ETV Bharat / bharat

ವಿದೇಶಕ್ಕೆ ಡ್ರಗ್ಸ್​ ಸಾಗಿಸಲು ಯುವಕನ 'ಮಾಸ್ಟರ್ ಪ್ಲಾನ್'​.. ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೀಗೆ!

author img

By

Published : May 2, 2022, 4:33 PM IST

ಕೊರಿಯರ್ ಕಂಪನಿ ಮೂಲಕ ವಿದೇಶಕ್ಕೆ ಡ್ರಗ್ಸ್​ ಸಾಗಣೆ ಮಾಡ್ತಿದ್ದ ಯುವಕನೊಬ್ಬನನ್ನು ಬಂಧನ ಮಾಡುವಲ್ಲಿ ಬೆಂಗಳೂರು ಕಸ್ಟಮ್ಸ್​ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

DRUGS SUPPLY TO ABROAD
DRUGS SUPPLY TO ABROAD

ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶ ಮೂಲದ ಯುವಕನೊಬ್ಬ ಪೊಲೀಸರ ಕೈಗೆ ಸಿಗದ ರೀತಿಯಲ್ಲಿ ವಿದೇಶಕ್ಕೆ ಡ್ರಗ್ಸ್​​ ಕಳುಹಿಸಲು ಹೋಗಿ, ಇದೀಗ ಖಾಕಿ ಪಡೆ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಜಯವಾಡದಿಂದ ಆಸ್ಟ್ರೇಲಿಯಾಕ್ಕೆ ಕೊರಿಯರ್​​​ ಕಂಪನಿ ಮೂಲಕ ಡ್ರಗ್ಸ್​​ ಸಾಗಣೆ ಮಾಡ್ತಿದ್ದ ಈ ವ್ಯಕ್ತಿ ಬೆಂಗಳೂರು ಕಸ್ಟಮ್ಸ್​​ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ವಿಜಯವಾಡದ ಭಾರತಿ ನಗರದ ಕೊರಿಯರ್​ ಕಂಪನಿ ಮೂಲಕ ಅಕ್ರಮ ಮಾದಕ ದ್ರವ್ಯ ಆಸ್ಟ್ರೇಲಿಯಾಗೆ ರವಾನೆ ಮಾಡ್ತಿದ್ದನು. ಬೆಂಗಳೂರಿನ ಕಸ್ಟಮ್ಸ್​ ಅಧಿಕಾರಿಗಳು ವಿಜಯವಾಡದಿಂದ ಬಂದಿರುವ ಪಾರ್ಸೆಲ್​ ತಪಾಸಣೆಗೊಳಪಡಿಸಿದಾಗ ಈ ಡ್ರಗ್ಸ್ ಪತ್ತೆಯಾಗಿದ್ದು, ಆರೋಪಿ ಗೋಪಿಸಾಯಿ ಎಂಬಾತನ ಬಂಧಿಸಿದ್ದಾರೆ. ಗೋಪಿಸಾಯಿ ಮೂಲತಃ ಪಲ್ನಾಡು ಜಿಲ್ಲೆಯವನಾಗಿದ್ದು, ಇಂಜಿನಿಯರಿಂಗ್ ಮುಗಿದ ಬಳಿಕ ಹೈದರಾಬಾದ್​ನಲ್ಲಿ ಕೆಲಸ ಮಾಡ್ತಿದ್ದಾನೆ.

ಈ ವರ್ಷದ ಜನವರಿ ತಿಂಗಳಲ್ಲಿ ವಿಜಯವಾಡದ ಭಾರತೀನಗರದಲ್ಲಿರುವ ಡಿಎಸ್​ಟಿ ಕೊರಿಯರ್​​ ಮೂಲಕ ಆಸ್ಟ್ರೇಲಿಯಾಕ್ಕೆ ಪಾರ್ಸೆಲ್ ಮಾಡಿದ್ದಾನೆ. ಈ ವೇಳೆ, ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ಬ ಪಾರ್ಸೆಲ್ ಕಳುಹಿಸಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಗೋಪಿಗೆ ತಿಳಿಸಿದ್ದನು. ಗೋಪಿ ನೀಡಿರುವ ಆಧಾರ್​ ಕಾರ್ಡ್ ಜೆರಾಕ್ಸ್ ಸ್ಪಷ್ಟವಾಗಿರಲಿಲ್ಲ. ಹೀಗಾಗಿ ಮತ್ತೊಮ್ಮೆ ನೀಡುವಂತೆ ತಿಳಿಸಿದ್ದಾರೆ.

ಈ ವೇಳೆ ಗೋಪಿ, ತಾನು ಯಾವಾಗಲೂ ಇಲ್ಲಿಂದಲೇ ಕೊರಿಯರ್ ಮಾಡುವುದಾಗಿ ತಿಳಿಸಿದ್ದು, ಆಧಾರ್ ಕಾರ್ಡ್​ನ ಇನ್ನೊಂದು ಪ್ರತಿ ನೀಡಲು ಸಾಧ್ಯವಿಲ್ಲ ಎಂದಿದ್ದಾನೆ. ಈ ವೇಳೆ, ಅಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ ತನ್ನ ಆಧಾರ್ ಕಾರ್ಡ್ ಸಂಖ್ಯೆ ನೀಡಿ, ಆಸ್ಟ್ರೇಲಿಯಾಗೆ ಕೊರಿಯರ್ ಮಾಡಿದ್ದಾನೆ. ಆದರೆ, ಪಾರ್ಸೆಲ್​ನ ಮೇಲೆ ಸರಿಯಾದ ವಿವರ ಇರದ ಕಾರಣ ಕೊರಿಯರ್​​ ಕೆನಡಾಗೆ ಹೋಗಿ ವಾಪಸ್ ಆಗಿದೆ. ಅದು ಬೆಂಗಳೂರಿಗೆ ಬರುತ್ತಿದ್ದಂತೆ ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿಗಳು ಪಾರ್ಸೆಲ್ ವಶಕ್ಕೆ ಪಡೆದುಕೊಂಡು, ಪರಿಶೀಲನೆಗೊಳಪಡಿದಾಗ ಅದರಲ್ಲಿ 4.49 ಕೆಜಿ ಡ್ರಗ್ಸ್​ ಇರುವುದು ಪತ್ತೆಯಾಗಿದೆ. ಈ ವೇಳೆ, ಅದರ ಮೇಲಿನ ಆಧಾರ್ ಕಾರ್ಡ್ ಸಂಖ್ಯೆಯಿಂದ ಆರೋಪಿಯನ್ನ ಗುರುತಿಸಿದ್ದು, ಏಪ್ರಿಲ್ 27ರಂದು ಬಂಧನ ಮಾಡಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ವ್ಯಾಪಾರಿಗಳಿಗೆ ನೀರಿನ ಬಾಟಲಿ ನೀಡಿ, ಎಲ್ಲರ ಮನಗೆದ್ದ ಪುಟ್ಟ ಬಾಲಕ!

ಕಸ್ಟಮ್ಸ್​ ಅಧಿಕಾರಿಗಳು ಕೊರಿಯರ್​ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯನ್ನ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ,ನಿಜವಾದ ಆರೋಪಿಯ ಮಾಹಿತಿ ಲಭ್ಯವಾಗಿದೆ. ಇದರ ಬೆನ್ನಲ್ಲೇ ಆರೋಪಿ ಗೋಪಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದೀಗ ಹೆಚ್ಚಿನ ತನಿಖೆಗೊಳಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.