ETV Bharat / bharat

ಹೈದರಾಬಾದ್​ನಲ್ಲಿ ಸಿಡಬ್ಲ್ಯೂಸಿ ಸಭೆ: 'ಐದು ರಾಜ್ಯಗಳ ಮುಂಬರುವ ಚುನಾವಣೆಗಳ ಬಗ್ಗೆ ಚರ್ಚೆ'; ಮಲ್ಲಿಕಾರ್ಜುನ ಖರ್ಗೆ

ಮೊದಲ ಬಾರಿಗೆ ಕಾಂಗ್ರೆಸ್​ನ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ ವಹಿಸುತ್ತಿದ್ದಾರೆ.

Congress President Mallikarjun Kharge
ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
author img

By ETV Bharat Karnataka Team

Published : Sep 16, 2023, 11:37 AM IST

Updated : Sep 16, 2023, 1:24 PM IST

ನವದೆಹಲಿ: ಇಂದು ಹೈದರಾಬಾದ್​ನಲ್ಲಿ ನಡೆಯಲಿರುವ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಪಕ್ಷದ ವರಿಷ್ಠರು ಚರ್ಚಿಸಲಿದ್ದಾರೆ ಎಂದು ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸಿಡಬ್ಲ್ಯೂಸಿಯ ಪುನಾರಚನೆಯ ಮೊದಲ ಸಭೆ ಇದಾಗಿದೆ.

  • #WATCH | Congress president Mallikarjun Kharge, Parliamentary Party Chairperson Sonia Gandhi, MP Rahul Gandhi, Congress General Secretary Priyanka Gandhi Vadra, Rajasthan CM Ashok Gehlot, Chhattisgarh CM Bhupesh Baghel and party leader Sachin Pilot arrive at Hyderabad airport to… pic.twitter.com/2fyvAA20n1

    — ANI (@ANI) September 16, 2023 " class="align-text-top noRightClick twitterSection" data=" ">

ಸುದ್ದಿಗಾರರ ಜೊತೆ ಮಾತನಾಡಿದ ಅವರು, "ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆಯುತ್ತಿರುವ ಮೊದಲ ಸಿಡಬ್ಲ್ಯೂಸಿ ಸಭೆ ಇದು. ನಾಳೆ ವಿಸ್ತೃತ ಕಾರ್ಯಕಾರಿ ಸಭೆ ನಡೆಯಲಿದ್ದು, ಅಲ್ಲಿ ಪಕ್ಷಕ್ಕೆ ಸಂಬಂಧಿಸಿದ ಚರ್ಚೆ ನಡೆಯಲಿದೆ. ರಾಹುಲ್​ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್​ ಪಕ್ಷದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಸೇರಿದಂತೆ ಕಾಂಗ್ರೆಸ್​ ನಾಯಕರು ಮುಂಬರಲಿರುವ ಐದು ರಾಜ್ಯಗಳ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಲಿದ್ದು, ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಲಿದ್ದಾರೆ. ಮೈತ್ರಿಕೂಟ ಇಂಡಿಯಾ ಕುರಿತು ಮುಂದಿನ ಸಭೆಯಲ್ಲಿ ಮೈತ್ರಿಕೂಟದ ಪಾಲುದಾರರ ಜೊತೆಗೆ ಚರ್ಚಿಸಲಾಗುವುದು" ಎಂದು ಖರ್ಗೆ ತಿಳಿಸಿದರು.

ಹೈದರಾಬಾದ್​ನಲ್ಲಿ ನಡೆಯುತ್ತಿರುವ ಸಿಡಬ್ಲ್ಯೂಡಿ ಸಭೆಯ ಅಧ್ಯಕ್ಷತೆ ವಹಿಸಲು ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬೆಳಗ್ಗೆ ಹೈದರಾಬಾದ್​ಗೆ ಬಂದಿಳಿದಿದ್ದಾರೆ. ಇವರಲ್ಲದೇ ಕಾಂಗ್ರೆಸ್​ನ ನಾಯಕರು ಸಭೆಯಲ್ಲಿ ಭಾಗವಹಿಸಲು ಹೈದರಾಬಾದ್​ಗೆ ತೆರಳಿದ್ದಾರೆ. ಶುಕ್ರವಾರ ರಂಗಾರೆಡ್ಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್​, ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪ್ರಮುಖ ಶತ್ರು ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸಲು ಮುಂದಿನ ಎರಡು ದಿನಗಳಲ್ಲಿ ಸಿಡಬ್ಲ್ಯೂಸಿ ಸಭೆ ನಡೆಸಲಿದೆ ಎಂದು ಹೇಳಿದ್ದಾರೆ.

"ನಾವು ಹೈದರಾಬಾದ್​ನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತಿದ್ದೇವೆ. ಇದರಲ್ಲಿ ಮುಂಬರುವ ಚುನಾವಣೆಯ ಸಿದ್ಧತೆಗಳ ಬಗ್ಗೆ ಚರ್ಚಿಸಲಾಗುವುದು. ಸಭೆಗೆ 90 ಜನರನ್ನು ಆಹ್ವಾನಿಸಿದ್ದು, ಅದರಲ್ಲಿ 84 ಜನರು ಭಾಗವಹಿಸುತ್ತಾರೆ. ಸೆಪ್ಟೆಂಬರ್​ 17ರಂದು ವಿಸ್ತೃತ ಸಿಡಬ್ಲ್ಯೂಸಿ ಸಭೆಯನ್ನು ಸಹ ನಡೆಸಲಾಗುವುದು. ಮತ್ತು ಅದೇ ದಿನ ಸಾರ್ವಜನಿಕ ರ‍್ಯಾಲಿಯನ್ನು ಕೂಡ ಆಯೋಜಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.

"ವಿಸ್ತೃತ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಗೆ ನಾವು 159 ಜನರನ್ನು ಆಹ್ವಾನಿಸಿದ್ದು, ಅದರಲ್ಲಿ 149 ಜನರು ಸೆಪ್ಟೆಂಬರ್​ 17ರಂದು ಪಾಲ್ಗೊಳ್ಳಲಿದ್ದಾರೆ. ಅದೇ ದಿನ ನಾವು ವಿಜಯಭೇರಿ ಸಾರ್ವಜನಿಕ ಸಭೆ ಆಯೋಜಿಸುತ್ತೇವೆ. ಸೆಪ್ಟೆಂಬರ್​ 18ರಂದು ಸಂಸದರನ್ನು ಹೊರತುಪಡಿಸಿ, ನಮಗ್ಮ ನಾಯಕರು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಹೋಗಲಿದ್ದಾರೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಐದು ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್​ ಭರ್ಜರಿ ತಯಾರಿ... ಹೈದರಾಬಾದ್​​ನಲ್ಲಿ ಇಂದಿನಿಂದ ಕೈ ಸಿಡಬ್ಲ್ಯೂಸಿ ಮೀಟಿಂಗ್​

Last Updated : Sep 16, 2023, 1:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.