ಕೋಲ್ಕತ್ತಾ: ಜಾರಿ ನಿರ್ದೇಶನಾಲಯ (ಇಡಿ) ಇಂದು ಕೋಲ್ಕತ್ತಾದ 10 ಕಡೆ ದಾಳಿ ನಡೆಸಿ ಹಲವರ ಬೆವರಿಳಿಸಿದೆ. ನಕಲಿ ಲಸಿಕೆ ನೀಡಿದ ಪ್ರಕರಣದಲ್ಲಿ ಲಿಂಕ್ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.
ಈ ದಾಳಿಯನ್ನ ಇಡಿ ಅಧಿಕಾರಿಗಳು ಸಹ ದೃಢಪಡಿಸಿದ್ದಾರೆ. ಈ ದಾಳಿಗೂ ಮೊದಲು ದೇಬಂಜನ್ ದೇಬ್ ಎಂಬ ವ್ಯಕ್ತಿಯನ್ನ ಎಸ್ಐಟಿ ಪೊಲೀಸರು ಬಂಧಿಸಿದ್ದರು. ದೇಬ್ ನಕಲಿ ಐಎಎಸ್ ಆಫೀಸರ್ ಸೋಗಿನಲ್ಲಿ ನಕಲಿ ವ್ಯಾಕ್ಸಿನೇಷನ್ ಡೈವ್ ಆಯೋಜನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ವಿಶೇಷ ತನಿಖಾ ದಳ ಜುಲೈ 3ರರಂದು ದೇಬಂಜನ್ ದಾಸ್ ಅವರ ಆಫೀಸ್ ಮೇಲೆ ದಾಳಿ ಮಾಡಿತ್ತು. ಈ ವೇಳೆ ನಕಲಿ ಲಸಿಕೆಗೆ ಸಂಬಂಧಿಸಿದಂತೆ ಎಲ್ಲ ಪರಿಕರ,ಸ್ಲಿಪ್, ನಕಲಿ ಟೆಂಡರ್ ದಸ್ತಾವೇಜುಗಳನ್ನು ವಶಕ್ಕೆ ಪಡೆಯಲಾಗಿತ್ತು.
ಜೂನ್ 25 ರಂದು ನಕಲಿ ವ್ಯಾಕ್ಸಿನೇಷನ್ ಡೈವ್ ಸಂಬಂಧ ಪಟ್ಟಂತೆ ವಿಶೇಷ ತನಿಖಾ ದಳವನ್ನು ರಚನೆ ಮಾಡಲಾಗಿತ್ತು. ಟಿಎಂಸಿ ಎಂಪಿ ಮಿಮಿ ಚಕ್ರಬರ್ತಿ ಈ ಬಗ್ಗೆ ಆರೋಪ ಮಾಡಿದ್ದರು. ಅಷ್ಟೇ ಅಲ್ಲ ಜೂನ್ 26ರಂದು ಪಶ್ಚಿಮ ಬಂಗಾಳ ಸರ್ಕಾರ ಈ ಸಂಬಂಧ ನಾಲ್ಕು ಸದಸ್ಯರ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಸಹ ಮಾಡಿತ್ತು.