ETV Bharat / bharat

ಕಾರಿಗೆ ನಾಯಿಯನ್ನು ಕಟ್ಟಿ ಎಳೆದೊಯ್ದು ಕ್ರೌರ್ಯ: ವೈರಲ್​ ವಿಡಿಯೋ - ಡಾಗ್ ಹೋಮ್ ಫೌಂಡೇಶನ್

ವ್ಯಕ್ತಿಯೊಬ್ಬ ನಾಯಿಯ ಕತ್ತಿಗೆ ಸರಪಳಿ ಬಿಗಿದು ಕಾರಿಗೆ ಕಟ್ಟಿಕೊಂಡು ರಸ್ತೆ ಮೇಲೆ ಕ್ರೂರಿಯಂತೆ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ.

ನಾಯಿ
dog
author img

By

Published : Sep 19, 2022, 7:45 AM IST

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದ್ರೆ, ಕೆಲವೊಂದು ವಿಡಿಯೋಗಳು ಮನಕಲಕುವಂತಿರುತ್ತವೆ. ಇದೀಗ ಅಂತಹದೇ ಒಂದು ವಿಡಿಯೋ ಭಾರಿ ಸದ್ದು ಮಾಡುತ್ತಿದ್ದು, ಪ್ರಾಣಿ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಕಾರು ಚಾಲಕನೊಬ್ಬ ಸರಪಳಿಯಲ್ಲಿ ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆ ಮೇಲೆ ಎಳೆದುಕೊಂಡು ಹೋಗುತ್ತಿರುವ ದೃಶ್ಯವಿದು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿದ ಬಳಕೆದಾರರು, ಇದು ಭಾನುವಾರ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದ ಘಟನೆ, ಚಾಲಕ ವೈದ್ಯರಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿಯಲ್ಲಿ ಮೀನು ಹರಾಜು ಕೂಗಿದ ಯಕ್ಷಗಾನ ವೇಷಧಾರಿ: ವಿಡಿಯೋ ವೈರಲ್

ಘಟನೆಯು ಜನನಿಬಿಡ ರಸ್ತೆಯಲ್ಲಿ ಸಂಭವಿಸಿದೆ. ಅಲ್ಲಿ ಹಲವಾರು ವಾಹನಗಳು ಸಂಚರಿಸುತ್ತಿವೆ. ಉದ್ದನೆಯ ಹಗ್ಗದಿಂದ ನಾಯಿಯನ್ನು ಕಟ್ಟಲಾಗಿದೆ. ನಾಯಿ ವಾಹನದ ಒಂದು ಬದಿಯಿಂದ ಇನ್ನೊಂದು ಬದಿಗೆ ಅಪಾಯಕಾರಿಯಾಗಿ ಚಲಿಸುತ್ತಿದೆ. ಕಾರನ್ನು ಹಿಂಬಾಲಿಸಿಕೊಂಡು ಬಂದ ವಾಹನದಲ್ಲಿದ್ದವರು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಮೋಟಾರು ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬ ತನ್ನ ವಾಹನವನ್ನು ಕಾರಿನ ಮುಂದೆ ನಿಲ್ಲಿಸಿ, ಚಾಲಕನಿಗೆ ಬುದ್ಧಿ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಬಳಿಕ ವಾಹನದ ಸುತ್ತ ಜಮಾಯಿಸಿದ ಸ್ಥಳೀಯರು, ನಾಯಿಯ ಸರಪಳಿ ಬಿಚ್ಚಿ, ಎನ್‌ಜಿಒಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಮಿಸಿದ ಸಿಬ್ಬಂದಿ, ಶ್ವಾನಕ್ಕೆ ಚಿಕಿತ್ಸೆ ನೀಡಿದ್ದಾರೆ. ಮಾಹಿತಿ ಪ್ರಕಾರ, ನಾಯಿಯ ಕಾಲುಗಳ ಮೂಳೆ ಮುರಿದಿದೆ ಎನ್ನಲಾಗಿದೆ.

ಇದನ್ನೂ ಓದಿ: ಮಗುವಿನೊಂದಿಗೆ ಆನೆ ಸಖತ್ ಡ್ಯಾನ್ಸ್: ವಿಡಿಯೋ ನೋಡಿ..

ಪ್ರಾಣಿ ಹಿಂಸೆಯ ಈ ಕ್ಲಿಪ್ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಜೊತೆಗೆ ಕಾಮೆಂಟ್​​ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು, 'ಕರುಣೆಯಿಲ್ಲದ ಡಾಕ್ಟರ್', 'ನಾಚಿಕೆಗೇಡಿನವ', 'ಹೃದಯಹೀನ' ಎಂದೆಲ್ಲಾ ನಿಂದಿಸಿ ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲದೇ, ಆತನ ಪರವಾನಗಿ ರದ್ದುಗೊಳಿಸುವಂತೆಯೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಡಾಗ್ ಹೋಮ್ ಫೌಂಡೇಶನ್ ಎಂಬ ಎನ್​ಜಿಒ ಪೋಸ್ಟ್ ಮಾಡಿದ ಟ್ವೀಟ್ ಪ್ರಕಾರ, ವೈದ್ಯನ ಹೆಸರು ರಜನೀಶ್ ಗಾಲ್ವಾ. ಇದು ಬೀದಿನಾಯಿಯಾಗಿದ್ದು, ತನ್ನ ಮನೆಯ ಬಳಿ ವಾಸಿಸುತ್ತಿರುವುದನ್ನು ಸಹಿಸಲಾಗದೇ ಹೀಗೆ ಮಾಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ಉಲ್ಲೇಖಿಸಿವೆ.

ಇದನ್ನೂ ಓದಿ: ಶಿರಸಿಯಲ್ಲಿ ಉಡ ಬೇಟೆಯಾಡಿದ ಕಾಳಿಂಗ ಸರ್ಪ: ವಿಡಿಯೋ ವೈರಲ್

ಈ ಕುರಿತು ಪ್ರಾಣಿ ಹಿಂಸೆ ಕಾಯ್ದೆಯಡಿ ಡಾಗ್ ಹೋಮ್ ಫೌಂಡೇಶನ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.