ETV Bharat / bharat

ಮೂರೇ ದಿನದಲ್ಲಿ ₹4 ಕೋಟಿ ದೇಣಿಗೆ ಸಂಗ್ರಹ: 3 ಲಕ್ಷ ಭಕ್ತರಿಂದ ಶಿರಡಿ ಸಾಯಿಬಾಬಾ ದರ್ಶನ - ಶಿರಡಿ ಸಾಯಿಬಾಬಾ ದೇಣಿಗೆ

ರಾಮನವಮಿ ಉತ್ಸವದ ಅಂಗವಾಗಿ ಸಾಯಿಬಾಬಾ ಸಂಸ್ಥಾನದಲ್ಲಿ ಏಪ್ರಿಲ್​ 9ರಿಂದ 11ರವರೆಗೆ ವಿಶೇಷ ಸಮಾರಂಭ ಆಯೋಜನೆ ಮಾಡಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

Shirdi Ram Navami Utsav
Shirdi Ram Navami Utsav
author img

By

Published : Apr 15, 2022, 10:51 PM IST

ಶಿರಡಿ(ಅಹಮದ್​ನಗರ): ಕೋವಿಡ್​ ಮಾರ್ಗಸೂಚಿ ಸಂಪೂರ್ಣವಾಗಿ ತೆಗೆದುಹಾಕಿರುವ ಕಾರಣ ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ. ಮಹಾರಾಷ್ಟ್ರದ ಅಹಮದ್​ನಗರದಲ್ಲಿ ಪವಾಡ ಪುರುಷ ಸಾಯಿಬಾಬಾ ದರ್ಶನಕ್ಕೆ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಸಾಯಿಬಾಬಾ ದೇಗುಲಕ್ಕೆ 3 ಲಕ್ಷ ಭಕ್ತರು ಭೇಟಿ ನೀಡಿದ್ದು, ಒಟ್ಟು 4 ಕೋಟಿ 57 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಬನಾಯತ್ ತಿಳಿಸಿದ್ದಾರೆ. ಇದರಲ್ಲಿ ವಿವಿಧ ದೇಶದಿಂದ ಬಂದಿರುವ 12 ಲಕ್ಷ ರೂ. ಸಹ ಸೇರಿಕೊಂಡಿದೆ.

ಇದನ್ನೂ ಓದಿ: ಮದ್ಯ ನೀಡಲು ನಿರಾಕರಿಸಿದ್ದಕ್ಕೆ ವೈನ್​​ ಶಾಪ್‌ಗೆ ಬೆಂಕಿಯಿಟ್ಟ ಯುವಕರು!

ರಾಮನವಮಿ ಉತ್ಸವದ ಅಂಗವಾಗಿ ಸಾಯಿಬಾಬಾ ಸಂಸ್ಥಾನದಲ್ಲಿ ಏಪ್ರಿಲ್​ 9ರಿಂದ 11ರವರೆಗೆ ವಿಶೇಷ ಸಮಾರಂಭ ಆಯೋಜನೆ ಮಾಡಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮೂರು ದಿನದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, 4 ಕೋಟಿ 57 ಲಕ್ಷ ರೂ. ದೇಣಿಗೆ ಬಂದಿದೆ. ಇದರ ಜೊತೆಗೆ 16 ಲಕ್ಷ ರೂ. ಮೌಲ್ಯದ ಚಿನ್ನ, 4 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ 11 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಸಹ ಸೇರಿಕೊಂಡಿದೆ.

ಈ ದೇಣಿಗೆ ರೂಪದ ಹಣ ಸಾಯಿ ಸಂಸ್ಥಾನದ ಸೇವಾ ಸಿಬ್ಬಂದಿ ಸಂಬಳ, ಆಡಳಿತ, ದೇವಾಲಯದ ವೆಚ್ಚಗಳು, ಭಕ್ತರಿಗೆ ಸೌಲಭ್ಯಗಳು, ಆಸ್ಪತ್ರೆ, ಅನ್ನದಾನ, ವಸತಿ ಜೊತೆಗೆ ಶಿರಡಿಯ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.