ನವದೆಹಲಿ : ಗಡಿಯಾಚೆಗಿನ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಆರು ಬಾಂಗ್ಲಾದೇಶದ ಪ್ರಜೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಇದರಲ್ಲಿ ಕೆಲವರು ನಕಲಿ ಗುರುತಿನ ಚೀಟಿಗಳನ್ನು ಇಟ್ಟುಕೊಂಡು ತಾವು ಭಾರತೀಯರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು ಎಂದು ಇಡಿ ತಿಳಿಸಿದೆ.
ಬಂಧಿತರಲ್ಲಿ ಗುಂಪಿನ ಮಾಸ್ಟರ್‌ಮೈಂಡ್ ಪ್ರೊಶಾಂತಕುಮಾರ್ ಹಲ್ದರ್ ಕೂಡ ಒಬ್ಬನಾಗಿದ್ದು, 10 ಸಾವಿರ ಕೋಟಿಗಳಷ್ಟು ಬಾಂಗ್ಲಾದೇಶಿ ಟಾಕಾದ ಮೊತ್ತದ ಬ್ಯಾಂಕ್ ವಂಚನೆ ಮಾಡಿದ ಆರೋಪ ಈತನ ಮೇಲಿದೆ. ಅಲ್ಲದೇ, ಪ್ರೊಶಾಂತ ಮತ್ತು ಶಿಬ್ ಶಂಕರ್ ಹಲ್ದರ್ ಹಾಗೂ ಅಲಿಯಾಸ್ ಹೊಂದಿರುವ ಮುಂತಾದ ಹಲ್ದರ್ಗಳ ವಿರುದ್ಧ ಇಂಟರ್ಪೋಲ್ ಜಾಗತಿಕ ಬಂಧನ ವಾರಂಟ್ ಜಾರಿ ಮಾಡಲಾಗಿದೆ ಎಂದೂ ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸ್ವಪನ್ ಮೈತ್ರಾ ಅಲಿಯಾಸ್ ಸ್ವಪನ್ ಮಿಸ್ತ್ರಿ, ಉತ್ತಮ್ ಮೈತ್ರಾ ಅಲಿಯಾಸ್ ಉತ್ತಮ್ ಮಿಸ್ತ್ರಿ, ಇಮಾಮ್ ಹೊಸಿಯಾನ್ ಅಲಿಯಾಸ್ ಇಮೋನ್ ಹಲ್ಡರ್ ಮತ್ತು ಅಮಾನ ಸುಲ್ತಾನಾ ಅಲಿಯಾಸ್ ಶರ್ಮಿ ಹಲ್ದರ್ ಮತ್ತು ಪ್ರಾಣೇಶ್ ಕುಮಾರ್ ಹಲ್ದರ್ ಇತರ ಬಂಧಿತರಾಗಿದ್ದು, ಪ್ರೊಶಾಂತ ಕುಮಾರ್ ಹಲ್ದರ್ ಬಾಂಗ್ಲಾದೇಶ ಮತ್ತು ಭಾರತೀಯ ಪಾಸ್ಪೋರ್ಟ್ಗಳನ್ನು ಹೊಂದಿದ್ದಾನೆ ಎಂದು ತಿಳಿದು ಬಂದಿದೆ.
ಅಲ್ಲದೇ, ಪ್ರೊಶಾಂತ ಹಲ್ಡರ್, ಇತನ ಸಹಚರರು ಅಕ್ರಮವಾಗಿ ಪಶ್ಚಿಮ ಬಂಗಾಳದ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಪ್ಯಾನ್ ಮತ್ತು ಆಧಾರ್ ಕಾರ್ಡ್‌ನಂತಹ ಭಾರತೀಯ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದೂ ಇಡಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಕಲ್ಲಿನ ಕ್ವಾರಿ ದುರಂತದಲ್ಲಿ ಮೂವರು ಸಾವು : ಹಿಟಾಚಿ ಯಂತ್ರದೊಳಗೆ ಸಿಲುಕಿರುವ ಮತ್ತೋರ್ವ ಕಾರ್ಮಿಕ