ETV Bharat / bharat

ಬಿಹಾರದಲ್ಲಿ ಮದ್ಯ ನಿಷೇಧ: ಆದರೂ.. ರಸ್ತೆ ಬಳಿ ಅಮಲಿನಲ್ಲಿ ಕುಡುಕನ ಪರದಾಟ! - ಬಿಹಾರದಲ್ಲಿ ಕುಡುಕನ ಪರದಾಟ

ಮದ್ಯದ ಅಮಲಿನಲ್ಲಿ ಕುಡುಕ ಪರದಾಟ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

bihar drunken man video viral
ಮದ್ಯದ ಅಮಲಿನಲ್ಲಿ ಕುಡುಕನ ಪರದಾಟ
author img

By

Published : Mar 19, 2022, 1:26 PM IST

ಜಮುಯಿ(ಬಿಹಾರ): ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಜಾರಿಯಲ್ಲಿದೆ. ಮದ್ಯವನ್ನು ಕುಡಿಯಲು ಅಥವಾ ಮಾರಾಟ ಮಾಡಲು ಅವಕಾಶವಿಲ್ಲ. ಆದರೆ, ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್ ವೈರಲ್​ ಆಗುವ ಅನೇಕ ಫೋಟೋ ವಿಡಿಯೋಗಳು ​ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಅಕ್ರಮ ಮದ್ಯ ಸಾಗಣೆ, ಸ್ಥಳೀಯ ಮದ್ಯ ಉತ್ಪಾದನೆಯ ಶಂಕೆ ಇದೆ. ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಮದ್ಯದ ಅಮಲಿನಲ್ಲಿ ಕುಡುಕನ ಪರದಾಟದ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.

ಮದ್ಯದ ಅಮಲಿನಲ್ಲಿ ಕುಡುಕನ ಪರದಾಟ

ಬಿಹಾರ ಜಮುಯಿ ಪ್ರದೇಶದಲ್ಲಿ ಕುಡುಕನೊಬ್ಬ ಮದ್ಯದ ಅಮಲಿನಲ್ಲಿ ನೃತ್ಯ ಮಾಡುತ್ತಿರುವ, ತನ್ನ ಸೈಕಲ್​ ಅನ್ನು ಚಲಾಯಿಸಲು ಯತ್ನಿಸಿ ಪರದಾಟ ನಡೆಸುತ್ತಿರುವ ಜೊತೆಗೆ ಕೆಲ ಹೊತ್ತು ಅಲ್ಲೇ ಮಲಗಿ ಮತ್ತೆ ಎದ್ದು ಅಮಲಿನಲ್ಲೇ ವಾಲಾಡುತ್ತಿರುವ ವಿಡಿಯೋ ವೈರಲ್​ ಆಗಿದೆ.

ಸೈಕಲ್​ನಲ್ಲಿ ಹೋಗಲು ಯತ್ನಿಸುತ್ತಿರುವುದು, ಕೆಲವೊಮ್ಮೆ ಸೈಕಲ್ ಅನ್ನು ಎತ್ತುತ್ತಿರುವುದು, ಕೆಲವೊಮ್ಮೆ ನೆಲದಿಂದ ಮೇಲೇಳಲು ಪ್ರಯತ್ನಿಸುತ್ತಿರುವುದು, ಸೈಕಲ್​ ಸರಪಳಿ ಸರಿಪಡಿಸುತ್ತಿರುವುದು, ಸೈಕಲ್​ ಸ್ಟ್ಯಾಂಡ್​ನೊಂದಿಗೂ ಏನೋ ಮಾಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: ಸಿನಿಮಾ ನೋಡಲು ತೆರಳುತ್ತಿದ್ದ ಮೂವರು ಬಾಲಕರ ಮೇಲೆ ಹಲ್ಲೆ, ದರೋಡೆ ಯತ್ನ

ಈ ಕುಡುಕನ ಪರದಾಟ ಒಂದೂವರೆ ಗಂಟೆಗಳ ಕಾಲ ನಡೆದಿದೆ. ಜಮುಯಿ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನೂರು ಮೀಟರ್ ದೂರದಲ್ಲಿರುವ ಜಮುಯಿ ಲಖಿಸರಾಯ್ ರಸ್ತೆಯಲ್ಲಿ ಈ ದೃಶ್ಯ ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.