ETV Bharat / bharat

ನವಾಬ್‌ ಮಲಿಕ್‌ ಕುಟುಂಬದ 147 ಎಕರೆ ಕೃಷಿಭೂಮಿ, ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ

author img

By

Published : Apr 13, 2022, 7:01 PM IST

ಮಹಾರಾಷ್ಟ್ರ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ನವಾಬ್ ಮಲಿಕ್​ ಅವರಿಗೆ ಅಕ್ರಮ ಹಣ ಸಂದಾಯ ವಿಷಯವಾಗಿ ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಇದೆ. ಅಲ್ಲದೇ, ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಎನ್ನಲಾಗುತ್ತಿದೆ. ಹೀಗಾಗಿ ಮಲಿಕ್ ಅವರನ್ನು ಫೆ.23ರಂದು ಬಂಧಿಸಲಾಗಿದೆ.

ಸಚಿವ ಮಲಿಕ್​ ಹಾಗೂ ಕುಟುಂಬದ ಆಸ್ತಿ ಜಪ್ತಿ
ಸಚಿವ ಮಲಿಕ್​ ಹಾಗೂ ಕುಟುಂಬದ ಆಸ್ತಿ ಜಪ್ತಿ

ಮುಂಬೈ(ಮಹಾರಾಷ್ಟ್ರ): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ ಸಚಿವ, ಎನ್​ಸಿಪಿ ನಾಯಕ ನವಾಬ್​ ಮಲಿಕ್​ ಮತ್ತವರ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಮುಟ್ಟುಗೋಲು ಹಾಕಿಕೊಂಡಿದೆ. 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಗೋವಾಲಾ ಕಾಂಪೌಂಡ್​ (ಅಂದಾಜು 300 ಕೋಟಿ ರೂ. ಮೌಲ್ಯದ 3 ಎಕರೆ ಭೂ ಪ್ರದೇಶ), ಒಸ್ಮಾನಾಬಾದ್​ ಜಿಲ್ಲೆಯಲ್ಲಿರುವ 147.79 ಎಕರೆ ಕೃಷಿ ಭೂಮಿ, ಕುರ್ಲಾದಲ್ಲಿ ಮೂರು ಫ್ಲಾಟ್​ಗಳು ಮತ್ತು ಬಂದ್ರಾದಲ್ಲಿರುವ ಎರಡು ಫ್ಲಾಟ್​ಗಳು, ಒಂದು ವಾಣಿಜ್ಯ ಘಟಕ ಹಾಗ ಸಾಲಿಡಸ್ ಇನ್​​ವೆಸ್ಟ್​ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮಲಿಕ್ ಇನ್ಫ್ರಾಸ್ಟ್ರಕ್ಚರ್​ ಕಂಪನಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವರಾದ ಮಲಿಕ್​ ಅವರಿಗೆ ಅಕ್ರಮ ಹಣ ಸಂದಾಯ ವಿಷಯವಾಗಿ ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಇದೆ. ಅಲ್ಲದೇ, ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಎನ್ನಲಾಗುತ್ತಿದೆ. ಹೀಗಾಗಿ ಮಲಿಕ್ ಅವರನ್ನು ಫೆ.23ರಂದು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇತರ ಆರೋಪಿಗಳು: ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಇತರ ಮೇಲೆ ಎನ್​ಐಎ ದಾಖಲಿಸಿಕೊಂಡ ಎಫ್​​ಐಆರ್​ ಆಧಾರದ ಮೇಲೆ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಕೈಕೊಂಡಿದೆ. ದಾವೂದ್ ಕಸ್ಕರ್, ಹಾಜಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್, ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ ಮತ್ತು ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್​ನನ್ನು ಇದರಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಹಿಂದೂ ಮಕ್ಕಳ ಮತಾಂತರ ಯತ್ನ; ಶಿಕ್ಷಕ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.