ETV Bharat / bharat

ಪ್ರತಿಭಟನೆಗಳಲ್ಲಿ ಭಾಗಿಯಾಗುವ ಮಾಜಿ ಸೈನಿಕರು ರಿಬ್ಬನ್, ಪದಕ ಧರಿಸುವಂತಿಲ್ಲ: ಸೇನೆ

ಱಲಿ ಹಾಗೂ ಪ್ರತಿಭಟನೆಗಳಲ್ಲಿ ಭಾಗಿಯಾಗುವ ಮಾಜಿ ಸೈನಿಕರು ಸೇನೆಯ ರಿಬ್ಬನ್ ಹಾಗೂ ಪದಕಗಳನ್ನು ಧರಿಸುವಂತಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.

servicemen
ಸೇನೆ
author img

By

Published : Jan 20, 2021, 4:34 PM IST

ನವದೆಹಲಿ: ಱಲಿ, ಪ್ರತಿಭಟನೆಗಳಲ್ಲಿ ಭಾಗವಹಿಸುವ ಸೈನಿಕರು ಹಾಗೂ ಮಾಜಿ ಸೈನಿಕರು, ಸೇನೆಯ ರಿಬ್ಬನ್ ಹಾಗೂ ಪದಕಗಳನ್ನು ಧರಿಸುವಂತಿಲ್ಲ ಎಂದು ಭಾರತೀಯ ಸೇನೆ ಸೂಚಿಸಿದೆ.

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳಲ್ಲಿ ಬಹುತೇಕ ಮಾಜಿ ಸೈನಿಕರು ಭಾಗಿಯಾಗುತ್ತಿದ್ದು, ಸೇನೆಯ ಪದಕ ಹಾಗೂ ರಿಬ್ಬನ್​ಗಳನ್ನು ಧರಿಸುತ್ತಿದ್ದಾರೆ. ಇದು ಸೇನೆಯ ನಿಯಮಗಳಿಗೆ ವಿರುದ್ಧವಾದುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ಱಲಿಯಲ್ಲಿ ಮಾಜಿ ಸೈನಿಕರು ಸೇನೆಯ ಉಡುಪು, ಪದಕ ಹಾಗೂ ರಿಬ್ಬನ್​ಗಳನ್ನು ಧರಿಸಿ ಭಾಗಿಯಾಗಲಿದ್ದಾರೆ ಎಂದು ಕೆಲ ರಾಜಕೀಯ ಮುಖಂಡರು ತಿಳಿಸಿದ್ದರು. ಹಾಗಾಗಿ ಭಾರತೀಯ ಸೇನೆ ಈ ಸ್ಪಷ್ಟನೆ ನೀಡಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.