ಕಚ್ (ಗುಜರಾತ್): ಕೋವಿಡ್ನ ಹೊಸ ರೂಪಾಂತರ ತಳಿಯ ವೈರಸ್‌ಗಳು ಜಗತ್ತಿನಲ್ಲಿ ಹರಡುತ್ತಿವೆ. ಆದರೆ, ದೇಶದಲ್ಲಿ ಈಗ H3N2 ವೈರಸ್ ಭಯ ಹೆಚ್ಚಾಗಿ ಕಾಡುತ್ತಿದೆ. ಇನ್‌ಫ್ಲುಯೆಂಜಾ ವೈರಸ್ H3N2 ಪ್ರಕರಣಗಳ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಅತ್ಯವಶ್ಯವಾಗಿದೆ ಎನ್ನುತ್ತಾರೆ ತಜ್ಞ ವೈದ್ಯರು. ಕಚ್‌ನಲ್ಲಿ ಇನ್‌ಫ್ಲುಯೆಂಜಾ ವೈರಸ್ H3N2ನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೆ, ಪ್ರಸ್ತುತ 2 ಸಕ್ರಿಯ ಕೋವಿಡ್ ಪ್ರಕರಣಗಳು ಮತ್ತು 5 ಸೌಮ್ಯ (ಮೈಲ್ಡ್) ಪ್ರಕರಣಗಳು ಸಕ್ರಿಯವಾಗಿವೆ.
ಎರಡು ಕೋವಿಡ್ ಪ್ರಕರಣಗಳು ಸಕ್ರಿಯ: ಜಿಲ್ಲಾ ಸಾಂಕ್ರಾಮಿಕ ರೋಗ ವೈದ್ಯಾಧಿಕಾರಿ ಡಾ.ಜಿತೇಶ್ ಖೊರಾಸಿಯಾ ಮಾತನಾಡಿ, ಗಡಿ ಜಿಲ್ಲೆ ಕಛ್‌ನಲ್ಲಿ ಬದಲಾದ ತಂಪಾದ ಹವಾಮಾನದಿಂದ ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ. ಶಂಕಿತ ಪ್ರಕರಣಗಳನ್ನು ಪರೀಕ್ಷೆಗಾಗಿ ಭುಜ್‌ನ ಜಿಕೆ ಜನರಲ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 2 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಮೇಘಪರ್ನ ಬೋರಿಚಿ ಹಾಗೂ ರಾಪರ್ ಪ್ರದೇಶದಲ್ಲಿ ತಲಾ ಒಂದು ಪ್ರಕರಣ ಸಕ್ರಿಯವಾಗಿವೆ.
ಥಾಯ್ಲೆಂಡ್‌ನಿಂದ ಹಿಂದಿರುಗಿದ 37 ವರ್ಷದ ವ್ಯಕ್ತಿ ಮತ್ತು ಮೇಘಪರ್ ಬೊರಿಚಿಯ 80 ವರ್ಷದ ವ್ಯಕ್ತಿಯ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾ ರೋಗಿಯ ಸ್ಥಿತಿ ಸುಧಾರಿಸಿದೆ. ಮೇಘಪರ್ ಬೊರಿಚಿಯ ವೃದ್ಧನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಂಧಿಧಾಮ್ ಮತ್ತು ರಾಪರ್ ಯುವಕರಿಗೆ ಪ್ರತ್ಯೇಕವಾಗಿ ಆರೈಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಏರಿಕೆ ಕಂಡ ಎಚ್3ಎನ್2 ಸೋಂಕು: ವೈದ್ಯರು ನೀಡುವ ಸಲಹೆಗಳೇನು?
5 ಎಚ್1ಎನ್1 ಪ್ರಕರಣಗಳು ಪತ್ತೆ: ಜಿಲ್ಲೆಯಲ್ಲಿ 5 ಎಚ್1ಎನ್1 ಪ್ರಕರಣಗಳು ವರದಿಯಾಗಿವೆ. ಎಚ್3ಎನ್2 ಪರೀಕ್ಷೆಗೆ ಯಾವುದೇ ಕಿಟ್‌ಗಳು ಲಭ್ಯವಿಲ್ಲ. ಅಲ್ಲದೇ ಜಿಲ್ಲೆಯಲ್ಲಿ ಪ್ರಸ್ತುತ 5 ಎಚ್1ಎನ್1 ಪ್ರಕರಣಗಳು ಜನರಲ್ ಆಸ್ಪತ್ರೆಯಲ್ಲಿನ ಲ್ಯಾಬ್ ಪರೀಕ್ಷೆಗಳಿಂದ ಪತ್ತೆಯಾಗಿವೆ. ಈ ಪ್ರಕರಣಗಳು ಸಹ ಸೌಮ್ಯ (ಮೈಲ್ಡ್) ಆಗಿವೆ. ಎಚ್3ಎನ್2 ಪ್ರಕರಣಗಳು ವರದಿಯಾಗಿಲ್ಲ. ಇಲ್ಲಿಯವರೆಗೆ ಭುಜ್ ಜನರಲ್ ಆಸ್ಪತ್ರೆಯಲ್ಲಿ ಪ್ರಸ್ತುತ ಆರ್ಟಿಪಿಸಿಆರ್ನೊಂದಿಗೆ ಎಚ್1ಎನ್1 ಮತ್ತು ಕೋವಿಡ್ ಪರೀಕ್ಷಿಸಲು ಪರೀಕ್ಷಾ ಕಿಟ್‌ಗಳು ಲಭ್ಯವಿದ್ದು, ಆಡಳಿತ ಮತ್ತು ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ಪೂರೈಸಲು ಸಮರ್ಥವಾಗಿರುವ ಕ್ಷಿಪ್ರ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ಸೋಂಕು ಹೆಚ್ಚಿಸುವ ಉಪತಳಿ ಹೊಂದಿದೆ H3N2
ಇಲ್ಲಿವೆ ಕೋವಿಡ್ ಮಾರ್ಗಸೂಚಿಗಳು: ಪ್ರಸಕ್ತ ಮಾಸದಲ್ಲಿ ರೂಪಾಂತರ ವೈರಸ್‌ಗಳು ಮತ್ತು ವೈರಲ್ ಸೋಂಕುಗಳ ಹಿನ್ನೆಲೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಇದರಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಆಗಾಗ್ಗೆ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸುವುದು. ಯಾವುದೇ ರೋಗಲಕ್ಷಣಗಳು ಕಂಡುಬಂದರೆ, ಆಸ್ಪತ್ರೆಗೆ ತೆರಳಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ.ಜಿತೇಶ್ ಖೋರಾಸಿಯಾ ಮನವಿ ಮಾಡಿದರು.
H3N2 ಕೋವಿಡ್ನಿಂದ ಮಹಿಳೆ ಸಾವು: ಗುಜರಾತ್‌ನ ವಡೋದರಾದಲ್ಲಿ 58 ವರ್ಷದ ಮಹಿಳೆಯೊಬ್ಬರು H3N2 ಕೋವಿಡ್ ರೂಪಾಂತರದಿಂದ ಮೃತಪಟ್ಟಿದ್ದಾರೆ. ಇದು ಗುಜರಾತ್‌ನಲ್ಲಿ ಮೊದಲ H3N2 ಸಂಬಂಧಿತ ಸಾವು ಮತ್ತು ಭಾರತದಲ್ಲಿ ಮೂರನೇ ಸಾವು ಎಂದು ಹೇಳಲಾಗಿದೆ. ಪ್ರಪಂಚದಾದ್ಯಂತ ವಿನಾಶವನ್ನು ಉಂಟುಮಾಡಿದ ಕೊರೋನಾ ವೈರಸ್ ನಂತರ ಫ್ಲೂ ವೈರಸ್ ತಲೆ ಎತ್ತುತ್ತಿದೆ. ರೋಗಿಯು ಎರಡು ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರು.
ಆದರೆ, ಅಂತಿಮವಾಗಿ ಸಾವನ್ನಪ್ಪಿದರು. ಪ್ರಸ್ತುತ, ಈ ಸಾವಿನ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಇಲ್ಲಿ ಬಂದಿರುವ ಮಾಹಿತಿ ಪ್ರಕಾರ ಎರಡು ದಿನಗಳ ಹಿಂದೆ ವಡೋದರಾದ 58 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಅಸ್ಸಾಜಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಚಿಕಿತ್ಸೆ ಬಳಿಕ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಅಧಿಕ ರಕ್ತದೊತ್ತಡ ರೋಗಿಯಾಗಿದ್ದು, ವೆಂಟಿಲೇಟರ್‌ನಲ್ಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಮಾನವನಿಗೆ ಆಪತ್ತು ತರುವ ವೈರಸ್ಗಳ ಅಧ್ಯಯನಕ್ಕೆ ಚೌಕಟ್ಟು ರೂಪಿಸಬೇಕಿದೆ: ವಿಜ್ಞಾನಿಗಳ ಕರೆ
ಇದನ್ನೂ ಓದಿ: ಮಾನವನಿಗೆ ಆಪತ್ತು ತರುವ ವೈರಸ್ಗಳ ಅಧ್ಯಯನಕ್ಕೆ ಚೌಕಟ್ಟು ರೂಪಿಸಬೇಕಿದೆ: ವಿಜ್ಞಾನಿಗಳ ಕರೆ