ಪೋಖ್ರಾನ್: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿಸ್ತರಿತ ವಲಯ ಸಾಮರ್ಥ್ಯದ ಪಿನಾಕ ರಾಕೆಟ್ ವ್ಯವಸ್ಥೆಯ ಪರೀಕ್ಷಾರ್ಥ ಸರಣಿ ಪ್ರಯೋಗ ಯಶಸ್ವಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ಪೋಖ್ರಾನ್ ಪರೀಕ್ಷಾ ವಲಯದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ.
ಫೈರಿಂಗ್ ರೇಂಜ್ ಅನ್ನು ಮೂರು ದಿನಗಳಿಂದ ವಿವಿಧ ಹಂತಗಳಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದು, ನಿರೀಕ್ಷಿತ ಫಲಿತಾಂಶ ಲಭ್ಯವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಸೇನೆಯ ಸಹಯೋಗದಲ್ಲಿ ಡಿಆರ್ಡಿಒ ತಜ್ಞರು ಈ ಪ್ರಯೋಗ ನಡೆಸಿದ್ದು, ಖಾಸಗಿ ಉದ್ದಿಮೆ ಈ ರಾಕೆಟ್ ವ್ಯವಸ್ಥೆ ತಯಾರಿಸಿದೆ.
ಪಿನಾಕ ಎಂಕೆ-I ರಾಕೆಟ್ ವ್ಯವಸ್ಥೆ 40 ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದರೆ, ಪಿನಾಕ II 60 ಕಿ.ಮೀ ದೂರವಿರುವ ಗುರಿ ತಲುಪಲು ಸಮರ್ಥ ಹೊಂದಿವೆ. ಪಿನಾಕ - ಇಆರ್ (ಎಂಕೆ-1 ಆವೃತ್ತಿ) ನ ಶ್ರೇಣಿ ಎಷ್ಟು ದೂರು ಸಾಗಲಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಎಲ್ಲ ರಾಕೆಟ್ಗಳು ನಿರ್ದಿಷ್ಟ ಗುರಿ ಹೊಂದುವಲ್ಲಿ ಯಶಸ್ವಿಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
-
#WATCH | DRDO and Indian Air Force flight-tested indigenously designed and developed helicopter launched stand-off anti-tank (SANT) Missile from Pokhran range on today pic.twitter.com/nzdcPTWwAR
— ANI (@ANI) December 11, 2021 " class="align-text-top noRightClick twitterSection" data="
">#WATCH | DRDO and Indian Air Force flight-tested indigenously designed and developed helicopter launched stand-off anti-tank (SANT) Missile from Pokhran range on today pic.twitter.com/nzdcPTWwAR
— ANI (@ANI) December 11, 2021#WATCH | DRDO and Indian Air Force flight-tested indigenously designed and developed helicopter launched stand-off anti-tank (SANT) Missile from Pokhran range on today pic.twitter.com/nzdcPTWwAR
— ANI (@ANI) December 11, 2021
ಪಿನಾಕ ರಾಕೆಟ್ಗಳು ಈಗಾಗಲೇ ಕಳೆದ ಒಂದು ದಶಕದಿಂಧ ಭಾರತೀಯ ಸೇನೆಯಲ್ಲಿದ್ದು, ಇದೀಗ ಹೆಚ್ಚಿನ ಶ್ರೇಣಿಯ ರಾಕೆಟ್ಗಳು, ಸುಧಾರಿತ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಂಡಿವೆ.