ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿರುವ ಶ್ರೀರಾಮನ ಭವ್ಯ ಮಂದಿರ ಮುಂದಿನ ಮೂರು ವರ್ಷಗಳಲ್ಲಿ ನಿರ್ಮಾಣಗೊಳ್ಳಲಿದ್ದು, ಅದಕ್ಕಾಗಿ ಆರಂಭಗೊಂಡಿದ್ದ ಮನೆ ಮನೆ ದೇಣಿಗೆ ಸಂಗ್ರಹ ಇದೀಗ ನಿಲ್ಲಿಸಲಾಗಿದೆ ಎಂದು ಚಂಪತಿ ರಾಯ್ ತಿಳಿಸಿದ್ದಾರೆ.
ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತಿ ರಾಯ್ ಇದೇ ವಿಷಯವಾಗಿ ಮಾತನಾಡಿದ್ದು, ಮನೆ ಮನೆ ದೇಣಿಗೆ ಸಂಗ್ರಹ ಇದೀಗ ನಿಲ್ಲಿಸಲಾಗಿದೆ. ಆದರೂ ಭಕ್ತರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ವೆಬ್ಸೈಟ್ ಮೂಲಕ ದೇಣಿಗೆ ನೀಡಬಹುದಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆ: ಸಿಪಿಐಎಂ, ಡಿಎಂಕೆ ಸ್ಥಾನ ಹಂಚಿಕೆ ಮಾತುಕತೆ ಅಪೂರ್ಣ
ಮುಂದಿನ ಮೂರು ವರ್ಷಗಳಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಗೊಳ್ಳಲಿದ್ದು, 7,285 ಚದರ ಅಡಿಯಲ್ಲಿ ದೇಗುಲ ಅರಳಲಿದೆ ಎಂದರು. ರಾಮ ಮಂದಿರಕ್ಕಾಗಿ ಒಟ್ಟು 70 ಎಕರೆ ಭೂಮಿ ನೀಡಲಾಗಿದೆ ಎಂದು ಅವರು ತಿಳಿಸಿದರು.