ಕಾನ್ಪುರ (ಉತ್ತರ ಪ್ರದೇಶ): ಮಹಾನಗರದ ಚಾಕೆರಿ ಪೊಲೀಸ್ ಠಾಣಾ ಪ್ರದೇಶದಲ್ಲಿ ಬಡ ಅಂಗವಿಕಲ ಮಹಿಳೆಯಿಂದ ಪೊಲೀಸರು ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಒಂದು ತಿಂಗಳ ಮಹಿಳೆಯ ಮಗಳ ಅಪಹರಣವಾಗಿತ್ತು. ಮಗಳನ್ನು ಹುಡುಕಿಕೊಡುವ ನೆಪದಲ್ಲಿ ಪೊಲೀಸರು ಮಹಿಳೆಯಿಂದ ಡೀಸೆಲ್ ಹೆಸರಿನಲ್ಲಿ ಬಲವಂತವಾಗಿ ಎರಡೂವರೆ ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.
ಇದರ ಹೊರತಾಗಿಯೂ, ಮಹಿಳೆಯ ಮಗಳನ್ನು ಹುಡುಕಿ ಕೊಟ್ಟಿಲ್ಲ ಹಾಗೂ ಯಾವುದೇ ಆರೋಪಿಗಳನ್ನು ಹಿಡಿಯಲಿಲ್ಲ. ಇದರಿಂದ ಬೇಸತ್ತ ಮಹಿಳೆ ಎಸ್‌ಎಸ್‌ಪಿಗೆ ದೂರು ನೀಡಿದ್ದು, ನಂತರ ಎಸ್‌ಎಸ್‌ಪಿ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ಮಹಿಳೆಯ 15 ವರ್ಷದ ಮಗಳನ್ನು ಒಂದು ತಿಂಗಳ ಹಿಂದೆ ಠಾಕೂರ್ ಎಂಬ ವ್ಯಕ್ತಿ ಅಪಹರಿಸಿಕೊಂಡು ಹೋಗಿದ್ದ. ಪೊಲೀಸರು ಎಫ್‌ಐಆರ್ ಬರೆದುಕೊಂಡು, ತನಿಖೆ ಹಾಗೂ ಹುಡುಕಾಟ ನಡೆಸುವ ನೆಪದಲ್ಲಿ ಮಹಿಳೆಯಿಂದ ಬಲವಂತವಾಗಿ ಎರಡೂವರೆ ಸಾವಿರ ಡೀಸೆಲ್ ತುಂಬಿಸಿದರು.
ಮೂರರಿಂದ ನಾಲ್ಕು ಬಾರಿ ಇದೇ ರೀತಿ ಮಾಡಿದ್ದರೂ ಮಗಳನ್ನು ಹುಡುಕಿ ಕೊಟ್ಟಿಲ್ಲ. ಈವರೆಗೆ 15 ಸಾವಿರ ಖರ್ಚು ಮಾಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದೀಗ ಮಹಿಳೆ ಎಸ್‌ಎಸ್‌ಪಿಗೆ ದೂರು ನೀಡಿದ್ದು, ಪೊಲೀಸರ ವಿರುದ್ಧ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.