ಕರ್ನೂಲ್, ಆಂಧ್ರಪ್ರದೇಶ: ಲಾರಿ ಚಾಲಕನೊಬ್ಬನ ದರ್ಪ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಡೆಯಲು ಯತ್ನಿಸಿದ ಟೋಲ್ ಗೇಟ್ ಸಿಬ್ಬಂದಿ ಲೆಕ್ಕಿಸದೇ ಲಾರಿ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಕರ್ನೂಲ್ ಬಳಿಯ ಅಮತಕಾಡು ಟೋಲ್ಗೇಟ್ ಬಳಿ ಹರಿಯಾಣ ಮೂಲದ ಲಾರಿ ಚಾಲಕನೊಬ್ಬ ತನ್ನ ಆಟಾಟೋಪ ಮೆರೆದಿದ್ದಾನೆ.
ಟೋಲ್ ಗೇಟ್ ಬಳಿ ಟೋಲ್ ಸಿಬ್ಬಂದಿ ಶ್ರೀನಿವಾಸನ್ ಲಾರಿಯನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಈ ವೇಳೆ, ಲಾರಿಯನ್ನು ಚಾಲಕ ನಿಲ್ಲಿಸಿಲ್ಲ. ಈ ವೇಳೆ ಶ್ರೀನಿವಾಸನ್ ಲಾರಿಯ ಮುಂಭಾಗ ಹತ್ತಲು ಯತ್ನಿಸಿದ್ದಾನೆ. ಆದರೂ ಲಾರಿ ನಿಲ್ಲಿಸದ ಚಾಲಕ ಸುಮಾರು 10 ಕಿಲೋಮೀಟರ್ ದೂರದವರೆಗೂ ಶ್ರೀನಿವಾಸ್ ಅವರನ್ನು ಲಾರಿಯ ಮುಂಭಾಗದಲ್ಲಿಯೇ ಇರಿಸಿ, ಕೊಂಡೊಯ್ದಿದ್ದಾನೆ. ನಾಲ್ಕು ಬೈಕ್ಗಳ ಮೂಲಕ ಟೋಲ್ ಗೇಟ್ ಸಿಬ್ಬಂದಿ ಲಾರಿ ಹಿಂಬಾಲಿಸಿದ್ದು, ವೆಲ್ದುರ್ತಿ ಎಂಬಲ್ಲಿ ಲಾರಿಯನ್ನು ತಡೆದು ಶ್ರೀನಿವಾಸನ್ನನ್ನು ರಕ್ಷಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಆದಿವಾಸಿ ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜಾಮೀನು ಮಂಜೂರು