ದಿಗ್ಲಿಪುರ(ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು): ಅಂಡಮಾನ್ ಮತ್ತು ನಿಕೋಬಾರ್‌ನ ದಿಗ್ಲಿಪುರ ಪ್ರದೇಶದಲ್ಲಿ ಇಂದು (ಬುಧವಾರ) ಬೆಳಿಗ್ಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.0ರಷ್ಟು ತೀವ್ರತೆ ದಾಖಲಾಗಿದೆ.
ದಿಗ್ಲಿಪುರದ 80 ಕಿಲೋಮೀಟರ್ ಆಳದಲ್ಲಿ ಮತ್ತು 90 ಕಿಲೋಮೀಟರ್ ದಕ್ಷಿಣದ-ಆಗ್ನೇಯದಲ್ಲಿ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.