ETV Bharat / bharat

ದಯವಿಟ್ಟು ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳನ್ನ ಬಂದ್​ ಮಾಡ್ಬೇಡಿ: ಮುಸ್ಲಿಂ ಸಮುದಾಯದಿಂದ ಆಗ್ರಹ!

ದಯವಿಟ್ಟು ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳನ್ನು ಬಂದ್​ ಮಾಡ್ಬೇಡಿ ಎಂದು ಮುಸ್ಲಿಂ ಸಮುದಾಯದಿಂದ ಆಗ್ರಹಿಸಿ ಪೊಲೀಸ್​ ಇಲಾಖೆಗೆ ಮನವಿ ಮಾಡಿದ್ದಾರೆ.

Dont turn off loudspeakers at Sai temple in Shirdi, Muslim community demands to police over loudspeakers, Sai temple news, loudspeakers news, ಶಿರಡಿ ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳು ಬಂದ್​ ಮಾಡದಂತೆ ಆಗ್ರಹ, ಮುಸ್ಲಿಂ ಸಮುದಾಯದಿಂದ ಧ್ವನಿವರ್ಧಕಗಳು ಬಂದ್​ ಮಾಡದಂತೆ ಆಗ್ರಹ, ಸಾಯಿಬಾಬಾ ದೇವಸ್ಥಾನ ಸುದ್ದಿ, ಧ್ವನಿವರ್ಧಕ ಸುದ್ದಿ,
ಮುಸ್ಲಿಂ ಸಮುದಾಯದಿಂದ ಆಗ್ರಹ
author img

By

Published : May 5, 2022, 2:54 PM IST

ಶಿರಡಿ (ಅಹಮದ್‌ನಗರ): ರಾಜ್ಯದಲ್ಲಿ ಮಸೀದಿಗಳ ಗದ್ದಲದ ನಡುವೆಯೂ ಎಂಎನ್‌ಎಸ್‌ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳನ್ನು ಬಂದ್​ ಮಾಡದಂತೆ ಪ್ರತಿಭಟನೆ ಆರಂಭಿಸಿದ್ದಾರೆ. ರಾತ್ರಿ ಮತ್ತು ಮುಂಜಾನೆ ದೇವಸ್ಥಾನದಲ್ಲಿ ಧ್ವನಿವರ್ಧಕಗಳಿಲ್ಲದೇ ಆರತಿ, ಪೂಜೆ ನಡೆಯುತ್ತಿದೆ. ಈ ವಿಚಾರ ಮುಸ್ಲಿಂ ಸಮುದಾಯದವರು ಗಮನಕ್ಕೆ ಬಂದಿದ್ದು, ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳನ್ನು ಬಂದ್ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಶ್ರೀಸಾಯಿಬಾಬಾ ದೇವಸ್ಥಾನದಲ್ಲಿ ಧ್ವನಿವರ್ಧಕಗಳಿಲ್ಲದೇ ರಾತ್ರಿ ಮತ್ತು ಬೆಳಗಿನ ಆರತಿ ನಡೆದಿದೆ. ಇದಲ್ಲದೇ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಆದರೆ, ಅಜಾನ್​ ಸ್ಪೀಕರ್ ಬಳಸಿಲ್ಲ. ಈ ಕುರಿತು ಶಿರಡಿ ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಗ್ಯಶ್ರೀ ಬನಾಯತ್ ಮಾತನಾಡಿ, ‘ಪೊಲೀಸ್ ಆಡಳಿತದಿಂದ ನಮಗೆ ಪತ್ರ ಬಂದಿದೆ. ನ್ಯಾಯಾಲಯದ ನಿರ್ದೇಶನದಂತೆ ಕೆಲವು ನಿರ್ದಿಷ್ಟ ನಿರ್ದೇಶನಗಳನ್ನು ಉಲ್ಲಂಘಿಸದಂತೆ ಕೋರಲಾಗಿದೆ. ಅದರಂತೆ ಧ್ವನಿ ಮಿತಿಯ ಬಗ್ಗೆ ಸೂಚನೆಗಳಿವೆ. ನ್ಯಾಯಾಲಯದ ಆದೇಶದ ಮೇರೆಗೆ ದೇವಸ್ಥಾನದಲ್ಲಿ ಧ್ವನಿವರ್ಧಕಗಳು ಬಳಸದೇ ಆರತಿ ಮತ್ತು ಪೂಜಾ ವಿಧಿವಿಧಾನಗಳು ನಿತ್ಯವೂ ಸುಸೂತ್ರವಾಗಿ ನಡೆಯುತ್ತಿದೆ ಎಂದರು.

ಓದಿ: ಮೂರೇ ದಿನದಲ್ಲಿ ₹4 ಕೋಟಿ ದೇಣಿಗೆ ಸಂಗ್ರಹ: 3 ಲಕ್ಷ ಭಕ್ತರಿಂದ ಶಿರಡಿ ಸಾಯಿಬಾಬಾ ದರ್ಶನ

ಆದರೆ, ದೇವಸ್ಥಾನದಲ್ಲಿನ ಧ್ವನಿವರ್ಧಕಗಳನ್ನು ಬಂದ್ ಮಾಡದಂತೆ ಜಾಮಾ ಮಸೀದಿ ಟ್ರಸ್ಟ್ ಹಾಗೂ ಮುಸ್ಲಿಂ ಸಮುದಾಯದವರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಾಯಿಬಾಬಾ ದೇವಸ್ಥಾನದಲ್ಲಿ ಈ ರೀತಿ ನಡೆದಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಸಾಯಿಬಾಬಾ ದೇವಸ್ಥಾನವು ವಿಶ್ವ ಕೀರ್ತಿ ಮತ್ತು ಸರ್ವಧರ್ಮ ಸಮನ್ವಯದ ಸಂಕೇತವಾಗಿದೆ ಎಂದರು.

ಕಳೆದ 125 ವರ್ಷಗಳಿಂದ ಸಾಯಿಬಾಬಾ ಅವರ ದ್ವಾರಕಾಮಾಯಿ ಮಸೀದಿಯಲ್ಲಿ ಹಿಂದೂ - ಮುಸ್ಲಿಂ ಐಕ್ಯತೆ ಸಂಕೇತಿಸುವ ಹಸಿರು ಮತ್ತು ಕೇಸರಿ ಧ್ವಜಗಳನ್ನು ಒಟ್ಟಿಗೆ ಹಾರಿಸಲಾಗಿದೆ. ಈ ಮತಾಂಧತೆಯಿಂದ ಇಲ್ಲಿನ ಹಿಂದೂ - ಮುಸ್ಲಿಂ ಐಕ್ಯತೆಗೆ ಧಕ್ಕೆಯಾಗುವುದು ಸರಿಯಲ್ಲ. ದೇಶ-ವಿದೇಶಗಳಿಂದ ಭಕ್ತರು ಶಿರಡಿಗೆ ಬರುತ್ತಾರೆ. ಪಂಚಕೃಷಿಯ ಸಾವಿರಾರು ನಾಗರಿಕರ ಜೀವನೋಪಾಯವು ದೇವಾಲಯವನ್ನು ಅವಲಂಬಿಸಿದೆ. ವಿಶ್ವವಿಖ್ಯಾತವಾಗಿರುವ ಈ ದೇವಾಲಯದಲ್ಲಿ ಧ್ವನಿವರ್ಧಕಗಳನ್ನು ಆಫ್ ಮಾಡದೆ ಹಾಗೆಯೇ ಇರಿಸಬೇಕು ಮತ್ತು ಇದನ್ನು ವಿಶೇಷ ಪ್ರಕರಣವೆಂದು ಗುರುತಿಸಬೇಕು ಎಂದು ಪೊಲೀಸ್​ ಇಲಾಖೆಗೆ ಟ್ರಸ್ಟ್​ ಆಗ್ರಹಿಸಿ ಮನವಿ ಸಲ್ಲಿಸಿದೆ.

ಜಂಶೀದ್ ಟ್ರಸ್ಟ್ ಅಧ್ಯಕ್ಷ ಶಂಶುದ್ದೀನ್ ಇನಾಮದಾರ, ಕಾರ್ಯದರ್ಶಿ ಬಾಬಾಭಾಯಿ ಸಯ್ಯದ್, ರಜಾಕ್ ಭಾಯಿ ಶೇಖ್, ನಾಸಿರಭಾಯಿ ದಾರುವಾಲೆ, ಪಠಾಣ್ ಭಾಯಿ, ಮೆಹಮೂದ್ ಭಾಯಿ ಸಯ್ಯದ್, ಸರ್ದಾರ್ ಭಾಯಿ ಪಠಾಣ್, ಮೌಲಾನಾ ಮನ್ಸೂರ್ ಸಯ್ಯದ್, ಮೌಲಾನಾ ಅನ್ವರ್ ಷಾ, ಹಾಜಿ ಶಂಶಾಬಾದಿ, ಹನೀಫ್, ಹನೀಫ್, ಶಫೀಕ್ ಹನಾಯ್ಫ್ ಮೆಹಮೂದ್ ಸೈಯದ್, ಸಮೀರ್ ಶೇಖ್, ಜಾವೇದ್ ಶೇಖ್, ಸುಲೇಮಾನ್ ಸೈಯದ್, ಅಮೀರ್ಭಾಯಿ ಶೇಖ್ ಮತ್ತು ಇತರರು ಈ ವೇಳೆ ಉಪಸ್ಥಿತರಿದ್ದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.