ETV Bharat / bharat

ಮೊಬೈಲ್​ ಹುಚ್ಚ.. ಅತಿಯಾದ ಸೆಲ್​ಫೋನ್​ ಬಳಕೆಯಿಂದ ICU ಸೇರಿದ ಯುವಕ!

author img

By

Published : Nov 28, 2021, 1:23 PM IST

Mobile addiction: ಊಟ, ನಿದ್ರೆಯನ್ನು ಬಿಟ್ಟು ಅತಿಯಾಗಿ ಮೊಬೈಲ್​ ಬಳಕೆ ಮಾಡಿದ್ದರಿಂದ ರಾಜಸ್ಥಾನದ ಅಕ್ರಮ್ ಎಂಬಾತ ಮಾನಸಿಕ ವ್ಯಾಧಿಗೆ ಗುರಿಯಾಗಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

youth mobile addiction
ಮೊಬೈಲ್​ ಹುಚ್ಚ

ಚುರು(ರಾಜಸ್ಥಾನ್): ಈಗಿನ ಯುವಕರು, ಮಕ್ಕಳು ಮೊಬೈಲ್​ ದಾಸರಾಗಿದ್ದಾರೆ ಎಂಬುದು ನಿಸ್ಸಂದೇಹ. ಊಟ, ನಿದ್ರೆಯನ್ನೂ ಮರೆತು ಮೊಬೈಲ್​ ಬಳಸುತ್ತಾರೆ. ಈ ರೀತಿ ಅತಿಯಾದ ಮೊಬೈಲ್​ ಬಳಕೆ ಮಾಡಿ ಯುವಕನೊಬ್ಬ ಮಾನಸಿಕ ರೋಗಕ್ಕೆ ತುತ್ತಾದ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

ಚುರು ಜಿಲ್ಲೆಯ ಅಕ್ರಮ್​(20) ಎಂಬಾತ ಊಟ, ನಿದ್ರೆಯನ್ನೂ ಮಾಡದೇ ಅತಿಯಾದ ಮೊಬೈಲ್​ ಗೀಳಿಗೆ ಒಳಗಾದವ. ಹುಚ್ಚನಂತೆ ವರ್ತಿಸುವ ಅಕ್ರಮ್​ಗೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿವರ:

ಅಕ್ರಮ್​ ಮೊಬೈಲ್​ ಅತಿಯಾಗಿ ಬಳಸುವುದನ್ನು ರೂಢಿ ಮಾಡಿಕೊಂಡಿದ್ದಾನೆ. ಪ್ರತಿದಿನವೂ ರಾತ್ರಿಪೂರ್ತಿ ಮೊಬೈಲ್​ ನೋಡುತ್ತಲೇ ಕಾಲ ಕಳೆದಿದ್ದಾನೆ. ಊಟ, ನಿದ್ರೆಯನ್ನು ತ್ಯಜಿಸಿದ್ದಾನೆ. ಇದು ಅವನ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಅಕ್ರಮ್​ ಅವನ ಕುಟುಂಬಸ್ಥರನ್ನೇ ಗುರುತು ಹಿಡಿಯದಂತಾಗಿದ್ದಾನೆ.

ಇದನ್ನೂ ಓದಿ: ಲಾರಿಗೆ ಗುದ್ದಿದ ಶವಸಂಸ್ಕಾರಕ್ಕೆ ತೆರಳುತ್ತಿದ್ದ ವಾಹನ: ಪ.ಬಂಗಾಳದಲ್ಲಿ 18 ಮಂದಿ ದುರ್ಮರಣ

ಅಕ್ರಮ್​ನ ವರ್ತನೆ ಕಂಡು ಗಾಬರಿಗೊಂಡ ಕುಟುಂಬಸ್ಥರು ಅವನನ್ನು ಮಾನಸಿಕ ವೈದ್ಯರೊಬ್ಬರ ಬಳಿ ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಆತನ ಮೊಬೈಲ್​ ಗೀಳು ಎಷ್ಟಿತ್ತು ಅಂದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೂ ಮೊಬೈಲ್​ ಬಳಸುತ್ತಿದ್ದ. ಇದನ್ನು ಕಂಡು ವೈದ್ಯರೇ ಅಚ್ಚರಿಗೊಂಡಿದ್ದಾರೆ.

ರಾತ್ರಿ ವೇಳೆ ನಿದ್ರೆ ಮಾಡದೇ ಮೊಬೈಲ್​ ಬಳಸಿದ್ದರಿಂದ ಅಕ್ರಮ್​ ಮಾನಸಿಕ ವ್ಯಾಧಿಗೆ ಗುರಿಯಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವ ಅಕ್ರಮ್​ಗೆ ಇದೀಗ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.