ETV Bharat / bharat

ಮಿಲಿಟರಿ ಬಿಡಿಭಾಗಗಳು, ಯುಎವಿಯನ್ನು ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಡಿಆರ್‌ಡಿಒ

ಸಿವಿಆರ್‌ಡಿಇ ಎಸ್‌ಎವಿಎಫ್‌ಟಿ ಎಂದು ಕರೆಯಲ್ಪಡುವ ಯುಎವಿಯ ವಿಭಿನ್ನ ವರ್ಗಕ್ಕಾಗಿ ಆರ್‌ಎಲ್‌ಜಿಯನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಇದು ಒಂದು ಟನ್ ಲೋಡ್-ಬೇರಿಂಗ್ ಸಾಮರ್ಥ್ಯವನ್ನು ಹೊಂದಿದೆ..

ನೌಕೆಯ 18 ಬಗೆಯ ಫಿಲ್ಟರ್‌ಗಳನ್ನು ಹಸ್ತಾಂತರಿಸುವ ಸಮಾರಂಭ

author img

By

Published : Jan 10, 2021, 10:06 PM IST

ನವದೆಹಲಿ : ತಪಸ್ ಮತ್ತು ಸ್ವಿಫ್ಟ್​​ ಯುಎವಿಗಳ ರಿಟ್ರ್ಯಾಕೇಬಲ್​​ ಲ್ಯಾಂಡಿಂಗ್ ಗೇರ್ ಸಿಸ್ಟಮ್ಸ್ ಮತ್ತು ಪಿ -75 ಜಲಾಂತರ್ಗಾಮಿ ನೌಕೆಯ 18 ಬಗೆಯ ಫಿಲ್ಟರ್‌ಗಳನ್ನು ಹಸ್ತಾಂತರಿಸುವ ಸಮಾರಂಭವು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯೋಗಾಲಯ, ಯುದ್ಧ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ಸಿವಿಆರ್‌ಡಿಇ) ಸಮ್ಮುಖದಲ್ಲಿ ಚೆನ್ನೈನಲ್ಲಿ ಭಾನುವಾರ ನಡೆಯಿತು.

ಯುಎವಿಯನ್ನು ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಡಿಆರ್‌ಡಿಒ
ನೌಕೆಯ 18 ಬಗೆಯ ಫಿಲ್ಟರ್‌ಗಳನ್ನು ಹಸ್ತಾಂತರಿಸುವ ಸಮಾರಂಭ

ಡಿಎಂಕೆ ಮುಖಂಡ ಡಾ. ಕಲಾನಿಧಿ ವೀರಸ್ವಾಮಿ, ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿ ಸದಸ್ಯ ಡಾ.ಡಿ.ಸತೀಶ್ ರೆಡ್ಡಿ, ಡಿಡಿಆರ್&ಡಿ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷರಾದ ಪಿ.ಕೆ. ಮೆಹ್ತಾ, ಮತ್ತು ಡಿಜಿ (ಎಸಿಇ) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಿವಿಆರ್‌ಡಿಇ ತಪಸ್ ಯುಎವಿಗಾಗಿ ಸ್ಥಳೀಯವಾಗಿ ರಿಟ್ರ್ಯಾಕೇಬಲ್ ಲ್ಯಾಂಡಿಂಗ್ ಗೇರ್ (ಆರ್‌ಎಲ್‌ಜಿ) ವ್ಯವಸ್ಥೆಗಳನ್ನು ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ. ಆರ್‌ಎಲ್‌ಜಿ ಮೂರು ಟನ್‌ಗಳಷ್ಟು ಹೊರೆ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಟ್ರೈಸಿಕಲ್, ಹೈಡ್ರೊ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್​​ನನ್ನು ಈಗ ಕೊಯಮತ್ತೂರಿನಲ್ಲಿರುವ ಒಂದು ಉದ್ಯಮವು ತಯಾರಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ:ಗಗನ್​ಯಾನ್.. ತರಬೇತಿಗಾಗಿ ರಷ್ಯಾಗೆ ತೆರಳಲಿದ್ದಾರೆ ಇಬ್ಬರು ಫ್ಲೈಟ್ ಸರ್ಜನ್‌ಗಳು

ಉದ್ಯಮವು ಅಭಿವೃದ್ಧಿಪಡಿಸಿದ ಮೊದಲ ರಿಟ್ರ್ಯಾಕೇಬಲ್ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯನ್ನು ಚೆನ್ನೈನ ನಿರ್ದೇಶಕ ಸಿವಿಆರ್‌ಡಿಇ ಅವರು ಎಡಿಇ ಬೆಂಗಳೂರಿನ ನಿರ್ದೇಶಕರಿಗೆ ಹಸ್ತಾಂತರಿಸಿದರು.

ಸಿವಿಆರ್‌ಡಿಇ ಎಸ್‌ಎವಿಎಫ್‌ಟಿ ಎಂದು ಕರೆಯಲ್ಪಡುವ ಯುಎವಿಯ ವಿಭಿನ್ನ ವರ್ಗಕ್ಕಾಗಿ ಆರ್‌ಎಲ್‌ಜಿಯನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಇದು ಒಂದು ಟನ್ ಲೋಡ್-ಬೇರಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಈ ಫಿಲ್ಟರ್‌ಗಳನ್ನು ಈಗ ಹೈದರಾಬಾದ್ ಮತ್ತು ಚೆನ್ನೈ ಮೂಲದ ಭಾರತೀಯ ಕೈಗಾರಿಕೆಗಳ ಸಹಾಯದಿಂದ ತಯಾರಿಸಲಾಗುತ್ತಿದೆ. ಈ ದೇಶೀಕರಣ ಯೋಜನೆಗೆ ಡಿಆರ್‌ಡಿಒ ಮತ್ತು ನೌಕಾಪಡೆ ಜಂಟಿಯಾಗಿ ಹಣ ನೀಡಿದ್ದವು ಮತ್ತು ತಂತ್ರಜ್ಞಾನವನ್ನು ಯಶಸ್ವಿಯಾಗಿ ಉದ್ಯಮಕ್ಕೆ ವರ್ಗಾಯಿಸಲಾಗುತ್ತದೆ. ಈ ಫಿಲ್ಟರ್‌ಗಳ ಎರಡು ಸೆಟ್‌ಗಳನ್ನು ಡಿಕ್ಯೂಎ (ಎನ್) ಯಿಂದ ಅರ್ಹತೆ ಪಡೆದು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.