ಚೆನ್ನೈ, ತಮಿಳುನಾಡು : ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ತಮಿಳುನಾಡು ಮಾಜಿ ಸಚಿವ ಹಾಗೂ ಎಐಎಡಿಎಂಕೆ ನಾಯಕ ತಂಗಮಣಿ ಒಡೆತನದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿವೆ.
ತಮಿಳುನಾಡಿನ ಚೆನ್ನೈ, ನಾಮಕ್ಕಲ್, ಈರೋಡ್, ವೆಲ್ಲೂರ್, ಸೇಲಂ, ಕರೂರ್, ತಿರುಪ್ಪೂರ್, ಕೊಯಮತ್ತೂರು ಮಾತ್ರವಲ್ಲದೇ ಕರ್ನಾಟಕ ಮತ್ತು ಆಂಧ್ರಪ್ರದೇಶದ 69 ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರೆಸಿವೆ. ಚೆನ್ನೈ ನಗರವೊಂದರಲ್ಲೇ 14 ಸ್ಥಳಗಳಲ್ಲಿ ತನಿಖೆ ನಡೆಸಲಾಗಿದೆ.
ಕರೂರು ಸಮೀಪದ ವೇಲಾಯುತಂಪಾಳ್ಯದ ಕುಲಗೌಂಡನೂರು ಪ್ರದೇಶದಲ್ಲಿ ವಾಸವಿರುವ ಮಾಜಿ ಸಚಿವ ತಂಗಮಣಿ ಅವರ ಸಂಬಂಧಿ ವಸಂತಿ ಸುಬ್ರಮಣಿ ಅವರ ಮನೆ ಹಾಗೂ ಕರೂರು-ಕೊಯಮತ್ತೂರು ರಸ್ತೆಯಲ್ಲಿರುವ ಜಯಶ್ರೀ ಸೆರಾಮಿಕ್ಸ್ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ಎಐಎಡಿಎಂಕೆ ಮಾಜಿ ಸಚಿವರ ಮನೆಗಳ ಮೇಲೆ ನಡೆದ ಐದನೇ ದಾಳಿ ಇದಾಗಿದೆ. ಇದಕ್ಕೂ ಮೊದಲು ಎಂ ಆರ್ ವಿಜಯಭಾಸ್ಕರ್, ಎಸ್ ಪಿ ವೇಲುಮಣಿ, ಕೆ ಸಿ ವೀರಮಣಿ ಮತ್ತು ಸಿ.ವಿಜಯಭಾಸ್ಕರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ: Telangana Omicron: ತೆಲಂಗಾಣದಲ್ಲಿ ಮೊದಲ ಬಾರಿಗೆ ಎರಡು ಒಮಿಕ್ರಾನ್ ಕೇಸ್ ಪತ್ತೆ!