ETV Bharat / bharat

ಭಾರತದ ಮೊದಲ ಸೌರ ಮಿಷನ್ ಆದಿತ್ಯ L1 ಗೆ ಯಂತ್ರೋಪಕರಣ ಪೂರೈಸಿದ ECIL, ಮಿಧಾನಿ ಸಂಸ್ಥೆಗಳು - ಭಾರತದ ಮೊದಲ ಸೌರ ಮಿಷನ್ ಆದಿತ್ಯ L1

ಹೈದರಾಬಾದ್ ಮೂಲದ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಮಿಧಾನಿ ಸಂಸ್ಥೆಗಳು ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ಗೆ ಪ್ರಮುಖ ಯಂತ್ರೋಪಕರಣಗಳನ್ನು ಪೂರೈಸಿವೆ. ಜೊತೆಗೆ, ಸಂವಹನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ECIL, ಎರಡು ನೆಲದ ಆಂಟೆನಾ ನೆಟ್‌ವರ್ಕ್‌ಗಳನ್ನು ಒದಗಿಸಿದೆ ಮತ್ತು ಕೆಲವು ಪ್ರಮುಖ ಭಾಗಗಳನ್ನು ಮಿಧಾನಿ ತಯಾರಿಸಿದೆ.

Aditya L1
ಆದಿತ್ಯ L1
author img

By ETV Bharat Karnataka Team

Published : Sep 2, 2023, 2:15 PM IST

ಹೈದರಾಬಾದ್ : ಚಂದ್ರಯಾನ 3 ಯಶಸ್ಸಿನ ನಂತರ ಇಸ್ರೋ ಸೂರ್ಯನ ಅಧ್ಯಯನಕ್ಕೆ ಸಜ್ಜಾಗಿದ್ದು ಇಂದು ಶ್ರೀಹರಿಕೋಟಾದಿಂದ ಆದಿತ್ಯ ಎಲ್1 ಉಡಾವಣೆ ಮಾಡಲಾಯಿತು. 15 ಲಕ್ಷ ಕಿಲೋಮೀಟರ್‌ ದೂರ ಕ್ರಮಿಸಿದ ನಂತರ ಆದಿತ್ಯ L1 ಲಗ್ರಾಂಜಿಯನ್ ಪಾಯಿಂಟ್ 1 ರ ಕಕ್ಷೆಗೆ ಸೇರಲಿದೆ. ಅಲ್ಲಿಂದ ಸೂರ್ಯನನ್ನು ಅತ್ಯಂತ ಸ್ಪಷ್ಟ ಮತ್ತು ಸುಲಭ ರೀತಿಯಲ್ಲಿ ಅಧ್ಯಯನ ಮಾಡಲಿದೆ. ಇನ್ನೊಂದೆಡೆ, ಆದಿತ್ಯ L1 ಗಾಗಿ ಸಿದ್ಧಪಡಿಸಲಾದ ಬಾಹ್ಯಾಕಾಶ ನೌಕೆಯ ಸಂವಹನ ವ್ಯವಸ್ಥೆಗಳ ಅಭಿವೃದ್ಧಿಗೆ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳಾದ ECIL ಮತ್ತು ಮಿಧಾನಿ ಪ್ರಮುಖ ಕೊಡುಗೆ ನೀಡಿವೆ.

ಎಎಸ್ ರಾವ್‌ನಗರದಲ್ಲಿರುವ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ಇಸ್ರೋದೊಂದಿಗೆ ದೀರ್ಘಕಾಲದಿಂದ ಕೆಲಸ ಮಾಡುತ್ತಿದೆ. ಪರಮಾಣು ಶಕ್ತಿ ಇಲಾಖೆಯ ಅಡಿ ಇಸಿಐಎಲ್, ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿದೆ. ವಿಶೇಷವಾಗಿ ಸಂವಹನಕ್ಕಾಗಿ ಬಳಸುವ ಆಂಟೆನಾ ನೆಟ್​ವರ್ಕ್​ ಅನ್ನು ಒದಗಿಸುತ್ತಿದೆ.

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಆದಿತ್ಯ L1 ಮಿಷನ್‌ಗಾಗಿ ಆಂಟೆನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ವಿತರಿಸಿದೆ. ಇದಕ್ಕೆ ಅಗತ್ಯವಿರುವ 18 ಮೀಟರ್ ಆಂಟೆನಾ ವ್ಯವಸ್ಥೆಯನ್ನು ಡೀಪ್ ಸ್ಪೇಸ್ ನೆಟ್‌ವರ್ಕ್ (IDSN) ಒದಗಿಸಿದೆ. ಇದು ಸುಮಾರು 150 ಟನ್ ತೂಕ ಹೊಂದಿದೆ. ಚಂದ್ರಯಾನಕ್ಕಾಗಿ ಕಳುಹಿಸಲಾದ 32 ಮೀಟರ್ ಆಳವಾದ ಬಾಹ್ಯಾಕಾಶ ಜಾಲದ ಆಂಟೆನಾವನ್ನು ಆದಿತ್ಯ ಎಲ್ 1 ನಲ್ಲಿ ಟ್ರ್ಯಾಕಿಂಗ್ ಮಾಡಲು ಬಳಸಲಾಗುವುದು ಎಂದು ECIL ಅಧಿಕಾರಿಗಳು ತಿಳಿಸಿದ್ದಾರೆ.

ಹಾಗೆಯೇ, ಕಂಚನ್‌ಬಾಗ್‌ನಲ್ಲಿರುವ ಮಿಶ್ರಾ ಧಾತು ನಿಗಮ್ ಲಿಮಿಟೆಡ್‌ (ಮಿಧಾನಿ) ನಾಲ್ಕು ದಶಕಗಳಿಂದ ಇಸ್ರೋದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇಸ್ರೋದ ಮೊದಲ ಉಡಾವಣೆ ಸಮಯದಿಂದ ಇಂದು ಉಡಾವಣೆಯಾದ ಆದಿತ್ಯ ಎಲ್ 1 ವರೆಗೆ ಮಿಧಾನಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸಂಯುಕ್ತಗಳನ್ನು ಒದಗಿಸುತ್ತಿದೆ. ಆದಿತ್ಯ ಎಲ್ 1ನ ಟೈಟಾನಿಯಂ ರಿಂಗ್‌ಗಳು ಮತ್ತು ಬಾರ್‌ಗಳಿಗಾಗಿ ಮಿಧಾನಿ ತಯಾರಿಸಿದ ವಿಶೇಷ ಲೋಹಗಳನ್ನು ಪೇಲೋಡ್‌ಗಳಿಗೆ ಬಳಸಲಾಗಿದೆ ಎಂದು ಮಿಧಾನಿ ಮೂಲಗಳು ತಿಳಿಸಿವೆ.

ಆದಿತ್ಯ ಎಲ್‌-1 : ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆ ಅಡಿ ಆದಿತ್ಯ ಎಲ್‌ 1 ಗಗನ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆದಿತ್ಯ ಎಲ್‌ 1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ ಉಡಾವಣೆ ಯಶಸ್ವಿಯಾಗಿದೆ ಎಂದು ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ ತಿಳಿಸಿದೆ. ನಿರೀಕ್ಷೆಯಂತೆ ಇದು 125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. ಅಲ್ಲಿಂದು ಯಾವುದೇ ಅಡ್ಡಿ ಇಲ್ಲದೇ ಸೂರ್ಯನ ಅಧ್ಯಯನ ನಡೆಸಲಿದೆ. ಉಪಗ್ರಹದಲ್ಲಿ ಒಟ್ಟು ಏಳು ಉಪಕರಣಗಳಿದ್ದು, ಅದರಲ್ಲಿ ನಾಲ್ಕು ಸೂರ್ಯನ ವೀಕ್ಷಣೆ ಮಾಡಲಿವೆ. ಉಳಿದ ಮೂರು ಉಪಕರಣಗಳು ಕಿರಣ, ಪ್ಲಾಸ್ಮಾ, ಜ್ವಾಲೆಗಳು ಮತ್ತು ಸೌರ ಬಿರುಗಾಳಿ ಕುರಿತು ಅಧ್ಯಯನ ನಡೆಸಲಿವೆ.

ಇದನ್ನೂ ಓದಿ : ಕೆಲವೇ ನಿಮಿಷಗಳಲ್ಲಿ ನಭಕ್ಕೆ ಜಿಗಿಯಲಿದೆ ಆದಿತ್ಯ ಎಲ್​1.. ಈ ಮಿಷನ್​ ಬಗ್ಗೆ ವಿಜ್ಞಾನಿಗಳ ಅಭಿಪ್ರಾಯವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.