ETV Bharat / bharat

ಪುಣೆ, ವಿಜಯವಾಡ, ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಸೌಲಭ್ಯ ಜಾರಿಗೆ

author img

By

Published : Feb 3, 2023, 12:41 PM IST

ಕೋಲ್ಕತ್ತಾ, ಪುಣೆ, ವಿಜಯವಾಡ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಸೌಲಭ್ಯ ಅಳವಡಿಸಲಾಗುತ್ತಿದೆ. ಇದು ಫೇಸ್​ ಐಡಿ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಇದು ಸಹಾಯಕವಾಗಲಿದೆ.

digi-yatra-to-be-implemented-at-kolkata-pune-vijayawada-and-hyderabad-airports-by-march

ನವದೆಹಲಿ: ಮಾರ್ಚ್ 2023 ರ ವೇಳೆಗೆ ಕೋಲ್ಕತ್ತಾ, ಪುಣೆ, ವಿಜಯವಾಡ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಸೌಲಭ್ಯ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ ಈಗಾಗಲೇ ಡಿಜಿ ಯಾತ್ರಾವನ್ನು ಡಿಸೆಂಬರ್ 1, 2022 ರಿಂದ ದೆಹಲಿ, ಬೆಂಗಳೂರು ಮತ್ತು ವಾರಾಣಸಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮುಖದ ಬಯೋಮೆಟ್ರಿಕ್‌ಗಳ ಆಧಾರದ ಮೇಲೆ ಕಾಂಟ್ಯಾಕ್ಟ್​ಲೆಸ್, ಪೇಪರ್‌ಲೆಸ್ ಚೆಕ್-ಇನ್ ಮತ್ತು ಬೋರ್ಡಿಂಗ್ ಪ್ರಕ್ರಿಯೆ ಆರಂಭವಾಗಿದೆ.

ಡಿಜಿ ಯಾತ್ರಾ ಯೋಜನೆಯು ನಾಗರಿಕ ವಿಮಾನಯಾನ ಸಚಿವಾಲಯ ಆರಂಭಿಸಿದ ಹೊಸ ಸೌಲಭ್ಯವಾಗಿದ್ದು, ಇದರ ಅಡಿಯಲ್ಲಿ ಫೇಸ್ ರಿಕಗ್ನಿಶನ್ ತಂತ್ರಜ್ಞಾನ (ಎಫ್‌ಆರ್‌ಟಿ) ಬಳಸಿಕೊಂಡು ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಗಾಗಿ ಪ್ರಾರಂಭಿಸಿರುವ ಉಪಕ್ರಮವಾಗಿದೆ. ಇದು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸುಗಮ ಮತ್ತು ತೊಂದರೆ ರಹಿತ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮಲ್ಟಿ ಟಚ್ ಪಾಯಿಂಟ್‌ಗಳಲ್ಲಿ ಟಿಕೆಟ್‌ಗಳು ಮತ್ತು ಐಡಿಗಳ ಪರಿಶೀಲನೆಯ ಅಗತ್ಯವನ್ನು ತೊಡೆದುಹಾಕುವ ಮೂಲಕ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ಮೂಲಕ ಉತ್ತಮ ಸೇವೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಸದ್ಯ ಈ ಯೋಜನೆಯು ಅನುಷ್ಠಾನ ಹಂತದಲ್ಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಡಿಜಿ ಯಾತ್ರಾ ಅನುಷ್ಠಾನದ ವೆಚ್ಚವನ್ನು ವಿಮಾನ ನಿಲ್ದಾಣದ ಆಪರೇಟರ್​ ಕಂಪನಿಯವರು ಭರಿಸುತ್ತಾರೆ. ಡಿಜಿ ಯಾತ್ರಾ ಅನುಷ್ಠಾನಕ್ಕೆ ಪ್ರತಿಕ್ರಿಯೆಯಾಗಿ, ನಾಗರಿಕ ವಿಮಾನಯಾನ ಸಚಿವಾಲಯವು ಯಾವುದೇ ಬಜೆಟ್ ಬೆಂಬಲ ನೀಡುವುದಿಲ್ಲ ಎಂದು ಹೇಳಲಾಗಿದೆ.

ಹೆಲ್ಙ್​ ಡೆಸ್ಕ್​ ಸ್ಥಾಪನೆ: ವಿಮಾನ ನಿಲ್ದಾಣ ನಿರ್ವಾಹಕರು ಮತ್ತು ಏರ್‌ಲೈನ್ ನಿರ್ವಾಹಕರು ಡಿಜಿಯಾತ್ರಾ ಬಗ್ಗೆ ವ್ಯಾಪಕ ಪ್ರಚಾರ ಮಾಡುತ್ತಿದ್ದು, ವಿಮಾನಗಳಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತಿದ್ದಾರೆ. ಇದಕ್ಕಾಗಿ ಹೆಲ್ಪ್​ ಡೆಸ್ಕ್​​ ಸ್ಥಾಪಸಲಾಗಿದೆ ಹಾಗೂ ಬ್ಯಾನರ್‌, ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನೂ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕೋಲ್ಕತ್ತಾ, ಪುಣೆ, ವಿಜಯವಾಡ ಮತ್ತು ವಾರಾಣಸಿ ವಿಮಾನ ನಿಲ್ದಾಣಗಳಲ್ಲಿ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆ ಅಳವಡಿಸುವ ಕೆಲಸವನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಪ್ರಾರಂಭಿಸಿದೆ.

ರಾಷ್ಟ್ರೀಯ ಸ್ಟಾರ್ಟ್ಅಪ್ ಚಾಲೆಂಜ್ ಮೂಲಕ ಡಿಜಿ ಯಾತ್ರಾ: ಅಟಲ್ ಇನ್ನೋವೇಶನ್ ಮಿಷನ್ ಅಡಿಯಲ್ಲಿ ನೀತಿ ಆಯೋಗ ನಡೆಸುತ್ತಿರುವ ರಾಷ್ಟ್ರೀಯ ಸ್ಟಾರ್ಟ್ಅಪ್ ಚಾಲೆಂಜ್ ಮೂಲಕ ಡಿಜಿ ಯಾತ್ರಾವನ್ನು ಆಯ್ಕೆ ಮಾಡಲಾಗಿದೆ. ಡಿಜಿ ಯಾತ್ರಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ತಡೆರಹಿತ ಮತ್ತು ಜಗಳ ಮುಕ್ತ ಅನುಭವವನ್ನು ಒದಗಿಸಲು ಸ್ವಯಂಪ್ರೇರಿತ ಸೌಲಭ್ಯವಾಗಿದೆ. ಡಿಜಿಯಾತ್ರಾ ಪ್ರಕ್ರಿಯೆಯಲ್ಲಿ ಪ್ರಯಾಣಿಕರಿಗೆ ಸಂಬಂಧಿಸಿದ ಅವರನ್ನು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯ (PII) ಕೇಂದ್ರೀಯ ಸಂಗ್ರಹಣೆ ಇರುವುದಿಲ್ಲ.

ಎಲ್ಲ ಪ್ರಯಾಣಿಕರ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಡೇಟಾವನ್ನು ಪ್ರಯಾಣಿಕರ ಸ್ಮಾರ್ಟ್‌ಫೋನ್‌ನ ವ್ಯಾಲೆಟ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಸೀಮಿತ ಅವಧಿಯವರೆಗೆ ಮಾತ್ರ ಪ್ರಯಾಣದ ಮೂಲ ವಿಮಾನ ನಿಲ್ದಾಣದೊಂದಿಗೆ ಶೇರ್ ಮಾಡಲಾಗಿರುತ್ತದೆ. ಅಲ್ಲಿ ಪ್ರಯಾಣಿಕರ ಡಿಜಿ ಯಾತ್ರಾ ಐಡಿಯನ್ನು ಮೌಲ್ಯೀಕರಿಸಬೇಕು.

ವಿಮಾನ ಯಾತ್ರೆಯ 24 ಗಂಟೆಗಳಲ್ಲಿ ಸಿಸ್ಟಮ್‌ನಿಂದ ಡೇಟಾವನ್ನು ತೆಗೆದುಹಾಕಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಡಿಜಿಯಾತ್ರಾ ಅನುಷ್ಠಾನದೊಂದಿಗೆ ಸೌಲಭ್ಯಗಳು ಎಫ್‌ಆರ್‌ಟಿ ಮೂಲಕ ಟಚ್‌ಲೆಸ್ ಪ್ರಯಾಣಿಕರ ಪರಿಶೀಲನೆಯನ್ನು ಒದಗಿಸುತ್ತವೆ. ಇದರಿಂದಾಗಿ ವಿಮಾನ ನಿಲ್ದಾಣದ ಪ್ರವೇಶ, ಭದ್ರತಾ ಏರಿಯಾ (ಎಸ್‌ಎಚ್‌ಎ) ಮತ್ತು ಸಿಐಎಸ್‌ಎಫ್ ಹಸ್ತಕ್ಷೇಪವಿಲ್ಲದೆ ಬೋರ್ಡಿಂಗ್ ಏರಿಯಾದಂತಹ ವಿವಿಧ ಟಚ್ ಪಾಯಿಂಟ್‌ಗಳಲ್ಲಿ ಸಮಯ ಉಳಿತಾಯವಾಗುತ್ತದೆ.

ಇದನ್ನೂ ಓದಿ: ಕೆಎಸ್‍ಐಐಡಿಸಿ ಅಧ್ಯಕ್ಷರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಪರಿವೀಕ್ಷಣೆ: ತಿಂಗಳಾಂತ್ಯಕ್ಕೆ ಪ್ರಧಾನಿಯಿಂದ ಉದ್ಘಾಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.