ಇಡುಕ್ಕಿ (ಕೇರಳ): ಜಿಲ್ಲೆಯ ರಾಜಕ್ಕಾಡ್ ಪಝವಿಡುತಿಯ ಜನ ಮತ ಕೇಳಲು ಬಂದ ಓರ್ವ ವ್ಯಕ್ತಿಯನ್ನು ನೋಡಿ ನಿಜಕ್ಕೂ ಆಶ್ಚರ್ಯಚಕಿತರಾಗಿದ್ದರು. ಯಾಕೆಂದರೆ, ಸಚಿವ ಎಂ ಎಂ ಮಣಿ ಅವರನ್ನೇ ಹೋಲುವ ವ್ಯಕ್ತಿ ಮತ ಕೇಳಲು ಬಂದಿದ್ದರು. ಸಚಿವರನ್ನೇ ಹೋಲುವ ವ್ಯಕ್ತಿ ಬಂದಿದ್ದರಿಂದ ಜನ ಸ್ವತಃ ಸಚಿವರೇ ನಮ್ಮೂರಿಗೆ ಬಂದಿದ್ದಾರೆ ಎಂದುಕೊಂಡಿದ್ದರು.
ಹೀಗೆ ಮತ ಕೇಳಲು ಬಂದ ಸಚಿವರನ್ನೇ ಹೋಲುವ ವ್ಯಕ್ತಿಯ ಹೆಸರು ಪಪ್ಪಚ್ಚನ್. ಇವರು ಸಚಿವ ಎಂ ಎಂ ಮಣಿಯ ದೊಡ್ಡ ಅಭಿಮಾನಿ. (ಸಚಿವ ಮಣಿಯನ್ನು ಜನರು ಸಾಮಾನ್ಯವಾಗಿ ಮಣಿ ಆಶಾನ್ ಎಂದು ಕರೆಯುತ್ತಾರೆ) ನೋಡಲು ಇವರು ಥೇಟ್ ಸಚಿವರಂತೆ ಕಾಣುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಉಡುಂಬಂಚೋಲ ಕ್ಷೇತ್ರದಿಂದ ಸ್ಪರ್ಧಿಸಿರುವ ಎಂ ಎಂ ಮಣಿ ಪರವಾಗಿ ಪಪ್ಪಚ್ಚನ್ ಮತಯಾಚಿಸುತ್ತಿದ್ದಾರೆ.
ಓದಿ : ಎಐಎಡಿಎಂಕೆ ಗೆದ್ದರೆ ವಿಜಯೋತ್ಸವ ಬಿಜೆಪಿಯದ್ದಾಗಿರುತ್ತೆ.. ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಮನವಿ
ಪಪ್ಪಚ್ಚನ್ ಮೈಕಟ್ಟು, ನಡವಳಿಕೆ ಮತ್ತು ವಸ್ತ್ರಧಾರಣೆಯಲ್ಲಿ ಥೇಟ್ ಸಚಿವ ಮಣಿ ಆಶಾನ್ ಅವರನ್ನೇ ಹೋಲುತ್ತಾರೆ. ಇವರು ಇಡುಕ್ಕಿಯ ರಾಜಕ್ಕಾಡ್‌ನಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಅನೌನ್ಸರ್ ಮತ್ತು ಶುಲ್ಕ ಸಂಗ್ರಹಕಾರರಾಗಿದ್ದಾರೆ. ಪಪ್ಪನ್ ಕೂಡ ಹಳೆಯ ಕಾಲದ ಪಕ್ಷದ ಕಾರ್ಯಕರ್ತರಾಗಿದ್ದರು.
ಈಗ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರೂ, ಪಪ್ಪನ್ ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ. ಈಗಲೂ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಚುನಾವಣಾ ಪ್ರಚಾರದಲ್ಲಿ ತೊಡಗುವ ಪಪ್ಪಚ್ಚನ್, ಈ ಬಾರಿಯೂ ಎಂ ಎಂ ಮಣಿ ಗೆಲ್ಲುತ್ತಾರೆ ಎಂಬ ಪೂರ್ಣ ವಿಶ್ವಾಸದಲ್ಲಿದ್ದಾರೆ.