ಧನ್ಬಾದ್(ಜಾರ್ಖಂಡ್): ಧನ್ಬಾದ್ ರೈಲ್ವೇ ವಿಭಾಗದ ಪ್ರಧಾನ್‌ಖಾಂತಾ ನಿಲ್ದಾಣದ ಬಳಿಯ ಛಟಕುಳಿ ಗ್ರಾಮದ ಬಳಿ ಅಂಡರ್‌ಪಾಸ್ ಕುಸಿದು ಅವಶೇಷಗಳಡಿಯಲ್ಲಿ ಸಿಲುಕಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ಅವಘಡ ಸಂಭವಿಸಿದ್ದು ಹೇಗೆ?: ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ರಾತ್ರಿ ವೇಳೆ ನಡೆಯುತ್ತಿತ್ತು. ಅಷ್ಟರಲ್ಲಿ ಗೂಡ್ಸ್ ರೈಲೊಂದು ಹಾದು ಹೋಗಿದೆ. ನಂತರ ಇದ್ದಕ್ಕಿದ್ದಂತೆ ಮಣ್ಣು ಕುಸಿಯಲಾರಂಭಿಸಿದೆ. ಕಾರ್ಮಿಕರು ರೈಲ್ವೆ ಹಳಿಯಿಂದ ಅಂದಾಜು 10 ಅಡಿ ಕೆಳ ಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೆಳಸೇತುವೆ ಕುಸಿದಿದ್ದರಿಂದ 6 ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಇಬ್ಬರು ಕೂಲಿ ಕಾರ್ಮಿಕರನ್ನು ಬಚಾವ್ ಮಾಡಲಾಯಿತು. ಆದ್ರೆ ಅವಶೇಷಗಳಡಿಯಲ್ಲಿ ನಾಲ್ವರು ಹೂತು ಹೋಗಿ ಪ್ರಾಣ ಕಳೆದುಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಇದನ್ನೂ ಓದಿ: ಪತ್ನಿ ನೆರವಿಗೆ ಧಾವಿಸಿದ ಪತಿ, ತಂದೆ-ತಾಯಿ ಎಬ್ಬಿಸಲು ಹೋದ ಮಕ್ಕಳು; ವಿದ್ಯುತ್ ಶಾಕ್‌ಗೆ ನಾಲ್ವರು ಬಲಿ