ETV Bharat / bharat

ಲಂಚ ಪಡೆದ ಆರೋಪ: ಇಡಿ ಅಧಿಕಾರಿಗೆ ಹೆಚ್ಚುವರಿ ಪೊಲೀಸ್​ ಕಸ್ಟಡಿ ವಿಧಿಸಿದ ನ್ಯಾಯಾಲಯ

author img

By ETV Bharat Karnataka Team

Published : Dec 12, 2023, 11:00 PM IST

ಲಂಚ ಪಡೆದ ಆರೋಪ ಸಂಬಂಧ ಮಧುರೈನ ಇಡಿ ಅಧಿಕಾರಿಗೆ ನ್ಯಾಯಾಲಯವು 2 ದಿನದ ಹೆಚ್ಚುವರಿ ಪೊಲೀಸ್​ ಕಸ್ಟಡಿ ವಿಧಿಸಿದೆ.

Etv Bharat
ಲಂಚ ಪಡೆದ ಆರೋಪ: ಇಡಿ ಅಧಿಕಾರಿಗೆ ಹೆಚ್ಚುವರಿ ಪೊಲೀಸ್​ ಕಸ್ಟಡಿ ವಿಧಿಸಿದ ನ್ಯಾಯಾಲಯ

ದಿಂಡಿಗಲ್​(ತಮಿಳುನಾಡು) : ಲಂಚ ಪಡೆದ ಆರೋಪ ಪ್ರಕರಣದಲ್ಲಿ ತಮಿಳುನಾಡಿನ ಜಾರಿ ನಿರ್ದೇಶನಾಲಯ ಅಧಿಕಾರಿಯನ್ನು ಎರಡು ದಿನಗಳ ಹೆಚ್ಚುವರಿ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ಮುಖ್ಯ ಕ್ರಿಮಿನಲ್ ಜುಡಿಷಿಯಲ್​ ಮ್ಯಾಜಿಸ್ಟ್ರೇಟ್​ನ ನ್ಯಾಯಾಧೀಶೆ ಮೋಹನಾ ಅವರು ಈ ಆದೇಶ ನೀಡಿದ್ದಾರೆ.

ಕಳೆದ ಡಿಸೆಂಬರ್​ 1ರಂದು ದಿಂಡಿಗಲ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಾದ ಡಾ. ಸುರೇಶ್ ಬಾಬು ಅವರಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪ ಮಧುರೈ ಮೂಲದ ಜಾರಿ ನಿರ್ದೇಶನಾಲಯ ಅಧಿಕಾರಿ ಅಂಕಿತ್​ ತಿವಾರಿ ಅವರ ಮೇಲಿದೆ. ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಹಣ ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಸುಮಾರು 15 ಗಂಟೆಗಳ ದೀರ್ಘ ವಿಚಾರಣೆ ನಡೆಸಿದ ಮುಖ್ಯ ಕ್ರಿಮಿನಲ್ ಜುಡಿಷಿಯಲ್​ ಮ್ಯಾಜಿಸ್ಟ್ರೇಟ್​ನ ನ್ಯಾಯಾಧೀಶೆ ಮೋಹನಾ ಅವರು ಡಿಸೆಂಬರ್​ 15ರ ತನಕ ಪೊಲೀಸ್​ ಕಸ್ಟಡಿಯನ್ನು ವಿಧಿಸಿದರು.

ಕಳೆದ ಡಿಸೆಂಬರ್​ 5ರಂದು ಅರ್ಜಿದಾರರಿಗೆ ಜಾಮೀನು ನೀಡುವಂತೆ ಅರ್ಜಿದಾರರ ಪರ ವಕೀಲ ವಿವೇಕ್​ ಭಾರತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಅರ್ಜಿ ತಿರಸ್ಕರಿಸಿತ್ತು. ಬಳಿಕ ಡಿಸೆಂಬರ್​ 12ರಂದು ಪೊಲೀಸ್​ ಅಧಿಕಾರಿಗಳು ಮತ್ತೊಂದು ಆರೋಪಿಯನ್ನು ವಿಚಾರಣೆ ನಡೆಸಲು ಮೂರು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡುವಂತೆ ಕೋರಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ , ವಾದ ಪ್ರತಿವಾದ ಆಲಿಸಿ ಎರಡು ದಿನಗಳ ಕಾಲ ಪೊಲೀಸ್​ ಕಸ್ಟಡಿ ವಿಧಿಸಿದೆ. ಡಿಸೆಂಬರ್​ 14ರ ಸಂಜೆ ಐದು ಗಂಟೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಸೂಚಿಸಿದೆ.

ಚಿನ್ನದ ವ್ಯಾಪಾರಿಯಿಂದ ಲಂಚ ಪಡೆದ ಐಟಿ ಅಧಿಕಾರಿ ಬಂಧನ : ಚಿನ್ನದ ವ್ಯಾಪಾರಿಯೊಬ್ಬರ ಬಳಿ ಲಂಚ ಸ್ವೀಕರಿಸುತ್ತಿದ್ದ ಆದಾಯ ತೆರಿಗೆ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಪೊಲೀಸರು ವಶಕ್ಕೆ ಪಡೆದಿದ್ದ ಘಟನೆ ಬೆಳಗಾವಿಯಲ್ಲಿ ಕಳೆದ ಅಕ್ಟೋಬರ್​ ತಿಂಗಳಲ್ಲಿ ನಡೆದಿತ್ತು. ಚಿಕ್ಕೋಡಿ ತಾಲೂಕಿನ ಅಂಕಲಿಯ ಪರಶುರಾಮ ಬಂಕಾಪುರ ಎಂಬ ಚಿನ್ನಾಭರಣ ಅಂಗಡಿ ಮಾಲೀಕನಿಗೆ ಹಣ ನೀಡುವಂತೆ ಐಟಿ ಅಧಿಕಾರಿ ಅವಿನಾಶ ಟೊನಪೆ ಕಿರುಕುಳ ನೀಡಿದ್ದರು. ಈ ಸಂಬಂಧ ಚಿನ್ನದ ವ್ಯಾಪಾರಿ ಎಸಿಪಿ ನಾರಾಯಣ ಭರಮನಿ ಅವರಿಗೆ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಐಟಿ ಅಧಿಕಾರಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು.

ಇದನ್ನೂ ಓದಿ : ಲೋಕಾಯುಕ್ತ ದಾಳಿ: ₹20 ಸಾವಿರ ಲಂಚ, ಸಿಕ್ಕಿಬಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.