ETV Bharat / bharat

ವೈದ್ಯರು ಮಾಡಿದ ಎಡವಟ್ಟು.. ವೃದ್ಧೆ ಕುಟುಂಬಸ್ಥರ ಆರೋಪ..

author img

By

Published : Feb 10, 2021, 3:24 PM IST

ಮಹಿಳೆ ಎಡಗಾಲಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದರೆ, ವೃದ್ಧ ಮಹಿಳೆಯ ಕುಟುಂಬ ಸದಸ್ಯರು ಆಕೆಯ ಬಲಗಾಲಿನ ಮೂಳೆ ಮುರಿದಿದೆ ಎಂದು ಆರೋಪಿಸಿದ್ದಾರೆ. ಎಡವಟ್ಟು ಮಾಡಿರುವುದೂ ಅಲ್ಲದೇ, ವೈದ್ಯರು ರೋಗಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ..

ವೈದ್ಯರು ಮಾಡಿದ ಎಡವಟ್ಟು
ವೈದ್ಯರು ಮಾಡಿದ ಎಡವಟ್ಟು

ಭಿವಾನಿ (ಹರಿಯಾಣ) : ಇರುವ ಒಂದು ಕಾಲನ್ನು ಸರಿ ಮಾಡಿ ಅಂತಾ ಆಸ್ಪತ್ರೆಗೆ ದಾಖಲಾದರೆ, ಆ ವೈದ್ಯರು ಸರಿ ಇದ್ದ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಸರಿ ಇರುವ ಇನ್ನೊಂದು ಕಾಲನ್ನೂ ಬರ್ಬಾದ್ ಮಾಡಿ ಬಡ ವೃದ್ಧೆಗೆ ಫಜೀತಿ ತಂದಿಟ್ಟಿದ್ದಾರೆ. ಬಲಗಾಲಿಗೆ ಮಾಡಬೇಕಿದ್ದ ಶಸ್ತ್ರಚಿಕಿತ್ಸೆಯನ್ನ ಎಡಗಾಲಿಗೆ ಮಾಡಿದ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ.

ಕುಟುಂಬದವರು ಹೇಳುವ ಪ್ರಕಾರ, ಭಟೇರಿ ದೇವಿ ಎಂಬುವರು ಮನೆಯಲ್ಲಿ ಕೆಲಸ ಮಾಡುವಾಗ ಬಿದ್ದು ಕಾಲು ಮುರಿದುಕೊಂಡಿದ್ದರು. ಈ ಹಿನ್ನೆಲೆ ಅವರ ಸಂಬಂಧಿಗಳು ವೃದ್ಧೆಯನ್ನ ಆಸ್ಪತ್ರೆಗೆ ದಾಖಲಿಸಿದ್ದರು.

ಮಹಿಳೆ ಎಡಗಾಲಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದರೆ, ವೃದ್ಧ ಮಹಿಳೆಯ ಕುಟುಂಬ ಸದಸ್ಯರು ಆಕೆಯ ಬಲಗಾಲಿನ ಮೂಳೆ ಮುರಿದಿದೆ ಎಂದು ಆರೋಪಿಸಿದ್ದಾರೆ. ಎಡವಟ್ಟು ಮಾಡಿರುವುದೂ ಅಲ್ಲದೇ, ವೈದ್ಯರು ರೋಗಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.

ಈ ಬಗ್ಗೆ ತನಿಖೆ ನಡೆಸುವುದಾಗಿ ಆಸ್ಪತ್ರೆ ಪ್ರಧಾನ ವೈದ್ಯಕೀಯ ಅಧಿಕಾರಿ (ಪಿಎಂಒ) ಡಾ.ರಘುಬೀರ್ ಶಾಂಡಿಲ್ಯ ಹೇಳಿದ್ದಾರೆ. ಅಷ್ಟೇ ಅಲ್ಲ, ತನಿಖೆಗೆ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.