ಜಫರಾಬಾದ್(ನವದೆಹಲಿ): ಜಫರಾಬಾದ್ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಎಎಸ್ಐಗೆ ಬೀದಿ ನಾಯಿ ಕಚ್ಚಿದೆ. ಇದರಿಂದ ಕೋಪಗೊಂಡಿರುವ ಅಧಿಕಾರಿ ನಡುರಸ್ತೆಯಲ್ಲೇ ಹೊಡೆದು ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಾಯಿಯನ್ನು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಜಫರಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶ್ವಾನದ ಮೇಲೆ ಪೊಲೀಸ್ ಅಧಿಕಾರಿ ದೊಣ್ಣೆಯಿಂದ ಥಳಿಸಿದ್ದಾರೆ. ಈ ವಿಡಿಯೋಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಪೊಲೀಸರು, ಜನವರಿ 10ರಂದು ಜಫರಾಬಾದ್ ಪೊಲೀಸ್ ಠಾಣೆಯ 56 ವರ್ಷದ ಎಎಸ್‌ಐ ರವೀಂದರ್ ಗಸ್ತು ಕರ್ತವ್ಯದಲ್ಲಿದ್ದರು. ಈ ವೇಳೆ ರಸ್ತೆ ನಂಬರ್ 44ರಲ್ಲಿ ಬೀದಿನಾಯಿ ಅವರ ಮೇಲೆರಗಿ ಗಾಯಗೊಳಿಸಿದೆ. ಇದರಿಂದ ಅವರ ಕಾಲಿಗೆ ಗಾಯವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಕ್ಕಡಿ ಓಡಿಸುವ ಸ್ಪರ್ಧೆ ವೇಳೆ ಅಪಘಾತ.. ವಿಡಿಯೋ ಸಿಕ್ಕಾಪಟ್ಟೆ ವೈರಲ್!
ಇದೇ ವೇಳೆ, ನಾಯಿಯಿಂದ ರಕ್ಷಣೆ ಪಡೆದುಕೊಳ್ಳುವ ಉದ್ದೇಶದಿಂದ ಕೋಲಿನಿಂದ ಹೊಡೆದಿದ್ದಾಗಿ ತಿಳಿಸಿದ್ದಾರೆ.