ETV Bharat / bharat

ಹೊಸ ಪ್ರಕರಣ, ಸಾವಿನ ಸಂಖ್ಯೆಯಲ್ಲಿ ಇಳಿಕೆ : ಎರಡನೇ ಅಲೆ ಕ್ಷೀಣಿಸುತ್ತಿದೆ ಎಂದ ಕೇಂದ್ರ

14 ದಿನಗಳ ಬಳಿಕ ದೇಶಾದ್ಯಂತ ದಾಖಲಾಗುವ ಕೊರೊನಾ ಕೇಸ್​ಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದ್ರೆ ಕೇರಳ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪಂಜಾಬ್​ನಲ್ಲಿ ಹೊಸ ಕೋವಿಡ್ ಪ್ರಕರಣಗಳು ಅಧಿಕವಾಗಿ ದಾಖಲಾಗುತ್ತಿವೆ. 13 ರಾಜ್ಯಗಳಲ್ಲಿ ತಲಾ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, 26 ರಾಜ್ಯಗಳಲ್ಲಿ ಶೇಕಡಾ 15ಕ್ಕಿಂತ ಹೆಚ್ಚು ಆ್ಯಕ್ಟಿವ್ ಕೇಸ್​ಗಳಿವೆ.

ಕೇಂದ್ರ
ಕೇಂದ್ರ
author img

By

Published : May 11, 2021, 8:42 PM IST

ನವದೆಹಲಿ: ದೇಶದಲ್ಲಿ ದೈನಂದಿನ ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳು ಕಡಿಮೆಯಾಗುವ ಆರಂಭಿಕ ಪ್ರವೃತ್ತಿ ಶುರುವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಮೂಲಕ ಭಾರತದಲ್ಲಿ ವೈರಸ್​ನ ಎರಡನೇ ತರಂಗವು ಕ್ಷೀಣಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರದ ಪ್ರಕಾರ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಛತ್ತೀಸ್​​ಗಡ ಸೇರಿ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ.

ಈ ಕುರಿತು ಮಾಹಿತಿ ನೀಡಿರುವ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಕೇರಳ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪಂಜಾಬ್​ಗಳಲ್ಲಿ ಹೊಸ ಕೋವಿಡ್ ಪ್ರಕರಣಗಳು ಅಧಿಕವಾಗಿ ದಾಖಲಾಗುತ್ತಿವೆ ಎಂದಿದ್ದಾರೆ.

ಹದಿಮೂರು ರಾಜ್ಯಗಳಲ್ಲಿ ತಲಾ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, 26 ರಾಜ್ಯಗಳಲ್ಲಿ ಶೇಕಡಾ 15 ಕ್ಕಿಂತ ಹೆಚ್ಚು ಆ್ಯಕ್ಟಿವ್ ಕೇಸ್​ಗಳಿವೆ.

ಇದನ್ನೂ ಓದಿ:ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲಿಯೇ ಅಧಿಕ ಸಕ್ರಿಯ ಪ್ರಕರಣ.. ಐಸಿಎಂಆರ್​ ಹೇಳಿದ್ದೇನು?

14 ದಿನಗಳ ಬಳಿಕ ಹೊಸದಾಗಿ ದಾಖಲಾಗುವ ಕೇಸ್​ಗಳು 3.29 ಲಕ್ಷಕ್ಕೆ ಇಳಿದಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 2,29,92,517ಕ್ಕೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.