ETV Bharat / bharat

ಇದ್ದಕ್ಕಿದ್ದಂತೆ ಬಸ್​ನಲ್ಲಿ ಬೆಂಕಿ ಕಾಣಿಸಿ 30 ಜನ ಸಜೀವ ದಹನ ಆಗ್ಬಿಡ್ತಿದ್ದರು..

ರಹತ್ನಿ ಮತ್ತು ಪಿಂಪ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ, ಬಸ್‌ನ ಮುಂಭಾಗ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಈ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..

ಇದ್ದಕ್ಕಿದ್ದಂತೆ ಬಸ್​ನಲ್ಲಿ ಬೆಂಕಿ
ಇದ್ದಕ್ಕಿದ್ದಂತೆ ಬಸ್​ನಲ್ಲಿ ಬೆಂಕಿ
author img

By

Published : Oct 27, 2021, 5:43 PM IST

ಪುಣೆ (ಮಹಾರಾಷ್ಟ್ರ): ಪಿಂಪ್ರಿ-ಚಿಂಚ್ವಾಡ್​ ಮಾರ್ಗ ಮಧ್ಯೆ ಬಸ್​ನಲ್ಲಿ ಬೆಂಕಿ ಕಾಣಿಸಿತ್ತು. ನಗರದ ದಾಪೋಡಿ ಸೇತುವೆ ಮೇಲೆ ಪಿಎಂಪಿಎಂಎಲ್ ಬಸ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಸಮಯ ಪ್ರಜ್ಞೆಯಿಂದ ಚಾಲಕ 30 ಪ್ರಯಾಣಿಕರ ಜೀವ ರಕ್ಷಣೆ ಮಾಡಿದ್ದಾರೆ.

ಮಾಹಿತಿಯ ಪ್ರಕಾರ, ಪಿಂಪಲ್ ಗುರವ್​ನಿಂದ ಪುಣೆ ಕಡೆಗೆ ಹೋಗುತ್ತಿದ್ದ ಬಸ್​ನ ಇಂಜಿನ್​ನಿಂದ ಇದ್ದಕ್ಕಿದ್ದಂತೆ ಹೊಗೆ ಹೊರ ಬರಲು ಆರಂಭಿಸಿದೆ. ಇದನ್ನು ಕಂಡ ಚಾಲಕ ಲಕ್ಷ್ಮಣ್ ಹಜಾರೆ ಕೂಡಲೇ ಬಸ್​ ನಿಲ್ಲಿಸಿದ್ದಾರೆ.

ಅಲ್ಲದೇ, ಎಲ್ಲ ಪ್ರಯಾಣಿಕರಿಗೂ ಬಸ್​ನಿಂದ ಕೆಳಗಿಳಿಯುವಂತೆ ಹೇಳಿದ್ದಾರೆ. ನಂತರ ಬಸ್​ಗೆ ತೀವ್ರವಾಗಿ ಬೆಂಕಿ ತಗುಲಿದ್ದು, ಹೊತ್ತಿ ಉರಿದಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ರಹತ್ನಿ ಮತ್ತು ಪಿಂಪ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ, ಬಸ್‌ನ ಮುಂಭಾಗ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಈ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.