ಗ್ವಾಲಿಯಾರ್: ಪೊಲೀಸ್ ಮತ್ತು ಆಸ್ಪತ್ರೆ ಸಿಬ್ಬಂದಿ ನಡುವೆ ಆಕ್ಸಿಜನ್ಗಾಗಿ ಕಿತ್ತಾಟ ನಡೆದಿರುವ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.
ಮಹಾರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಂಟೋ ಪಾರ್ಕ್ ಇಂಡಸ್ಟ್ರಿಯಲ್ ನಗರದಲ್ಲಿ ಆಕ್ಸಿಜನ್ ಸಿಲಿಂಡರ್ ತುಂಬುವ ವಿಚಾರದಲ್ಲಿ ಸಬ್‌ಇನ್ಸ್‌ಪೆಕ್ಟರ್ ಮತ್ತು ಖಾಸಗಿ ಆಸ್ಪತ್ರೆಯ ಆಯೋಜಕರು ನಡುವೆ ಜಗಳ ನಡೆದಿದೆ.
ಮೊದಲು ಸಬ್ ಇನ್ಸ್‌ಪೆಕ್ಟರ್ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಕೋಪಗೊಂಡು ಆಸ್ಪತ್ರೆ ಸಿಬ್ಬಂದಿಗೆ ಕಪಾಳಮೋಕ್ಷ ಮಾಡುತ್ತಾರೆ. ನಂತರ, ಅವನು ಕತ್ತಿಗೆ ಕೈ ಹಾಕುತ್ತಾನೆ. ಇದರಿಂದ ಕೋಪಗೊಂಡ ಆಸ್ಪತ್ರೆ ಸಿಬ್ಬಂದಿಯೂ ಸಹ ಸಬ್ ಇನ್ಸ್‌ಪೆಕ್ಟರ್ ಜೊತೆ ಕಾದಾಟಗಿಳಿಯುತ್ತಾರೆ. ತದನಂತರ ಇನ್ನುಳಿದ ಪೊಲೀಸರು ಮತ್ತು ಸ್ಥಳೀಯರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದಾರೆ.
ಈ ಘಟನೆ ಕುರಿತು ಮಹಾರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.