ಚೆನ್ನೈ: ಇಲ್ಲಿಂದ ದುಬೈಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ವ್ಯಕ್ತಿ ನೀಡಿದ ಕಾರಣ ಮಾತ್ರ ಅಚ್ಚರಿ ಮೂಡಿಸಿದೆ. ಆತನ ತಂಗಿ ಮತ್ತು ಆಕೆಯ ಪತಿ ದುಬೈಗೆ ತೆರಳಬೇಕಿತ್ತು. ಅವರ ಕಿತ್ತಾಟದಿಂದ ವಿಮಾನ ತಪ್ಪುವ ಹಿನ್ನೆಲೆಯಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ.
ಚೆನ್ನೈನಿಂದ 7.20 ಕ್ಕೆ ಹೊರಡಬೇಕಿದ್ದ ಇಂಡಿಗೋ ವಿಮಾನ ಹಾರಾಟ ನಡೆಸಲು ಕೆಲವೇ ನಿಮಿಷಗಳ ಮುಂಚೆ ಆರೋಪಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ವಿಮಾನದಲ್ಲಿ ಬಾಂಬ್ ಇದೆ ಎಂದು ಹೇಳಿದ್ದ. ರ್ಷಣ ಈ ಬಗ್ಗೆ ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಇಡೀ ವಿಮಾನವನ್ನು ಶೋಧ ನಡೆಸಲಾಯಿತು.
174 ಪ್ರಯಾಣಿಕರು ಈ ವೇಳೆ ಆತಂಕಕ್ಕೀಡಾಗಿದ್ದರು. ತಪಾಸಭೆ ಬಳಿಕ ವಿಮಾನದಲ್ಲಿ ಬಾಂಬ್ ಇಲ್ಲದ್ದನ್ನು ಖಚಿತಪಡಿಸಿಕೊಂಡು ತಡವಾಗಿ ವಿಮಾನ ದುಬೈಗೆ ಹಾರಿತು. ಕರೆ ಬಂದ ಮಾಹಿತಿ ಆಧರಿಸಿ ಚೆನ್ನೈನ ಮನಾಲಿ ಮೂಲದ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.
ವಿಚಾರಣೆಯ ವೇಳೆ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿ, ತನ್ನ ತಂಗಿ ಮತ್ತು ಆಕೆಯ ಪತಿ ದುಬೈಗೆ ಹೋಗಬೇಕಿತ್ತು. ಆದರೆ, ಅವರ ಮಧ್ಯೆ ಕಿತ್ತಾಟವಾಗಿ ತೆರಳಲು ತಡವಾಯಿತು. ವಿಮಾನ ನಿಲ್ಲಿಸಲು ಬಾಂಬ್ ಬೆದರಿಕೆ ಹಾಕಿದೆ ಎಂದು ಬಾಯ್ಬಿಟ್ಟಿದ್ದಾನೆ.