ಅಲಿಗಢ (ಉತ್ತರ ಪ್ರದೇಶ): ಅಪಘಾತದಲ್ಲಿ ಸಾವಿಗೀಡಾದ ಅಪರಿಚಿತ ಯುವಕನ ಮೃತದೇಹವು ಸುಮಾರು ಗಂಟೆಗಳ ಕಾಲ ರಸ್ತೆಯಲ್ಲೇ ಬಿದ್ದಿದ್ದು, ನಾಯಿಗಳು ಎಳೆದಾಡಿ ತಿಂದಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಅಕ್ರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಇಟಾಹ್-ಅಲಿಗಢ ರಾಷ್ಟ್ರೀಯ ಹೆದ್ದಾರಿ 91ರಲ್ಲಿ ಸೋಮವಾರ ತಡರಾತ್ರಿ ವಾಹನವೊಂದು ಯುವಕನಿಗೆ ಡಿಕ್ಕಿ ಹೊಡೆದು, ಚಕ್ರಗಳು ದೇಹದ ಮೇಲೆ ಹರಿದು ಹೋಗಿವೆ. ಇದರಿಂದಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಆದರೆ, ಮಂಗಳವಾರ ಬೆಳಗಿನವರೆಗೂ ಮೃತದೇಹವನ್ನು ಸಾಗಿಸಿರಲಿಲ್ಲ.
ಈ ಮೃತದೇಹವನ್ನು ಕಂಡ ನಾಯಿಗಳು ಎಳೆದಾಡಿ ತಿಂದಿವೆ. ನಂತರ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.
ರಸ್ತೆಯಲ್ಲಿದ್ದ ಮೃತದೇಹದ ಪಕ್ಕದಲ್ಲೇ ಅನೇಕ ವಾಹನಗಳು ಸಂಚರಿಸುತ್ತಲೇ ಇದ್ದವು. ಅಲ್ಲದೇ, ನಾಯಿಗಳು ಶವವನ್ನು ತಿನ್ನುತ್ತಿದ್ದವು. ಯಾರೊಬ್ಬರೂ ತಲೆಕೆಡಿಸಿಕೊಂಡಿರಲಿಲ್ಲ. ಬಹಳ ಹೊತ್ತಿನ ನಂತರ ಪೊಲೀಸರು ಸ್ಥಳಕ್ಕಾಗಮಿಸಿದರು ಎಂದು ಸ್ಥಳೀಯ ಯುವಕರು ತಿಳಿಸಿದ್ದಾರೆ.
ಇದನ್ನೂ ಓದಿ: ಲವ್ ಮ್ಯಾಟರ್.. ಡೆಂಟಲ್ ವಿದ್ಯಾರ್ಥಿನಿಯನ್ನು ಬ್ಲೇಡ್ನಿಂದ ಕತ್ತು ಕೊಯ್ದು ಟೆಕ್ಕಿ