ETV Bharat / bharat

ತಮಿಳುನಾಡು ವಿಧಾನ ಕದನ.. ಮಗ ಉದಯನಿಧಿ ಪರ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಪ್ರಚಾರ! - ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್

ನಿಮ್ಮ ಮಗನಿಗಾಗಿ ಏಕೆ ಪ್ರಚಾರ ಮಾಡಬಾರದು ಎಂಬ ಪ್ರಶ್ನೆಯನ್ನು ಯಾರೂ ಕೇಳಬಾರದು. ಆದ್ದರಿಂದ ನಾನು ಮತಗಳನ್ನು ಕೇಳಲು ಇಲ್ಲಿಗೆ ಬಂದಿದ್ದೇನೆ..

DMK chief campaigns for son ahead of Tamil Nadu Assembly polls
ಮಗ ಉದಯನಿಧಿ ಪರ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಪ್ರಚಾರ
author img

By

Published : Apr 4, 2021, 5:28 PM IST

ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಗೆ ಎರಡೇ ದಿನ ಬಾಕಿಯಿದೆ. ಮಗ ಉದಯನಿಧಿ ಸ್ಟಾಲಿನ್ ಪರ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರು ಪ್ರಚಾರ ನಡೆಸುತ್ತಿದ್ದಾರೆ.

ಚೆಪಾಕ್-ತಿರುವಳ್ಳಿಕೆಣಿ ಕ್ಷೇತ್ರದಲ್ಲಿ ಉದಯನಿಧಿ ಪರ ಪ್ರಚಾರ ನಡೆಸಿದ ಎಂ ಕೆ ಸ್ಟಾಲಿನ್, "ನೀವು ಇತರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವಾಗ ನಿಮ್ಮ ಮಗನಿಗಾಗಿ ಏಕೆ ಪ್ರಚಾರ ಮಾಡಬಾರದು ಎಂಬ ಪ್ರಶ್ನೆಯನ್ನು ಯಾರೂ ಕೇಳಬಾರದು. ಆದ್ದರಿಂದ ನಾನು ಮತಗಳನ್ನು ಕೇಳಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದರು. ಮೊದಲ ಬಾರಿ ವಿಧಾನಸಭಾ ಚುನಾವಣಾ ಕಣಕ್ಕಿಳಿದಿರುವ ನಟ ಉದಯನಿಧಿ, ಚೆನ್ನೈನ ಚೆಪಾಕ್-ತಿರುವಳ್ಳಿಕೆಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢ ನಕ್ಸಲ್ ದಾಳಿ.. ಚುನಾವಣಾ ಪ್ರಚಾರ ಬಿಟ್ಟು ದೆಹಲಿಗೆ ಮರಳಿದ ಅಮಿತ್​ ಶಾ..

ತಮಿಳುನಾಡಿನಲ್ಲಿ ಏಪ್ರಿಲ್​ 6ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಡಿಎಂಕೆ-ಕಾಂಗ್ರೆಸ್-ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಮೇ 2ರಂದು ಫಲಿತಾಂಶ ಹೊರ ಬೀಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.