ಜೋಧಪುರ( ರಾಜಸ್ಥಾನ): ನಗರದ ಸುರ್‌ಸಾಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಯುವಕರ ಎರಡು ಗುಂಪುಗಳ ನಡುವೆ ಮಾರಮಾರಿ ನಡೆದಿದೆ. ಈ ವೇಳೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ಘಟನೆ: ರಾಜಾರಾಮ್ ವೃತ್ತದ ಬಳಿ ಬಾಬು ಮಾಳಿ ಎಂಬವರ ನೀರು ಸರಬರಾಜು ಕಾಮಗಾರಿ ನಡೆಯುತ್ತಿದೆ. ಆತನ ಮಗ ಟ್ಯಾಕ್ಸಿ ಡ್ರೈವರ್ ಜೊತೆ ಜಗಳವಾಡಿದ್ದಾನೆ. ಸ್ವಲ್ಪ ಸಮಯದ ನಂತರ ಟ್ಯಾಕ್ಸಿ ಡ್ರೈವರ್ ಗುಂಪು ಮತ್ತು ಬಾಬು ಮಗನ ಗುಂಪು ಮಧ್ಯೆ ಹೊಡೆದಾಟ ನಡೆದಿದೆ.
ಓದಿ: ಬೆಳಗಾವಿ ಮೆಡಿಕಲ್ ಕಾಲೇಜಲ್ಲಿ ಸೀನಿಯರ್ಸ್-ಜ್ಯೂನಿಯರ್ಸ್ ನಡುವೆ ಮಾರಾಮಾರಿ.. 15 ವಿದ್ಯಾರ್ಥಿಗಳು ಸಸ್ಪೆಂಡ್
ವೃತ್ತದ ಬಳಿ ಹೊಡೆದಾಟ ನಡೆಯುತ್ತಿದ್ದ ಸುದ್ದಿ ಪೊಲೀಸರಿಗೆ ತಿಳಿದಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಜನರನ್ನು ಚದುರಿಸಿದರು. ನಂತರ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಆರ್ಎಸಿ ಸೇರಿದಂತೆ ಭಾರಿ ಪೊಲೀಸ್ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಈ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಈ ನಗರದ ಮುಖ್ಯಸ್ಥರೊಂದಿಗೆ ಡಿಸಿಪಿ ವಂದಿತಾ ರಾಣಾ ಮಾತುಕತೆ ನಡೆಸಿ, ಸ್ಥಳದಲ್ಲಿ ಶಾಂತಿ ನೆಲೆಸಬೇಕು ಎಂದು ಹೇಳಿದ್ದಾರೆ. ಎಲ್ಲ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ನವರು ಕೂಡ ಸ್ಥಳಕ್ಕೆ ಆಗಮಿಸಿದರು.