ETV Bharat / bharat

ಒಂದು ಕ್ವಿಂಟಲ್​ಗೂ ಅಧಿಕ ಚಿನ್ನ ಜಪ್ತಿ! ಡಿಆರ್​ಐ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ

ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಸೂಡಾನ್ ಪ್ರಜೆಗಳ ಚಿನ್ನದ ಕಳ್ಳಸಾಗಣೆ ಜಾಲವನ್ನು ಪತ್ತೆ ಹಚ್ಚಿದ್ದಾರೆ.

dri-recovered-more-than-1-quintal-gold-from 10-smuggler
ಡಿಆರ್​ಐ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಒಂದು ಕ್ವಿಂಟಲ್​ಗೂ ಅಧಿಕ ಚಿನ್ನ ಜಪ್ತಿ
author img

By

Published : Feb 21, 2023, 10:16 PM IST

ಪಾಟ್ನಾ (ಬಿಹಾರ): ಕಂದಾಯ ಗುಪ್ತಚರ ನಿರ್ದೇಶನಾಲಯವು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಸೂಡಾನ್ ಪ್ರಜೆಗಳ ಬೃಹತ್ ಚಿನ್ನ ಕಳ್ಳಸಾಗಣೆ ಜಾಲವನ್ನು ಕಂಡುಹಿಡಿದಿದ್ದಾರೆ. ಬಿಹಾರದ ಪಾಟ್ನಾ ಮತ್ತು ಮಹಾರಾಷ್ಟ್ರದ ಪುಣೆ ಹಾಗೂ ಮುಂಬೈನಲ್ಲಿ ದಾಳಿ ನಡೆಸಿ 51 ಕೋಟಿ ರೂಪಾಯಿ ಮೌಲ್ಯದ 101.7 ಕೆಜಿ ಕಳ್ಳಸಾಗಣೆ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

  • In a pan-India Op, Directorate of Revenue Intelligence (DRI) busted a gold smuggling syndicate of Sudanese nationals operating through Nepal border. DRI in different interceptions in Patna, Pune & Mumbai seized a total of 101.7 kg of smuggled gold valued at approx Rs 51 Cr: DRI pic.twitter.com/OBhaCOtwLT

    — ANI (@ANI) February 21, 2023 " class="align-text-top noRightClick twitterSection" data=" ">

ಅಕ್ರಮ ಜಾಲದಲ್ಲಿದ್ದ 10 ಜನ ಕಳ್ಳಸಾಗಾಣಿಕೆದಾರರು ಸಿಕ್ಕಿಬಿದ್ದಿದ್ದಾರೆ. ಈ ಪೈಕಿ ಏಳು ಜನರು ಸುಡಾನ್ ಪ್ರಜೆಗಳಾದರೆ, ಮೂವರು ಭಾರತೀಯರು. ನೇಪಾಳ ಗಡಿ ಮೂಲಕ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದು ಬಂದಿದೆ. ಭಾರತ-ನೇಪಾಳ ಗಡಿ ಮೂಲಕ ಪಾಟ್ನಾಗೆ ಕಳ್ಳಸಾಗಾಣಿಕೆದಾರರು ಬರುತ್ತಿದ್ದರು. ನಂತರ ವಿಮಾನ ಮತ್ತು ರೈಲಿನ ಮೂಲಕ ಅಕ್ರಮ ವಹಿವಾಟು ನಡೆಸುತ್ತಿದ್ದರು.

ಪಾಟ್ನಾದಲ್ಲಿ 37 ಕೆಜಿ ಚಿನ್ನದೊಂದಿಗೆ ಮೂವರು ಸೂಡಾನ್ ಪ್ರಜೆಗಳನ್ನು ಪಾಟ್ನಾದಲ್ಲಿ ಬಂಧಿಸಲಾಗಿದೆ. ಈ ಸ್ಮಗ್ಲರ್‌ಗಳು ಪಾಟ್ನಾ ಜಂಕ್ಷನ್‌ನಿಂದ ಮುಂಬೈಗೆ ರೈಲು ಹಿಡಿಯಲು ಹೊರಟಿದ್ದರು. ಜೊತೆಗೆ, 74 ಲಕ್ಷ ರೂ ಮೌಲ್ಯದ ವಿದೇಶಿ ಕರೆನ್ಸಿ ಮತ್ತು 63 ಲಕ್ಷ ಬೆಲೆ ಭಾರತೀಯ ನೋಟುಗಳನ್ನೂ ಡಿಆರ್​ಐ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ₹100 ಕೋಟಿ ಮೌಲ್ಯದ 14 ಕೆಜಿ ಹೆರಾಯಿನ್ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.