ಬೆಂಗಳೂರು: ಭಾರತಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ತೇಜಸ್ ತನ್ನ 5ನೇ ತಲೆಮಾರಿನ ಪೈಥಾನ್-5 ಏರ್ -ಟು-ಏರ್ ಕ್ಷಿಪಣಿ (ಎಎಎಂ) ಆಗಸದಲ್ಲಿ ಮೊದಲ ಪ್ರಯೋಗ ನಡೆಸಿದೆ.
ತೇಜಸ್‌ನಲ್ಲಿ ಈಗಾಗಲೇ ಸಂಯೋಜಿತವಾದ ಡರ್ಬಿ ಬಿಯಾಂಡ್ ವಿಷುಯಲ್ ರೇಂಜ್ (ಬಿವಿಆರ್) ಎಎಎಮ್‌ನ ವರ್ಧಿತ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿ ಪ್ರಯೋಗಗಳು ನಡೆಸಲಾಗಿದೆ ಎಂದು ಡಿಆರ್‌ಡಿಒ ತಿಳಿಸಿದೆ.
ಡರ್ಬಿ ಕ್ಷಿಪಣಿ ಹೆಚ್ಚಿನ ವೇಗದ ಕುಶಲ ವೈಮಾನಿಕ ಗುರಿಯ ಮೇಲೆ ನೇರ ದಾಳಿ ಸಾಧಿಸಿತು. ಪೈಥಾನ್ ಕ್ಷಿಪಣಿಗಳು ಸಹ ಶೇ 100ರಷ್ಟು ಗುರಿ ಮುಟ್ಟಿದೆ. ಇದರಿಂದಾಗಿ ಅವುಗಳ ಸಂಪೂರ್ಣ ಸಾಮರ್ಥ್ಯವನ್ನು ದೃಢೀಕರಿಸಲಾಗುತ್ತದೆ. ಪ್ರಯೋಗಗಳು ಎಲ್ಲ ಯೋಜಿತ ಉದ್ದೇಶಗಳನ್ನು ಪೂರೈಸಿದವು ಎಂದಿದೆ.
ಈ ಪ್ರಯೋಗಗಳ ಮೊದಲು ಏವಿಯಾನಿಕ್ಸ್, ಫೈರ್-ಕಂಟ್ರೋಲ್ ರೇಡಾರ್, ಕ್ಷಿಪಣಿ ಶಸ್ತ್ರಾಸ್ತ್ರಗಳಂತಹ ತೇಜಸ್ನಲ್ಲಿರುವ ವಿಮಾನ ವ್ಯವಸ್ಥೆಗಳೊಂದಿಗೆ ಕ್ಷಿಪಣಿಯ ಸಂಯೋಜನೆ ನಿರ್ಣಯಿಸಲು ಬೆಂಗಳೂರಿನಲ್ಲಿ ಕ್ಷಿಪಣಿ ಕ್ಯಾರೇಜ್ ಹಾರಾಟ ಪರೀಕ್ಷೆಗಳನ್ನು ನಡೆಸಲಾಯಿತು.
ಪೈಥಾನ್ - 5 ಕ್ಷಿಪಣಿ ಲೈವ್ ಫೈರಿಂಗ್ ಎಲ್ಲ ಅಂಶಗಳು ಮತ್ತು ದೃಷ್ಟಿಗೋಚರ ಶ್ರೇಣಿಗಳನ್ನು ಮೀರಿ ಗುರಿ ತಲುಪಿವೆ. ಎಲ್ಲ ಲೈವ್ ಫರಿಂಗ್‌ಗಳಲ್ಲಿ ಕ್ಷಿಪಣಿ ವೈಮಾನಿಕ ಗುರಿ ಹೊಡೆದುರುಳಿಸಿವೆ.
ರಾಷ್ಟ್ರೀಯ ವಿಮಾನ ಪರೀಕ್ಷಾ ಕೇಂದ್ರಕ್ಕೆ (ಎನ್‌ಎಫ್‌ಟಿಸಿ) ಸೇರಿದ ಭಾರತೀಯ ವಾಯುಪಡೆ (ಐಎಎಫ್) ಟೆಸ್ಟ್ ಪೈಲಟ್‌ಗಳು ಹಾರಾಟ ನಡೆಸಿದ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ (ಎಡಿಎ) ತೇಜಸ್ ವಿಮಾನದಿಂದ ಈ ಕ್ಷಿಪಣಿಗಳನ್ನು ಹಾರಿಸಲಾಯಿತು.