ಗೂಗಲ್ ಸರ್ಚ್ ಎಂಜಿನ್ ಎನ್ನುವುದು ಇಂದಿನ ದಿನಗಳಲ್ಲಿ ಸಹಾಯಕನಂತಿದ್ದು, ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲೇ ಒದಗಿಸುವ ಅತ್ಯದ್ಭುತ ಸಾಧನವಾಗಿದೆ. ಇಂದು ಗೂಗಲ್ನಲ್ಲಿ ಯಾವುದೇ ವಿಷಯದ ಬಗ್ಗೆ ಹುಡಕಾಟ ನಡೆಸಿದರು. ಅದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡವ ಸಾಮರ್ಥ್ಯವನ್ನು ಗೂಗಲ್ ಎಂಜಿನ್ ಹೊಂದಿದೆ. ಸರ್ಚ್ ಎಂಜಿನ್ ಪೈಕಿ ಸಧ್ಯ ಗೂಗಲ್ ಅಗ್ರ ಕ್ರಮಾಂಕದಲ್ಲಿದೆ. ಇನ್ನೂ ನಮಗೆ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸುವ ಗೂಗಲ್ ಸರ್ಚ್ ಇಂಜಿನ್ನಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಹುಡುಕಾಟ ಅಥವಾ ಮಾಹಿತಿಯನ್ನು ಪಡೆಯಲು ಯತ್ನಿಸಿದರೆ ಜೈಲಿನಲ್ಲಿ ಕಂಬಿ ಎಣಿಸಬೇಕಾಗುತ್ತದೆ ಹುಷಾರ್.
ಈ ಬಗ್ಗೆ ಹುಡುಕದಿರಿ: ಮೊದಲನೇಯದಾಗಿ ಬಾಂಬ್ ತಯಾರಿಕೆ ಬಗ್ಗೆ ಮತ್ತು ಪ್ರೇಷರ್ ಕುಕ್ಕರ್ ಬಾಂಬ್ ತಯಾರಿಕೆಯಂತಹ ವಿಷಯದ ಬಗ್ಗೆ ಹುಡುಕಾಟ ನಡೆಸಿದರೆ ಪೊಲೀಸರು ಕ್ಷಣಾರ್ಧದಲ್ಲೇ ನಿಮ್ಮ ಮನೆಯ ಬಾಗಿಲು ಮುಂದೆ ಹಾಜರಿರುತ್ತಾರೆ. ಸೆಕ್ಯೂರಿಟಿ ಸರ್ವಿಸ್ ಡಿಟೆಕ್ಟರ್ ಇಂತಹ ವಿಷಯಗಳ ಬಗ್ಗೆ ಸದಾ ಗಮನ ಹರಿಸಲಿದ್ದು, ನೀವು ಈ ಬಗ್ಗೆ ಹುಡುಕಾಟ ಮಾಡಿದ್ದೇ ಆದಲ್ಲಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಿದೆ. ಆದ ಕಾರಣ ಯಾವದೇ ಕಾರಣಕ್ಕೆ ಈ ಬಗ್ಗೆ ಹುಡುಕಾಟ ನಡೆಸದಿರಿ.
ಎರಡನೇಯದಾಗಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿಡಿಯೋಗಳ ಬಗ್ಗೆ ಹುಡುಕುವುದು ಅಪರಾಧವಾಗಿದ್ದು, ಇಂತಹ ವಿಡಿಯೋಗಳನ್ನು ನೋಡುವುದು ಅಥವಾ ಡೌನ್ಲೋಡ್ ಮಾಡಿದರೆ ಪೊಲೀಸರಿಗೆ ಮಾಹಿತಿ ಹೋಗಲಿದೆ. ಮೂರನೇಯದಾಗಿ ಅಪರಾಧಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹುಡುಕಾಟ ಮಾಡುವುದ ಅಂದರೇ ಅಪಹರಣ ಮಾಡುವುದು ಅಥವಾ ಮಾದಕ ವಸ್ತಗಳ ಬಗ್ಗೆ ಹುಡುಕುವುದು ಅಪರಾಧವಾಗಲಿದೆ.
ಇನ್ನು ಗರ್ಭಪಾತದ ಬಗ್ಗೆ ಹುಡುಕಾಟ ನಡೆಸಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಭಾರತದಲ್ಲಿ ವೈದ್ಯಕೀಯ ಗರ್ಭಪಾತದ ಬಗ್ಗೆ ಕಟುನಿಟ್ಟದಾ ನಿಯಮಗಳು ಇವೆ. ಈ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಿದರೆ ಪೊಲೀಸರು ನಿಮ್ಮ ಮೇಲೆ ನಿಗಾವಹಿಸಲಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ವಿಷಯಗಳ ಬಗ್ಗೆ ಹುಡುಕಾಟ ನಡೆಸದಿರಿ.
ಟಾಪ್ ಸರ್ಚ್ ಎಂಜಿನ್ಗಳು :
- Bing.
- Yahoo!
- Yandex.
- DuckDuckGo.
- Baidu.
2022ರ ಉತ್ತಮ ಆ್ಯಪ್ಗಳು: 2022ರ ಮೊಬೈಲ್ನ ಉತ್ತಮ ಆ್ಯಪ್ಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಮಾನ್ಯ ಮತ್ತು ಗೇಮಿಂಗ್ ಆ್ಯಪ್ಗಳು ಕೂಡ ಸ್ಥಾನ ಪಡೆದಿವೆ. ಮೊದಲನೇಯದಾಗಿ ಫ್ಲಿಕ್ಕಾರ್ಟ್ನ ಶಾಪ್ಸೆ 2022ರಲ್ಲಿ ಪ್ರಖ್ಯಾತಿ ಪಡೆದ ಆ್ಯಪ್ ಆಗಿದೆ. ಈ ಆ್ಯಪ್ ಮಾರಾಟಕ್ಕೆ ಯಾವುದೇ ಕಮಿಷನ್ ಪಡೆಯುವುದಿಲ್ಲ. ಈ ಆ್ಯಪ್ನಲ್ಲಿ ಯಾರು ಬೇಕಾದರೂ ವಸ್ತುಗಳ ಮಾರಾಟ ಮಾಡಬಹುದಾಗಿದೆ. ಫ್ಯಾಷನ್ ಮೊಬೈಲ್ ಬ್ಯೂಟಿ, ಫುಟ್ವೇರ್ ಸೇರಿದಂತೆ ಹಲವು ಉತ್ಪನ್ನಗಳು ಇದರಲ್ಲಿ ಸಿಗಲಿವೆ.
ಎರಡನೇಯದಾಗಿ ಕ್ವೆಸ್ಟ್ ಆ್ಯಪ್ ಕೂಡ 2022ರ ಬೆಸ್ಟ್ ಆ್ಯಪ್ ಆಗಿದೆ. ಕೃತಕ ಬುದ್ದಿಮತೆ ಮತ್ತು ವಿದ್ಯಾರ್ಥಿಗಳಿಗೆ ಬೇಕಾದ ಪಾಠಗಳನ್ನು ನೀಡುವ ಮೂಲಕ ಅವರ ಕಲಿಕೆಗೆ ಕ್ವೆಸ್ಟ್ ಆ್ಯಪ್ ಸಹಾಯ ಮಾಡುತ್ತಿದೆ. ಇದರ ವಿಶೇಷತೆ ಎಂದರೆ ಕಲಿಕೆ ಜೊತೆ ಗೇಮಿಂಗ್ ಅನುಭವವನ್ನು ಈ ಆ್ಯಪ್ ನೀಡುತ್ತದೆ.
ಮೂರನೇಯದಾಗಿ ಹಿರಿಯ ನಾಗರಿಕರಿಗಾಗಿ ರೂಪುಗೊಂಡಿರುವ ಖಾಯಾಲ್ ಉತ್ತಮ ವರ್ಗದ ಬೆಸ್ಟ್ ಆ್ಯಪ್ ಆಗಿದೆ. ಹಿರಿಯ ನಾಗರಿಕರಿಗೆ ಪ್ರಿಪೇಯ್ಡ್ ಕಾರ್ಡ್ ಹಾಗೂ ಅವರ ಅವಶ್ಯಕತೆಗೆ ಅನುಗುಣವಾದ ವಸ್ತುಗಳ ಮೇಲೆ ರಿಯಾಯಿತಿಯನ್ನು ನೀಡುತ್ತದೆ. ನಾಲ್ಕನೇ ಸ್ಥಾನದಲ್ಲಿ ಬೇಬಿಜಿ ಆ್ಯಪ್ ಸ್ಥಾನ ಪಡೆದಿದೆ. ಮಕ್ಕಳ ಬೆಳವಣಿಗೆ ಪತ್ತೆ ಮಾಡುವ ಆ್ಯಪ್ ಇದಾಗಿದ್ದು, ಪೋಷಕರು ತಮ್ಮ ಮಗುವಿನ ಚಟುವಟಿಕೆಗಳನ್ನು ತಿಳಿಯಲು ಇದು ಸಹಾಯ ಮಾಡಲಿದ್ದು, ಮಕ್ಕಳಿಗೆ ಬೇಕಾದ ಕಥೆಗಳು ಕೂಡ ಇದರಲ್ಲಿರಲಿದೆ.
ಇದನ್ನೂ ಓದಿ: ಗೂಗಲ್ ನ್ಯಾವಿಗೇಷನ್ ಹೊಸ ಪೀಚರ್ಸ್ ಪಡೆದ wear os ಸ್ಮಾರ್ಟ್‌ವಾಚ್..