ETV Bharat / bharat

ಸಿನಿಮಾ ನಿರ್ದೇಶಕನಿಂದ ನಿರಂತರ ಅತ್ಯಾಚಾರ ಆರೋಪ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ - ಪುಣೆಯಲ್ಲಿ ನಟಿಯ ಮೇಲೆ ಅತ್ಯಾಚಾರ

ನಟಿಯೊಬ್ಬರ ಮೇಲೆ ಸಿನಿಮಾ ನಿರ್ದೇಶಕನೋರ್ವ 2017ರಿಂದಲೂ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Director Rapes Actress
Director Rapes Actress
author img

By

Published : Mar 30, 2022, 3:19 PM IST

ಪುಣೆ(ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯಲ್ಲಿ ನಿರ್ದೇಶಕನೋರ್ವ ನಟಿಯ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೇಲಿಂದ ಮೇಲೆ ಕಲಾವಿದೆ ಮೇಲೆ ಅತ್ಯಾಚಾರವೆಸಗಿರುವ ಕಾಮುಕ, ದುಷ್ಕೃತ್ಯದ ವಿಡಿಯೋ ಮಾಡಿ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಘಟನೆಯಿಂದ ಮನನೊಂದು ಯುವತಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

2017ರಿಂದಲೂ ನಿರಂತರವಾಗಿ ನಟಿಯ ಮೇಲೆ ಈ ಕೃತ್ಯ ನಡೆದಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಐದು ವರ್ಷಗಳ ಹಿಂದೆ ಪಾರ್ಟಿ ನೀಡುವ ನೆಪದಲ್ಲಿ ನಿರ್ದೇಶಕನೋರ್ವ ನಟಿಯನ್ನು ಸ್ನೇಹಿತನ ಫ್ಲ್ಯಾಟ್​ಗೆ ಕರೆಯಿಸಿಕೊಂಡಿದ್ದು, ಅತ್ಯಾಚಾರವೆಸಗಿದ್ದಾನೆ. ಇದರ ವಿಡಿಯೋ ಸೆರೆ ಹಿಡಿದಿದ್ದಾನೆ. ಇದಾದ ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ, ಮೇಲಿಂದ ಮೇಲೆ ದುಷ್ಕೃತ್ಯವೆಸಗಿದ್ದಾನೆ. ಇದೀಗ ಸಂತ್ರಸ್ತೆ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

21 ವರ್ಷದ ಯುವತಿ ಚಿತ್ರರಂಗದಲ್ಲಿ ಕಲಾವಿದೆಯಾಗಿ ಕೆಲಸ ಮಾಡ್ತಿದ್ದು, ಅಮಿತ್​ ಸಿತ್ಲಾನಿ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದಾರೆ. ಇಬ್ಬರ ನಡುವೆ ಪರಿಚಯವಾಗಿದೆ. 2017ರಲ್ಲಿ ಪುಣೆಯ ಟಿಂಗ್ರೆ ನಗರದಲ್ಲಿನ ಸ್ನೇಹಿತನ ಫ್ಲ್ಯಾಟ್​ಗೆ ಪಾರ್ಟಿ ನೀಡುವ ನೆಪದಲ್ಲಿ ನಟಿಯನ್ನು ಕರೆಯಿಸಿಕೊಂಡಿದ್ದಾನೆ. ಈ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಇದರ ವಿಡಿಯೋ ಮಾಡಿದ್ದು, ವೈರಲ್ ಮಾಡುವ ಬೆದರಿಕೆ ಹಾಕಿ ಮೇಲಿಂದ ಮೇಲೆ ದುಷ್ಕೃತ್ಯವೆಸಗಿದ್ದಾರೆ. ಪುಣೆಯ ವಿವಿಧ ಹೋಟೆಲ್​ಗಳಿಗೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ನಟಿಯ ಮೇಲೆ ಹಲ್ಲೆ ಸಹ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಿಂದ ಮೋದಿ ದೂರವಿರಬೇಕು, ಉಕ್ರೇನ್​ ಪರ ಭಾರತ ನಿಲ್ಲಬೇಕು: ಸುಬ್ರಮಣಿಯನ್ ಸ್ವಾಮಿ

ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಸಾವಿರಾರು ಫಾಲೋವರ್ಸ್​ ಇದ್ದು, ನಿನ್ನ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಅಂತಿಮವಾಗಿ ಯುವತಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.