ETV Bharat / bharat

ಸಿಪ್ಪೆ ಸಮೇತ ಹಣ್ಣು - ತರಕಾರಿ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ..?

ಸಾಮಾನ್ಯವಾಗಿ, ನಾವು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ ಅಥವಾ ಅಡುಗೆ ಮಾಡುವ ಮೊದಲು ಸಿಪ್ಪೆ ತೆಗೆಯುತ್ತೇವೆ. ಆದರೆ, ನಾವು ತ್ಯಾಜ್ಯ ಎಂದು ಬಿಸಾಡುವ ಈ ಸಿಪ್ಪೆಗಳು ಆರೋಗ್ಯಕರವೂ ಆಗಿರಬಹುದು ಎಂಬುದು ನಿಮಗೆ ತಿಳಿದಿದೆಯೇ? ಅವು ಪೌಷ್ಠಿಕಾಂಶ ಹೊಂದಿವೆ ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

vegetables
ಸಿಪ್ಪೆ ಸಮೇತ ಹಣ್ಣು
author img

By

Published : Oct 30, 2021, 1:21 PM IST

ನಾವು ನಿತ್ಯ ಸೇವಿಸುವ ಅನೇಕ ಹಣ್ಣುಗಳು ಮತ್ತು ತರಕಾರಿಗಳನ್ನು ಅವುಗಳ ಸಿಪ್ಪೆಗಳೊಂದಿಗೆ ಸೇವಿಸಿದರೆ ಸುಮಾರು ಶೇ 33 ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿರುತ್ತದೆ. ವೈದ್ಯರು ಮತ್ತು ಪೌಷ್ಟಿಕತಜ್ಞರು ಸಾಮಾನ್ಯವಾಗಿ ತರಕಾರಿಗಳು ಮತ್ತು ಹಣ್ಣುಗಳಾದ ಸೇಬು, ಟೊಮೆಟೊ, ಆಲೂಗಡ್ಡೆ, ಕ್ಯಾರೆಟ್, ಸೌತೆಕಾಯಿ ಮತ್ತು ಸಿಹಿ ಗೆಣಸುಗಳನ್ನು ತಮ್ಮ ಸಿಪ್ಪೆಯೊಂದಿಗೆ ತಿನ್ನಲು ಶಿಫಾರಸು ಮಾಡುತ್ತಾರೆ ಏಕೆಂದರೆ ಅವುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.

ಕೆಲವು ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಗಳು ಆಂಟಿ- ಆಕ್ಸಿಡೆಂಟ್‌ಗಳು, ಫೈಬರ್, ವಿಟಮಿನ್‌ಗಳು, ಕಬ್ಬಿಣ ಮತ್ತು ಖನಿಜಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ ಎಂದು ಪೌಷ್ಠಿಕ ತಜ್ಞೆ ಡಾ.ದಿವ್ಯಾ ಶರ್ಮಾ ಹೇಳುತ್ತಾರೆ. ಸಿಪ್ಪೆ ಸುಲಿದ ತರಕಾರಿಗಳಿಗೆ ಹೋಲಿಸಿದರೆ ಸಿಪ್ಪೆಯಿರುವ ತರಕಾರಿಗಳು ಶೇ 33 ರಷ್ಟು ಹೆಚ್ಚು ಫೈಬರ್ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತವೆ ಎಂದು ಅವರು ಹೇಳುತ್ತಾರೆ.

ಸಿಪ್ಪೆಯೊಂದಿಗೆ ತಿನ್ನಲು ಇಷ್ಟಪಡದಿರಲು ಹಲವು ಕಾರಣಗಳಿವೆ

ಇನ್ನು ಜನರು ತರಕಾರಿ ಅಥವಾ ಹಣ್ಣುಗಳನ್ನು ಅವುಗಳ ಸಿಪ್ಪೆಯೊಂದಿಗೆ ತಿನ್ನಲು ಇಷ್ಟಪಡದಿರಲು ಹಲವು ಕಾರಣಗಳಿವೆ ಎಂದು ಡಾ.ದಿವ್ಯಾ ಹೇಳುತ್ತಾರೆ. ಬಹುಶಃ ಅವು ತುಂಬಾ ರುಚಿಯಾಗದ ಕಾರಣ, ಅಗಿಯಲು ಕಷ್ಟ ಮತ್ತು ಕೃಷಿಯ ಸಮಯದಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಅದು ಸಿಪ್ಪೆಯ ಮೇಲೆ ಇರುವ ಸಾಧ್ಯತೆ ಇರುವುದರಿಂದ ಜನರು ಸಿಪ್ಪೆ ಸಮೇತ ಹಣ್ಣು-ತರಕಾರಿಗಳನ್ನು ತಿನ್ನಲು ಇಚ್ಛಿಸುವುದಿಲ್ಲ.ಆದಾಗ್ಯೂ, ರಾಸಾಯನಿಕಗಳಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು, ಅವುಗಳನ್ನು ಬಳಸುವ ಮೊದಲು ತರಕಾರಿಗಳನ್ನು ಸಂಪೂರ್ಣವಾಗಿ ತೊಳೆದು ಸ್ವಚ್ಛಗೊಳಿಸುವುದು ಅವಶ್ಯಕ. ಆದರೆ, ನಾವು ಆರೋಗ್ಯಕ್ಕೆ ಆದ್ಯತೆ ನೀಡಬೇಕು ರುಚಿಗೆ ಅಲ್ಲ ಎನ್ನುತ್ತಾರೆ ವೈದ್ಯರು.

ಸಿಪ್ಪೆ ಸಮೇತ ಹಣ್ಣು ಸವಿದರೆ ಉತ್ತಮ

ಜನರು ಸಾಮಾನ್ಯವಾಗಿ ಸೇಬು, ಮರಸೇಬು ಮತ್ತು ಸೀಬೆ ಹಣ್ಣುಗಳನ್ನು ಸಿಪ್ಪೆ ತೆಗೆದು ನಂತರ ತಿನ್ನಲು ಇಷ್ಟಪಡುತ್ತಾರೆ, ಆದರೆ ಇದು ಸರಿಯಲ್ಲ. ಪೌಷ್ಟಿಕಾಂಶದ ಜೊತೆಗೆ, ಈ ಹಣ್ಣುಗಳ ಸಿಪ್ಪೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದ ಚಯಾಪಚಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಸೇಬಿನ ಮೂರನೇ ಎರಡರಷ್ಟು ಫೈಬರ್ ಅಂಶವು ಅದರ ಸಿಪ್ಪೆಯಲ್ಲಿದೆ, ಇದರಲ್ಲಿ ಕ್ವೆರ್ಸೆಟಿನ್ ಎಂಬ ಆ್ಯಂಟಿ ಆಕ್ಸಿಡೆಂಟ್​​ ಇದೆ, ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.ಅಂತೆಯೇ, ಮರಸೇಬು ಮತ್ತು ಸೀಬೆ ಹಣ್ಣು ಸಿಪ್ಪೆಗಳು ವಿಟಮಿನ್ ಸಿ ಜೊತೆಗೆ ಮರಸೇಬು ಮತ್ತು ಸೀಬೆ ಹಣ್ಣು ಸೇರಿ ಇತರ ಪೋಷಕಾಂಶಗಳನ್ನು ಸಮೃದ್ಧವಾಗಿ ಹೊಂದಿವೆ.

ತರಕಾರಿಯನ್ನೂ ಸಿಪ್ಪೆ ಸಮೇತವೇ ತಿನ್ನಬೇಕು

ಸಲಾಡ್‌ಗಳಲ್ಲಿ ಸಾಮಾನ್ಯವಾಗಿ ಬಳಸುವ ಸೌತೆಕಾಯಿ, ಮೂಲಂಗಿ ಮತ್ತು ಟೊಮೆಟೊಗಳಂತಹ ತರಕಾರಿಗಳನ್ನು ಸಿಪ್ಪೆ ಇಲ್ಲದೆ ಬಳಸಲಾಗುತ್ತದೆ ಇದು ಸರಿಯಲ್ಲ. ಟೊಮೇಟೊಗಳ ಸಿಪ್ಪೆಯಲ್ಲಿ ಫ್ಲೇವನಾಯ್ಡ್ ನರಿಂಗೆನಿನ್ ಅಧಿಕವಾಗಿದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೆಲವು ರೋಗಗಳಿಂದ ರಕ್ಷಿಸುತ್ತದೆ.

ಆದರೆ, ಕ್ಯಾರೆಟ್‌ನ ವಿವಿಧ ಪದರಗಳು ಬೀಟಾ - ಕ್ಯಾರೋಟಿನ್, ಫೈಬರ್, ವಿಟಮಿನ್ ಕೆ, ಪೊಟ್ಯಾಶಿಯಂ, ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇದರ ಸೇವನೆಯು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ.

ಆಲೂಗಡ್ಡೆಯಲ್ಲಿದೆ ಭರಪೂರ ಪೋಷಕಾಂಶ

ಆಲೂಗಡ್ಡೆ ಸಿಪ್ಪೆಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಮ್ ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಆಲೂಗೆಡ್ಡೆಯ ಸಿಪ್ಪೆಯ ಆರೋಗ್ಯ ಪ್ರಯೋಜನಗಳ ಕುರಿತು ದೇಶ-ವಿದೇಶಗಳಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಒಟ್ಟಾರೆ ಆರೋಗ್ಯಕ್ಕೆ ಇದು ಪ್ರಯೋಜನಕಾರಿ ಎಂದು ಅವು ದೃಢಪಡಿಸಿವೆ ಎಂದು ಡಾ.ದಿವ್ಯಾ ಹೇಳುತ್ತಾರೆ.

ಇದಲ್ಲದೆ, ಸಿಹಿ ಆಲೂಗಡ್ಡೆಯ ಸಿಪ್ಪೆಗಳು ಫೈಬರ್, ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ, ವಿಟಮಿನ್ ಇ, ಫೋಲೇಟ್, ಪೊಟ್ಯಾಶಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದರ ಸಿಪ್ಪೆಯಲ್ಲಿ ಕಂಡುಬರುವ ಬೀಟಾ-ಕ್ಯಾರೋಟಿನ್ ಆ್ಯಂಟಿ ಆಕ್ಸಿಡೆಂಟ್​ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಕುಂಬಳಕಾಯಿಯಲ್ಲಿ ವಿಟಮಿನ್​​​​​ಗಳ ಹೂರಣ

ಇನ್ನು ಕುಂಬಳಕಾಯಿಯಲ್ಲಿ ಕಬ್ಬಿಣ, ವಿಟಮಿನ್ ಎ, ಪೊಟ್ಯಾಶಿಯಂ ಕೂಡ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಜನರು ಸಾಮಾನ್ಯವಾಗಿ ಹಸಿರು ಕುಂಬಳಕಾಯಿಯನ್ನು ಸಿಪ್ಪೆಯ ಜೊತೆಗೆ ಬೇಯಿಸುತ್ತಾರೆಯಾದರೂ, ಜನರು ಹಳದಿ ಕುಂಬಳಕಾಯಿಯ ಸಿಪ್ಪೆಯನ್ನು ತೆಗೆದುಹಾಕಲು ಬಯಸುತ್ತಾರೆ. ಏಕೆಂದರೆ ಅದು ಸ್ವಲ್ಪ ದಪ್ಪವಾಗಿರುತ್ತದೆ. ಹಸಿರು ಬಟಾಣಿ ಹೆಚ್ಚು ಪೌಷ್ಟಿಕವಾಗಿದೆ ಮತ್ತು ಫೈಬರ್, ಪೊಟ್ಯಾಶಿಯಮ್, ವಿಟಮಿನ್​​ ಮತ್ತು ಕಾಪರ್​ ಹೊಂದಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.