ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಸಂಬೋಧಿಸಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿಕೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇದೇ ವಿಷಯವನ್ನಿಟ್ಟುಕೊಂಡು ಬಿಜೆಪಿ ಸಂಸದರು ಸಂಸತ್ನಲ್ಲಿ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಕ್ಷಮೆಯಾಚನೆಗೆ ಪಟ್ಟು ಹಿಡಿದಿದೆ. ಈ ಮಧ್ಯೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಸೋನಿಯಾ ಗಾಂಧಿ ನಾಟಕೀಯ ರೀತಿಯಲ್ಲಿ ನಿಂದಿಸಿದ್ದಾರೆಂದು ಹೇಳಲಾಗ್ತಿದೆ.
ಸದನ ಮುಂದೂಡಿದ ನಂತರ ಅಲ್ಲಿಂದ ಹೊರ ಬಂದ ಸೋನಿಯಾ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿಯ ಕೆಲ ಮಹಿಳಾ ಸಂಸದರು ಘೋಷಣೆ ಕೂಗಿದ್ದಾರೆ. ಈ ವೇಳೆ, ಬಿಜೆಪಿ ಸಂಸದೆ ರಮಾದೇವಿ ಬಳಿ ತೆರಳಿ ಇದರಲ್ಲಿ ನನ್ನನ್ನು ಏಕೆ ಎಳೆದು ತರಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾಗಿ ವರದಿಯಾಗಿದೆ. ಸ್ಥಳದಲ್ಲಿದ್ದ ಸಚಿವೆ ಸ್ಮೃತಿ ಇರಾನಿ ಮಧ್ಯಪ್ರವೇಶ ಮಾಡಲು ಮುಂದಾದ ಸಂದರ್ಭದಲ್ಲಿ 'ನನ್ನೊಂದಿಗೆ ಮಾತನಾಡಬೇಡಿ' ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಸ್ಮೃತಿ ಇರಾನಿ "ಮೇಡಂ, ನಾನು ನಿಮಗೆ ಸಹಾಯ ಮಾಡಲೇ? ನಾನೇ ನಿಮ್ಮ ಹೆಸರು ಬಳಸಿದ್ದೇನೆ" ಎಂದಿದ್ದಾರೆ. ಆದರೆ, ಸೋನಿಯಾ, ’’ನನ್ನ ಜತೆ ಮಾತನಾಡಬೇಡಿ" ಎಂದು ಸಿಟ್ಟಿನಿಂದ ಹೇಳಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರಪತ್ನಿ ಹೇಳಿಕೆ ವಿಚಾರವಾಗಿ ಲೋಕಸಭೆಯಲ್ಲಿ ದೊಡ್ಡ ಮಟ್ಟದ ಗದ್ದಲ ಉಂಟಾಗಿದೆ. ಬಿಜೆಪಿ ಮತ್ತು ವಿಪಕ್ಷಗಳ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಸಂಸದರು ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ವಿರುದ್ಧ ಜೋರಾಗಿ ಘೋಷಣೆ ಕೂಗಿದರು.
ಇದನ್ನೂ ಓದಿರಿ: 'ರಾಷ್ಟ್ರಪತ್ನಿ' ಎಂದ ಕಾಂಗ್ರೆಸ್ ಮುಖಂಡ; ದೇಶದ ಕ್ಷಮೆ ಕೇಳುವಂತೆ ಬಿಜೆಪಿ ಪಟ್ಟು
ತಾವು ನೀಡಿರುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅಧೀರ್ ರಂಜನ್ ಚೌದರಿ,"ನಾನು ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ. ಬಾಯ್ತಪ್ಪಿನಿಂದ 'ರಾಷ್ಟ್ರಪತ್ನಿ' ಎಂದು ಹೇಳಿದ್ದೇನೆ. ಆಡಳಿತ ಪಕ್ಷವು ಸಣ್ಣ ಕಲ್ಲನ್ನು ದೊಡ್ಡ ಬೆಟ್ಟವನ್ನಾಗಿ ಮಾಡಲು ಉದ್ದೇಶಪೂರ್ವಕ ಪ್ರಯತ್ನ ಮಾಡುತ್ತಿದೆ" ಎಂದಿದ್ದಾರೆ. ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸೋನಿಯಾ ಗಾಂಧಿ ನಮ್ಮ ಹಿರಿಯ ನಾಯಕಿ ರಮಾದೇವಿ ಬಳಿಗೆ ಬಂದಾಗ ನಮ್ಮ ಕೆಲ ಮಹಿಳಾ ಸಂಸದರು ಘೋಷಣೆ ಕೂಗಿದ್ದಾರೆ. ಈ ವೇಳೆ ಸ್ಮೃತಿ ಇರಾನಿ ಮಧ್ಯಸ್ಥಿಕೆ ವಹಿಸಲು ತೆರಳಿದ್ದು, ಈ ವೇಳೆ ನನ್ನೊಂದಿಗೆ ಮಾತನಾಡಬೇಡಿ ಎಂದಿದ್ದಾರೆ ಎಂದು ತಿಳಿಸಿದ್ದಾರೆ.
-
#WATCH | "Rashtrapatni" row | ...I accepted my mistake...What do they say about Sonia Gandhi during polls? About Shashi Tharoor's wife? About Renuka Chowdhury? I sought time from President, might get appointment the day after tomorrow, I'll speak with her personally: AR Chowdhury pic.twitter.com/7W1PAw5JzG
— ANI (@ANI) July 28, 2022 " class="align-text-top noRightClick twitterSection" data="
">#WATCH | "Rashtrapatni" row | ...I accepted my mistake...What do they say about Sonia Gandhi during polls? About Shashi Tharoor's wife? About Renuka Chowdhury? I sought time from President, might get appointment the day after tomorrow, I'll speak with her personally: AR Chowdhury pic.twitter.com/7W1PAw5JzG
— ANI (@ANI) July 28, 2022#WATCH | "Rashtrapatni" row | ...I accepted my mistake...What do they say about Sonia Gandhi during polls? About Shashi Tharoor's wife? About Renuka Chowdhury? I sought time from President, might get appointment the day after tomorrow, I'll speak with her personally: AR Chowdhury pic.twitter.com/7W1PAw5JzG
— ANI (@ANI) July 28, 2022
ಇದೇ ವಿಚಾರವಾಗಿ ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ದೌರ್ಜನ್ಯ ನಡೆಸಿದ್ದು, ಅತಿರೇಕವಾಗಿ ವರ್ತಿಸಿದ್ದಾರೆಂದು ಬರೆದುಕೊಂಡಿದ್ದಾರೆ.