ETV Bharat / bharat

ಕಮಲ ಮುಡಿದ ಸಂಸದ ತಿರುಚ್ಚಿ ಶಿವ ಪುತ್ರ.. ಶೀಘ್ರದಲ್ಲೇ ಇಡೀ ಡಿಎಂಕೆ ಬಿಜೆಪಿಗೆ ಎಂದ ಸೂರ್ಯ ಶಿವ! - ಬಿಜೆಪಿಗೆ ಸೇರ್ಪಡೆಯಾದ ಸೂರ್ಯ ಶಿವ

ಡಿಎಂಕೆ ಸಂಸದ ತಿರುಚ್ಚಿ ಶಿವ ಅವರ ಪುತ್ರ ಸೂರ್ಯ ಶಿವ ತಮಿಳುನಾಡು ಬಿಜೆಪಿಗೆ ಸೇರ್ಪಡೆಯಾಗಿದ್ದು, ಶೀಘ್ರದಲ್ಲೇ ಇಡೀ ಡಿಎಂಕೆ ಬಿಜೆಪಿಗೆ ಸೇರಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

DMK MP Trichy Siva's Son joins BJP
ಡಿಎಂಕೆ ಸಂಸದ ತಿರುಚ್ಚಿ ಶಿವ ಪುತ್ರ ತಮಿಳುನಾಡು ಬಿಜೆಪಿಗೆ ಸೇರ್ಪಡೆ
author img

By

Published : May 9, 2022, 8:17 PM IST

ಚೆನ್ನೈ (ತಮಿಳುನಾಡು): ಡಿಎಂಕೆ ಸಂಸದ ತಿರುಚ್ಚಿ ಶಿವ ಅವರ ಪುತ್ರ ಸೂರ್ಯ ಶಿವ ಬಿಜೆಪಿ ಸೇರಿದ್ದಾರೆ. ಚೆನ್ನೈನ ಕಮಲಾಲಯದಲ್ಲಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಬಳಿಕ ಮಾತನಾಡಿದ ಅವರು, ಡಿಎಂಕೆ ಶ್ರಮಿಕರ ಸ್ಥಳವಲ್ಲ. ನನ್ನ ಶ್ರಮಕ್ಕೆ ಮನ್ನಣೆ ಇಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಪಕ್ಷದ ಬೆಳವಣಿಗೆಗೆ ರಾಜ್ಯ ನಾಯಕ ಅಣ್ಣಾಮಲೈ ತಮ್ಮ ಕೈಲಾದಷ್ಟು ಶ್ರಮಿಸುತ್ತಿದ್ದಾರೆ. ಅಧಿಕಾರಿಗಳ ಶ್ರಮವನ್ನು ಅವರು ಶ್ಲಾಘಿಸುತ್ತಾರೆ. ನನಗೆ ಪಕ್ಷದಲ್ಲಿ ಯಾವುದೇ ಉನ್ನತ ಸ್ಥಾನ ಬೇಕಾಗಿಲ್ಲ. ನನ್ನ ಶ್ರಮಕ್ಕೆ ಮಾತ್ರ ಮನ್ನಣೆ ಸಿಕ್ಕರೆ ಸಾಕು. ಡಿಎಂಕೆಯಲ್ಲಿ ಸಾಕಷ್ಟು ಶೀತಲ ಸಮರ ನಡೆಯುತ್ತಿದೆ. ಉದಯನಿಧಿ ಸ್ಟಾಲಿನ್ ಪ್ರಚಾರಕ್ಕಾಗಿ ಡಿಎಂಕೆ ವಿಶೇಷ ತಂಡವನ್ನು ಹೊಂದಿದೆ. ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು, ನಾನು ಬಿಜೆಪಿ ಸೇರುವುದನ್ನು ಸ್ವಾಗತಿಸಿದ್ದಾರೆ. ಶೀಘ್ರದಲ್ಲೇ ಇಡೀ ಡಿಎಂಕೆ ಬಿಜೆಪಿ ಸೇರಲಿದೆ ಎಂದು ಹೇಳಿದರು.

ಇದನ್ನೂ ಓದಿ: ನಾಳೆ ದೆಹಲಿಯತ್ತ ಸಿಎಂ ಬೊಮ್ಮಾಯಿ.. ವರಿಷ್ಠರ ಜೊತೆ ಸಂಪುಟ ಸರ್ಜರಿ ಚರ್ಚೆ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.