ETV Bharat / bharat

ಸೇಫ್ಟಿ ಪಿನ್ ನುಂಗಿದ 5 ತಿಂಗಳ ಮಗು: ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಪ್ರಾಣ ರಕ್ಷಿಸಿದ ವೈದ್ಯರು - ಮಗುವಿನ ಶ್ವಾಸನಾಳದಲ್ಲಿ ಸಿಲುಕಿದ್ದ ಸೇಫ್ಟಿ ಪಿನ್

ಐದು ತಿಂಗಳ ಮಗುವಿನ ಶ್ವಾಸನಾಳದಲ್ಲಿ ಸಿಲುಕಿದ್ದ ಒಂದು ಇಂಚಿನ ಸೇಫ್ಟಿ ಪಿನ್​ ಅನ್ನು ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಹೊರತೆಗೆದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

Doctors in Kolkata remove safety pin stuck in 5 month old babys trachea
ಆಚಾನಕ್​ ಆಗಿ ಒಂದು ಇಂಚಿನ ಸ್ಟೇಫ್ಟಿ ಪಿನ್ ನುಂಗಿದ್ದ 5 ತಿಂಗಳ ಮಗು: ಶಸ್ತ್ರಚಿಕಿತ್ಸೆ ಮೂಲಕ ಹೊರೆತೆಗೆದ ವೈದ್ಯರು
author img

By ETV Bharat Karnataka Team

Published : Oct 15, 2023, 7:49 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಐದು ತಿಂಗಳ ಮಗುವಿನ ಶ್ವಾಸನಾಳದಲ್ಲಿ ಸಿಲುಕಿದ್ದ ಸೇಫ್ಟಿ ಪಿನ್​ಅನ್ನು ಶಸ್ತ್ರಚಿಕಿತ್ಸೆ ಮೂಲಕ ಪಶ್ಚಿಮ ಬಂಗಾಳದ ಕೊಲ್ಕತ್ತಾ ವೈದ್ಯಕೀಯ ಕಾಲೇಜಿನ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಆಕಸ್ಮಿಕವಾಗಿ ಮಗು ಪಿನ್​ ನುಂಗಿತ್ತು. 40 ನಿಮಿಷದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನೆರವೇರಿಸಿ ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೂಗ್ಲಿ ಜಿಲ್ಲೆಯ ಜಂಗಿಪಾರಾ ಗ್ರಾಮದ ಗಂಡು ಮಗು ಐದು ದಿನಗಳ ಹಿಂದೆ ಅಚಾನಕ್​ ಆಗಿ ಪಿನ್ ನುಂಗಿತ್ತು. ಇದರಿಂದ ಉಸಿರಾಟದ ತೊಂದರೆ ಉಂಟಾಗಿದೆ. ಪೋಷಕರು ಸಮೀಪದ ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಶಿಶುವಿಗೆ ಶೀತಬಾಧೆ ಉಂಟಾಗಿದೆ ಎಂಬ ಊಹಿಸಿ, ಅದಕ್ಕನುಗುಣವಾಗಿ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದಾರೆ. ಆದರೆ, ಮಗುವಿನ ಆರೋಗ್ಯ ಪರಿಸ್ಥಿತಿ ತೀರಾ ಹದಗೆಡಲು ಶುರುವಾಗಿದೆ. ನಿರಂತರವಾಗಿ ಜೊಲ್ಲು ಸುರಿಸಲಾರಂಭಿಸಿದೆ. ಪುಟ್ಟ ಕಂದ ಹಸಿವನ್ನೂ ಕಳೆದುಕೊಂಡಿತ್ತು.

ಬಾಯ್ತೆರೆದ ಪಿನ್​ನ ಚುಪಾದ ತುದಿ!: ಮಗುವಿನ ಪರಿಸ್ಥಿತಿಯಿಂದ ಆತಂಕಗೊಂಡ ಕುಟುಂಬಸ್ಥರು ಗುರುವಾರ ಮಧ್ಯಾಹ್ನ ಕೊಲ್ಕತ್ತಾ ವೈದ್ಯಕೀಯ ಕಾಲೇಜಿಗೆ ಸೇರಿಸಿದ್ದಾರೆ. ಇಎನ್‌ಟಿ ವಿಭಾಗದ ವೈದ್ಯ ಸುದೀಪ್ ದಾಸ್ ಹಾಗೂ ಇತರೆ ವೈದ್ಯರು ಎಕ್ಸ್-ರೇ ಮಾಡಿದಾಗ ಶ್ವಾಸನಾಳದಲ್ಲಿ ಉದ್ದನೆಯ ಸೇಫ್ಟಿ ಪಿನ್​ ಸಿಲುಕಿರುವುದು ಗೊತ್ತಾಗಿದೆ. ಫಿನ್​ನ ಚುಪಾದ ಒಂದು ತುದಿ ಬಾಯ್ತೆರೆದುಕೊಂಡಿರುವುದನ್ನೂ ಕಂಡುಕೊಂಡಿದ್ದಾರೆ. ಹೀಗಾಗಿ ಮಗುವಿಗೆ ಆಪರೇಷನ್ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.

ಅಂತೆಯೇ, ಶುಕ್ರವಾರ ಬೆಳಗ್ಗೆ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. 40 ನಿಮಿಷ ಶ್ರಮಿಸಿ ಶ್ವಾಸನಾಳದಿಂದ ಪಿನ್​ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಇದೀಗ ಮಗು ಆರೋಗ್ಯವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಡಾ.ಸುದೀಪ್ ದಾಸ್, ''ಶಸ್ತ್ರಚಿಕಿತ್ಸೆಯ ಆರಂಭದಲ್ಲಿ ಮಗುವಿನ ಶ್ವಾಸನಾಳದೊಳಗೆ ಸೇಫ್ಟಿ ಪಿನ್​ ಪ್ರವೇಶಿಸುತ್ತದೆ ಎಂದು ನಾವು ಭಯಪಟ್ಟಿದ್ದೆವು. ಹೀಗಾಗಿ ಆದಷ್ಟು ಬೇಗನೆ ಪರಿಸ್ಥಿತಿ ನಿಭಾಯಿಸುವ ಅಗತ್ಯವಿತ್ತು. ಅದೃಷ್ಟವಶಾತ್, ಪಿನ್ ಶ್ವಾಸನಾಳದೊಳಗೆ ಸೇರಲಿಲ್ಲ. ಅದನ್ನು ಹೊರತೆಗೆಯುವ ಮೂಲಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ'' ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆಯ ವೈದ್ಯಕೀಯ ತಂಡದಲ್ಲಿ ಸರ್ಜನ್​ ಡಾ.ಸುಭ್ರಜ್ಯೋತಿ ನಸ್ಕರ್, ಡಾ.ಮೈನಕ್ ದತ್ತಾ, ಡಾ.ತನಯಾ ಪಂಜ ಹಾಗೂ ಅರಿವಳಿಕೆ ತಜ್ಞ ಡಾ.ಮೃದುಛಂದ ದಾಸ್ ಇದ್ದರು.

ಇದನ್ನೂ ಓದಿ: ಫ್ಲೋರ್‌ ಕ್ಲೀನರ್‌ ಕುಡಿದು ಅನ್ನನಾಳವನ್ನೇ ಕಳೆದು ಕೊಂಡಿದ್ದ 6 ವರ್ಷದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.