ಥಾಣೆ, ಮಹಾರಾಷ್ಟ್ರ: ವಿಚಿತ್ರ ಪ್ರಕರಣವೊಂದರಲ್ಲಿ 12 ವರ್ಷ ಬಾಲಕಿಯ ಹೊಟ್ಟೆಯಿಂದ ಸುಮಾರು 650 ಗ್ರಾಮ್ ಕೂದಲನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.
ಕಲ್ಯಾಣದಲ್ಲಿ ವಾಸವಿರುವ ಆಕೆಯ ಎರಡು ವರ್ಷದ ಮಗುವಾಗಿದ್ದಾಗಿನಿಂದಲೂ ಕೂದಲನ್ನು ತಿನ್ನುವ ಚಟವಿತ್ತು. ಈ ಚಟವನ್ನು ಬಿಡಿಸಲು ಪೋಷಕರು ಯತ್ನಿಸಿದರಾದರೂ, ಆದರೆ ಸಾಧ್ಯವಾಗಲಿಲ್ಲ.
ಸುಮಾರು ವರ್ಷಗಳಿಂದ ಆಕೆಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಕೆಲವು ದಿನಗಳ ಹಿಂದಷ್ಟೇ ಬಾಲಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದಾಗಿ ಹೇಳಿದ್ದು, ಈ ವೇಳೆ ಆಕೆಯನ್ನು ಕಲ್ಯಾಣದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಬಾಲಕಿಗೆ ಸಿಟಿ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಕೂದಲು ಕಾಣಿಸಿಕೊಂಡಿದ್ದು, ಆಕೆಯ ಕರುಳಿನಲ್ಲಿ ಸಿಲುಕಿತ್ತು. ಇದೇ ಕಾರಣದಿಂದ ಆಕೆಗೆ ಸುಮಾರು ಎರಡು ತಿಂಗಳಿಂದ ಸರಿಯಾಗಿ ಆಹಾರ ಸೇವನೆ ಮಾಡಲು ಸಾಧ್ಯವಾಗಿರಲಿಲ್ಲ.ಹೀಗಾಗಿ ವೈದ್ಯರು ಆಕೆಗೆ ಆಪರೇಷನ್ ಮಾಡಿ ಕೂದಲನ್ನು ಹೊರತೆಗೆದಿದ್ದಾರೆ.