ಕನಿಷ್ಠ ವೇತನವನ್ನು ನಿಗದಿಪಡಿಸಬೇಕು. ಕನಿಷ್ಠ ವೇತನವನ್ನು ಒದಗಿಸದ ಖಾಸಗಿ ಶಿಕ್ಷಕರಿಗೆ ಸರ್ಕಾರ ಹಣಕಾಸು ನೆರವನ್ನು ಒದಗಿಸಬೇಕು. ಈ ಮೂಲಕ, ನಾವು ಕುಶಲ ಶಿಕ್ಷಕರನ್ನು ನೇಮಿಸಿಕೊಳ್ಳಬಹುದು. ಇದೇ ರೀತಿ, ಸಾಂಕ್ರಾಮಿಕ ರೋಗದಿಂದಾಗಿ ಮುಚ್ಚಿದ ಶಾಲೆಗಳಿಗೆ ಮೂಲ ಸೌಕರ್ಯವನ್ನು ಒದಗಿಸುವ ಮೂಲಕ ಸರ್ಕಾರ ನೆರವು ನೀಡಬೇಕು. ಇದನ್ನು ಹೊರೆ ಎಂದು ಪರಿಗಣಿಸುವಂತಿಲ್ಲ. ಎಲ್ಲ ಮಕ್ಕಳೂ ಶಾಲೆಗೆ ವಾಪಸಾದರೆ, ಸೂಕ್ತ ಸೌಲಭ್ಯ ಮತ್ತು ಸಿಬ್ಬಂದಿಯನ್ನು ಒದಗಿಸಲು ಸರ್ಕಾರಕ್ಕೆ ಭಾರಿ ವೆಚ್ಚವಾಗುತ್ತದೆ. ಆಡಳಿತಶಾಹಿ ವಿಳಂಬದಿಂದ ಇದರ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಆದರೆ, ಶಿಕ್ಷಣದ ಸ್ಥಿತಿಯನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುವುದು ಅವಶ್ಯವಾಗಿದೆ.

4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೂ ಡಿಜಿಟಲ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಇದು ಅವರ ಮೇಲೆ ಯಾವ ಪರಿಣಾಮ ಬೀರುತ್ತಿದೆ?

ಭಾರತವನ್ನು ಹೊರತುಪಡಿಸಿ, ಯಾವುದೇ ದೇಶದಲ್ಲಿ ಕಿಂಡರ್‌ಗಾರ್ಟನ್‌ ಮತ್ತು ಪ್ರೀಸ್ಕೂಲ್‌ ಮಕ್ಕಳಿಗೆ ಇ - ತರಗತಿಗಳನ್ನು ನಡೆಸುತ್ತಿಲ್ಲ. ಮಕ್ಕಳ ಮನಃಶಾಸ್ತ್ರ ಮತ್ತು ವಿಕಸನದ ದೃಷ್ಟಿಯಿಂದ ನೋಡುವುದಾದರೆ, ಅವರ ಮಾನಸಿಕ ಸ್ಥಿತಿಗೆ ಇದು ಉತ್ತಮವಲ್ಲ. ವಯಸ್ಕರು ಮತ್ತು ಹೆಚ್ಚು ವಯಸ್ಸಿನ ಮಕ್ಕಳ ಮೂಲಕ ಮಕ್ಕಳಿಗೆ ಶಿಕ್ಷಣ ಒದಗಿಸುವ ವಿಧಾನವನ್ನು ಕಂಡುಕೊಳ್ಳುವ ಮೂಲಕ ನಾವು ಇದರಲ್ಲಿ ಪರಿಹಾರ ಕಂಡುಕೊಳ್ಳಬಹುದು. ನನ್ನ ಅಭಿಪ್ರಾಯದ ಪ್ರಕಾರ, ಆನ್‌ಲೈನ್ ತರಗತಿಗಳಿಗೆ ಹಾಜರಾದ 4 ವರ್ಷದ ಮಕ್ಕಳು ಸಾಂಕ್ರಾಮಿಕ ರೋಗ ಮುಗಿದ ನಂತರ ಕಣ್ಣಿನ ದೃಷ್ಟಿ ಮತ್ತು ಇತರ ಪ್ರಗತಿ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ. ಈ ವಯಸ್ಸಿನ ಮಕ್ಕಳಿಗೆ ಕಠಿಣ ಕಲಿಕೆ ವೇಳಾಪಟ್ಟಿಯ ಅಗತ್ಯವಿರುವುದಿಲ್ಲ. ಅವರಿಗೆ ಪ್ರಾಥಮಿಕ ಬೋಧನೆಯನ್ನು ಒದಗಿಸಿ, ಮುಕ್ತವಾಗಿ ಬಿಡಬಹುದು.

ಸಾಂಕ್ರಾಮಿಕ ರೋಗದಿಂದಾಗಿ ಕೋಟ್ಯಂತರ ಜನರು ಜೀವನ ಕಳೆದುಕೊಂಡಿದ್ದಾರೆ. ಇಂತಹ ಕುಟುಂಬದ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಬಹುದು?

ಅಂತಹ ಎಲ್ಲ ವಿದ್ಯಾರ್ಥಿಗಳಿಗೂ ಹಣಕಾಸು ಸೌಲಭ್ಯವನ್ನು ಒದಗಿಸಬೇಕು. ಹಿಂದುಳಿದ ಮತ್ತು ಪ್ರಾಥಮಿಕ ಶಿಕ್ಷಣವನ್ನು ಪಡೆಯಲಾಗದ ಕೋಟ್ಯಂತರ ಮಕ್ಕಳಿದ್ದಾರೆ. ಸಮೀಕ್ಷೆ ನಡೆಸಿದ ನಂತರ, ಪ್ರತಿ ಹಂತಕ್ಕೂ ಎಷ್ಟು ಸಹಾಯ ಅಗತ್ಯವಿದೆ ಎಂದು ಸರ್ಕಾರ ನಿರ್ಧರಿಸಬಹುದು. ಲಾಕ್‌ಡೌನ್‌ ಸಮಯದಲ್ಲಿ ಮುಚ್ಚಿದ ಖಾಸಗಿ ಶಾಲೆಗಳಿಗೆ ಸರ್ಕಾರ ಹಣಕಾಸಿನ ಸಹಾಯವನ್ನು ಒದಗಿಸಬೇಕು. ಸದ್ಯ ಈಗ ಖಾಸಗಿ ಅಥವಾ ಸಾರ್ವಜನಿಕ ಶಾಲೆಗಳು ಎಂಬ ಭೇದ ಮುಖ್ಯವಲ್ಲ. ಶಾಲೆಯಲ್ಲಿ ಮಕ್ಕಳಿದ್ದಾರೆಯೇ ಎಂಬುದು ಮುಖ್ಯವಾಗಬೇಕು. ಸನ್ನಿವೇಶ ಸುಧಾರಿಸಿದ ನಂತರ, ನೆರವನ್ನು ಮುಂದುವರಿಸಬೇಕೆ ಎಂಬುದನ್ನು ಸರ್ಕಾರ ಪರಿಶೀಲಿಸಬಹುದು. ಈ ಕ್ಷಣದಲ್ಲಿ, ನಾವು ವಿಪತ್ತಿನ ಸನ್ನಿವೇಶದಲ್ಲಿದ್ದೇವೆ. ಇದಕ್ಕೆ ಅನುಗುಣವಾಗಿ ನಾವು ಪ್ರತಿಕ್ರಿಯಿಸಬೇಕು. ಇಲ್ಲವಾದರೆ, ದೇಶ ಹಿಂದಕ್ಕೆ ಹೆಜ್ಜೆ ಇಡಲು ಆರಂಭಿಸುತ್ತದೆ. ಹೀಗಾಗಿ, ಸದ್ಯದ ಸ್ಥಿತಿಯನ್ನು ದೇಶದ ಶೈಕ್ಷಣಿಕ ತುರ್ತು ಪರಿಸ್ಥಿತಿ ಎಂದು ಪರಿಗಣಿಸಬೇಕು.

ಎನ್‌. ವಿಶ್ವ ಪ್ರಸಾದ್, ಹಿರಿಯ ಪತ್ರಕರ್ತರು, ಈನಾಡು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.