ETV Bharat / bharat

ದಸರಾ 2022: ಅಮೃತ ಕಾಲ, ವಿಜಯ ಮುಹೂರ್ತ ಯಾವಾಗ? - how to do ayudha puja

ರಾಕ್ಷಸಿ ಪ್ರವೃತ್ತಿಯ ಮೇಲೆ ದೈವದ ವಿಜಯದ ಸಂಕೇತವಾಗಿ ಈ ಹಬ್ಬ ಆಚರಿಸಲಅಗುತ್ತದೆ. ಈ ವರ್ಷ 2022ರಲ್ಲಿ ಅಕ್ಟೋಬರ್ 5 ರಂದು ದಸರಾ ಆಚರಿಸಲಾಗುತ್ತಿದೆ. ಅಶ್ವಿನ ಮಾಸದ ಶುಕ್ಲ ಪಕ್ಷದ ದಶಮಿ ತಿಥಿಯು ಮಂಗಳವಾರ ಅಕ್ಟೋಬರ್ 4 ರಂದು ಮಧ್ಯಾಹ್ನ 2.20ಕ್ಕೆ ಆರಂಭವಾಗಿ ಬುಧವಾರ ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯವರೆಗೆ ಇರುತ್ತದೆ. ಹೀಗಾಗಿ ಈ ಬಾರಿ ದಸರೆಯನ್ನು ಅಕ್ಟೋಬರ್ 4ರ ರಾತ್ರಿ 10.51 ರಿಂದ ಅಕ್ಟೋಬರ್ 5ರ ರಾತ್ರಿ 9.15 ರವರೆಗೆ ಆಚರಿಸಲಾಗುತ್ತದೆ.

Goddess Sri Durga
ಜಗನ್ಮಾತೆ ಶ್ರೀ ದುರ್ಗೆ
author img

By

Published : Oct 4, 2022, 1:32 PM IST

ಹೈದರಾಬಾದ್: ಜಗನ್ಮಾತೆ ಶ್ರೀ ದುರ್ಗಾದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ ಉತ್ಸವವನ್ನು ಆಚರಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನಗಳ ನಂತರ ದಸರಾ ಆಚರಿಸಲಾಗುತ್ತದೆ. ದಸರಾ ಹಬ್ಬವನ್ನು ವಿಜಯದಶಮಿ ಅಥವಾ ಆಯುಧ ಪೂಜೆ ಹಬ್ಬ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷ ಹಿಂದೂ ಪಂಚಾಂಗದ ಅಶ್ವಿನ ಮಾಸದ ಶುಕ್ಲ ಪಕ್ಷದ 10ನೇ ದಿನದಂದು ದಸರಾ ಆಚರಿಸಲಾಗುತ್ತದೆ.

Ravana Dahana Scene
ರಾವಣ ದಹನದ ದೃಶ್ಯ

ರಾಕ್ಷಸಿ ಪ್ರವೃತ್ತಿಯ ಮೇಲೆ ದೈವದ ವಿಜಯದ ಸಂಕೇತವಾಗಿ ಈ ಹಬ್ಬ ಆಚರಿಸಲಅಗುತ್ತದೆ. ಈ ವರ್ಷ 2022ರಲ್ಲಿ ಅಕ್ಟೋಬರ್ 5 ರಂದು ದಸರಾ ಆಚರಿಸಲಾಗುತ್ತಿದೆ. ಅಶ್ವಿನ ಮಾಸದ ಶುಕ್ಲ ಪಕ್ಷದ ದಶಮಿ ತಿಥಿಯು ಮಂಗಳವಾರ ಅಕ್ಟೋಬರ್ 4 ರಂದು ಮಧ್ಯಾಹ್ನ 2.20ಕ್ಕೆ ಆರಂಭವಾಗಿ ಬುಧವಾರ ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯವರೆಗೆ ಇರುತ್ತದೆ. ಹೀಗಾಗಿ ಈ ಬಾರಿ ದಸರೆಯನ್ನು ಅಕ್ಟೋಬರ್ 4ರ ರಾತ್ರಿ 10.51 ರಿಂದ ಅಕ್ಟೋಬರ್ 5ರ ರಾತ್ರಿ 9.15 ರವರೆಗೆ ಆಚರಿಸಲಾಗುತ್ತದೆ.

Ravana Dahana Scene
ರಾವಣ ದಹನದ ದೃಶ್ಯ

ವಿಜಯ ಮಹೂರ್ತ: ಬುಧವಾರ, ಅಕ್ಟೋಬರ್ 5 ಮಧ್ಯಾಹ್ನ 02:13 ರಿಂದ 2:54 ರವರೆಗೆ

ಅಮೃತ ಕಾಲ: ಬುಧವಾರ, ಅಕ್ಟೋಬರ್ 5, 11.33 ರಿಂದ 1:02 ರವರೆಗೆ

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಗವಾನ್ ರಾಮನು ಇದೇ ದಿನದಂದು ರಾವಣನನ್ನು ಕೊಂದು ಸೀತಾ ದೇವಿಯನ್ನು ರಕ್ಷಿಸಿದನು. ಹತ್ತು ತಲೆಯ ರಾವಣನ ಅಂತ್ಯದಿಂದಾಗಿ ಇದನ್ನು ಕೆಲವೊಮ್ಮೆ ದಶೇಹರಾ ಎಂದು ಕರೆಯಲಾಗುತ್ತದೆ. ರಾವಣನು ಸೀತಾದೇವಿಯನ್ನು ಅಪಹರಿಸಿದ ನಂತರ, ರಾವಣ ಮತ್ತು ಭಗವಾನ್ ರಾಮನ ನಡುವೆ ಹತ್ತು ದಿನಗಳ ಕಾಲ ಯುದ್ಧ ನಡೆಯಿತು. ಇದನ್ನೇ ಬಿಂಬಿಸುವ ರಾಮ್-ಲೀಲಾ, ಹಾಡು ಮತ್ತು ನೃತ್ಯದ ಮೂಲಕ ರಾಮಾಯಣದ ಕಥೆಯ ಚಿತ್ರಣವನ್ನು ದೇಶದ ಹಲವಾರು ಭಾಗಗಳಲ್ಲಿ ಪ್ರದರ್ಶಿಸಲಾಗುತ್ತದೆ.

Sri Rama, Mother Sita, Lakshmana
ಶ್ರೀ ರಾಮ, ಸೀತಾ ಮಾತೆ, ಲಕ್ಷ್ಮಣ

ಅಂತಿಮವಾಗಿ, ಅಶ್ವಿನ ಮಾಸದ ಶುಕ್ಲ ದಶಮಿಯಂದು, ಭಗವಾನ್ ರಾಮನು ದುರ್ಗಾದೇವಿಯಿಂದ ಪಡೆದ ದಿವ್ಯಾಸ್ತ್ರದ ಸಹಾಯದಿಂದ ದುರಹಂಕಾರಿ ರಾವಣನನ್ನು ಕೊಂದನು. ರಾವಣನ ಮೇಲೆ ಶ್ರೀರಾಮನು ವಿಜಯ ಸಾಧಿಸಿದ ಕಾರಣ ಈ ದಿನವನ್ನು ವಿಜಯ ದಶಮಿ ಎಂದೂ ಕರೆಯುತ್ತಾರೆ. ವಿಜಯ ದಶಮಿಯ ಆಚರಣೆಯ ಅಂಗವಾಗಿ ರಾವಣ, ಅವನ ಸಹೋದರ ಕುಂಭಕರ್ಣ ಮತ್ತು ಅವನ ಮಗ ಮೇಘನಾದನ ಬೃಹತ್ ಪ್ರತಿಕೃತಿಗಳನ್ನು ದಹಿಸಲು ದೇಶದಾದ್ಯಂತ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ.

Goddess Sri Durga
ಜಗನ್ಮಾತೆ ಶ್ರೀ ದುರ್ಗೆ

ಇದೇ ದಿನ ದುರ್ಗಾ ಮಾತೆ ಮಹಿಷಾಸುರನನ್ನು ಕೊಂದಳು. ಮಹಿಷಾಸುರ ಎಂಬ ರಾಕ್ಷಸನು ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದನು. ದೇವತೆಗಳು ಕೂಡ ಈ ರಾಕ್ಷಸನಿಂದ ಪೀಡಿಸಲ್ಪಟ್ಟರು. ಅವನ ಹಿಂಸೆಯಿಂದ ದೇವತೆಗಳನ್ನು ಮತ್ತು ಇಡೀ ಪ್ರಪಂಚವನ್ನು ನಿವಾರಿಸಲು ಅಶ್ವಿನ ಶುಕ್ಲ ದಶಮಿಯಂದು ದೇವಿಯು ಮಹಿಷಾಸುರನನ್ನು ಕೊಂದಳು. ದೇವಿಯ ವಿಜಯದಿಂದ ದೇವತೆಗಳು ಸಂತುಷ್ಟರಾಗಿ ಅವಳನ್ನು ಪೂಜಿಸಿದರು ಮತ್ತು ಇಂದಿನಿಂದ ಈ ದಿನವನ್ನು ವಿಜಯ ದಶಮಿ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಈ ದಿನ ಆಯುಧಗಳನ್ನೂ ಪೂಜಿಸಲಾಗುತ್ತದೆ. ಈ ದಿನದಂದು ಭಾರತೀಯ ಸೇನೆಯು ಆಯುಧಗಳನ್ನು ಪೂಜಿಸುತ್ತದೆ.

Goddess Sri Durga
ಜಗನ್ಮಾತೆ ಶ್ರೀ ದುರ್ಗೆ

ಮಧ್ಯಪ್ರದೇಶದ ಮಂದಸೌರ್, ಮಹಾರಾಷ್ಟ್ರದ ಅಮರಾವತಿ, ಉತ್ತರ ಪ್ರದೇಶದ ಬಿಸ್ರಖ್ ಮತ್ತು ಉಜ್ಜಯಿನಿ, ಉತ್ತರ ಪ್ರದೇಶದ ಜಸ್ವಂತ್ನಗರ, ಹಿಮಾಚಲ ಪ್ರದೇಶದ ಬೈಜನಾಥ್, ಆಂಧ್ರಪ್ರದೇಶದ ಕಾಕಿನಾಡ, ರಾಜಸ್ಥಾನದ ಜೋಧ್‌ಪುರ, ಮಂಡ್ಯ ಜಿಲ್ಲೆ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಜಿಲ್ಲೆಗಳಲ್ಲಿ ದಸರಾ ಆಚರಣೆ ವಿಶೇಷವಾಗಿರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.